Verb - ಕ್ರಿಯಾಪದ


‘ಕ್ರಿಯೆ' ಅಂದರೆ ಕೆಲಸ, ಕೆಲಸವನ್ನು ತೋರಿಸುವ ಪದ ಕ್ರಿಯಾಪದ ಎಂಬುದು ಹಿಂದೆಯೇ ನಾವು ಅರ್ಥಮಾಡಿಕೊಂಡಿದ್ದೇವೆ. ಇದೇ ಪ್ರಕರಣದ ಬಗ್ಗೆ ಇನ್ನಷ್ಟು ಹೆಚ್ಚು ವಿಚಾರ ತಿಳಿಯೋಣ.

Verb denotes the work. The word showing the work, in a sentence is the verb. We have already learnt a little of this already. Let us try to know much more of this.

(1) ಕ್ರಿಯಾಪದದಲ್ಲಿ ವಿಧಗಳು (Kinds in the Verb)

ಕ್ರಿಯಾಪದ Verb

1. ಸಕರ್ಮಕ (ಕರ್ಮಪದ ಸಹಿತ) 2. ಅಕರ್ಮಕ (ಕರ್ಮಪದ ರಹಿತ)

1. Transitive verb (with the subject) 2. Intransitive verb (without the subject)

ಕ್ರಿಯಾಪದದಲ್ಲಿ ಮುಖ್ಯವಾಗಿ ಎರಡು ವಿಧಗಳು

1. ಸಕರ್ಮಕ  2.ಅಕರ್ಮಕ

There are mainly two kinds of verbs

1. Transitive and 2. Intransitive verbs.

ವಾಕ್ಯದಲ್ಲಿ ಕರ್ಮಪದ ಇರುವ ಕ್ರಿಯಾಪದವು ಸಕರ್ಮಕ ಕ್ರಿಯಾ ಪದ ಎನಿಸಿರುತ್ತದೆ.

ಉದಾಹರಣೆ:

ರಾಮನು ಹಣ್ಣನ್ನು ತಿನ್ನುತ್ತಾನೆ.

ಶ್ರೀರಾಮನು ರಾವಣೇಶ್ವರನನ್ನು ಕೊಂದನು.

ಮೇಲಿನ ಎರಡೂ ವಾಕ್ಯಗಳಲ್ಲಿ ಕ್ರಿಯಾಪದದೊಂದಿಗೆ ಕ್ರಮವಾಗಿ ಹಣ್ಣನ್ನು, ರಾವಣೇಶ್ವರನನ್ನು ಎಂಬ ಕರ್ಮಪದಗಳು ಬಂದಿವೆ. ಆದ್ದರಿಂದಲೇ ಈ ಕ್ರಿಯಾಪದಗಳು ಸಕರ್ಮಕ ಕ್ರಿಯಾಪದಗಳು ಎನಿಸಿವೆ.

Transitive verb takes an object, when, in a sentence, if there is the object, such verb is called Transitive Verb.

Example:

Rama ate a fruit.

Sri Rama killed Ravaneswara.

In the above stated sentences 'fruit' and 'Ravaneswara' are objects. In both the sentences, the verb, ‘ate' and ‘killed' have the objects 'fruit' and 'Ravaneswara' regularly. So these verbs are called Transitive Verbs.

ವಾಕ್ಯದಲ್ಲಿ ಕ್ರಿಯಾ ಪದಗಳು ಕರ್ಮಪದವನ್ನು ಹೊಂದಿರದಿದ್ದರೆ, ಅಂತಹ ಕ್ರಿಯಾಪದಗಳು ಅಕರ್ಮಕ  (ಕರ್ಮಪದಇಲ್ಲದ) ಎನಿಸಿರುತ್ತದೆ.

ಉದಾಹರಣೆ:

ರಾಮನು ವೇಗವಾಗಿ ಓಡಿದನು.

ತಂದೆಯವರು ಪೇಟೆಯಿಂದ ಬಂದರು.

ಮೇಲಿನ ವಾಕ್ಯಗಳಲ್ಲಿ ‘ಓಡಿದನು, ಬಂದರು' ಎಂಬ ಪದಗಳು ಕ್ರಿಯಾಪದಗಳಾಗಿವೆ. ಆದರೆ ಕರ್ಮಪದ ಬಾರದಿರುವುದರಿಂದ ಅಕರ್ಮಕ ಕ್ರಿಯಾಪದ (ಕರ್ಮಪದವಿಲ್ಲದ) ಎನಿಸಿವೆ.

When in a sentence, if there is no object, then such verbs, in a sentence are called Intransitive Verbs.

Example:

Rama ran fastly.

Father came from the bazar.

In the above said sentences, the words ‘run' and 'came' are verbs. But, no objects, we find in the above sentences such verbs are considered as Intransitive Verbs.

(2) ಧಾತುರೂಪ

ನಾಮಪ್ರಕೃತಿಯ ಬಗ್ಗೆ ನಾವು ಈಗಾಗಲೇ ತಿಳಿದಿದ್ದೇವೆ. ಇದು ನಾಮಪದಕ್ಕೆ ಸಂಬಂಧಿಸಿದುದಾಗಿದೆ. ಹಾಗೆಯೇ ಕ್ರಿಯಾರ್ಥವನ್ನು ಕೊಡುವ ಪ್ರತ್ಯಯವನ್ನು ಹೊಂದಿರುವ ಶಬ್ದಕ್ಕೆ ಕ್ರಿಯಾಪ್ರಕೃತಿ ಅಥವಾ ಧಾತು ಅನ್ನುವರು.

ಉದಾಹರಣೆ :

ಓದಿದನು, ಓದುವನು, ಓದಿಯಾನು, ಓದಲಿ, ಓದನು ಇತ್ಯಾದಿ.

ಮೇಲಿನ ಪದಗಳಲ್ಲಿ ‘ಓದು' ಮುಖ್ಯಕ್ರಿಯಾಪದ. ಇದನ್ನೇ ಮೂಲಧಾತು ಎನ್ನಬಹುದು.

ತಿನ್ನು, ಕುಡಿ, ಓಡು, ಮಾಡು, ಕೇಳು, ಕೊಡು ಇಂತಹ ಕ್ರಿಯೆಗಳೆಲ್ಲವೂ ಮೂಲಧಾತುಗಳೇ ಆಗಿವೆ.

We have already learned a little about ನಾಮಪ್ರಕೃತಿ, Let us now try to know of ಕ್ರಿಯಾಪ್ರಕೃತಿ.

The basis of the verb-word, is called ಧಾತು or ಕ್ರಿಯಾಪ್ರಕೃತಿ.

Example:

to eat, to come, to drink, to die, to live etc.

 





(3) ಕಾಲಗಳು - Tenses

ಹಲವು ಮೂಲ ಧಾತುಗಳಿಗೆ ಪ್ರತ್ಯಯಗಳನ್ನು ಸೇರಿಸಿದಾಗ 'ಕಾಲ' ಆಗುವುದು.

ಕಾಲಗಳು ಮುಖ್ಯವಾಗಿ 3 (ಮೂರು)

1. ವರ್ತಮಾನಕಾಲ 2. ಭೂತಕಾಲ 3. ಭವಿಷ್ಯತ್ಕಾಲ

To the basis of the verbs, certain suffixes are added. Then they are called Tenses.

ಕ್ರಿಯೆಯಲ್ಲಿ ಕಾಲವು ಈಗ ನಡೆಯುತ್ತಿರುವಂತೆ ತೋರಿಸಿದಾಗ, ವರ್ತಮಾನ ಕಾಲ ಆಗುವುದು.

ಉದಾಹರಣೆ:

ರಾಮನು ಓಡುತ್ತಾನೆ.

ರಾಧೆ ಓದುತ್ತಾಳೆ.

ಸಚಿನ್ ಆಡುತ್ತಾನೆ.

ಜಾನಕಿ ಹಾಡುತ್ತಾಳೆ.

ಮೇಲಿನ ವಾಕ್ಯಗಳಲ್ಲಿ ಓಡುತ್ತಾನೆ, ಓದುತ್ತಾಳೆ, ಆಡುತ್ತಾನೆ, ಹಾಡುತ್ತಾಳೆ

ಈ ಪದಗಳು ಕ್ರಿಯಾಪದಗಳಾಗಿವೆ. ಕ್ರಿಯೆಗಳಲ್ಲಿ ಕಾರ್ಯವು ಈಗ ತಾನೇ ನಡೆಯುತ್ತಿರುವುದನ್ನು ಸೂಚಿಸುತ್ತಿರುವುದರಿಂದ ವರ್ತಮಾನಕಾಲ ಎನಿಸಿವೆ.

In the sentences, if the tense denotes its work just commencing, then it is called Present Tense.

Example:

Rama reads.

Radha runs.

Sachin plays.

Janaki sings.

In the above stated sentences, ‘runs', 'reads', 'plays', sings'- all the four words are the verbs. The tense in the verb, are in the Present Tense. Because the work of the verb has just commenced.

ಈ ಉದಾಹರಣೆಗಳನ್ನು ನೋಡಿ:

ರಾಮನು ಪಾಠವನ್ನು ಓದಿದನು.

ಸೀತೆಯು ಹಾಡನ್ನು ಹಾಡಿದಳು.

ಗೋಪಾಲ ಬಂದನು.

ಸೀತೆ ತಿಂದಳು.

ಮೇಲಿನ ವಾಕ್ಯಗಳಲ್ಲಿ ಓದಿದನು, ಹಾಡಿದಳು, ಬಂದನು, ತಿಂದಳು ಇವು ನಾಲ್ಕೂ ಪದಗಳೂ ಭೂತಕಾಲ ಕ್ರಿಯಾಪದಗಳಾಗಿವೆ. ಏಕೆಂದರೆ ಕ್ರಿಯೆಯ ಕೆಲಸವು ಈ ವಾಕ್ಯಗಳಲ್ಲಿ ಮುಗಿದು ಹೋಗಿರುವುದನ್ನು ಸೂಚಿಸುತ್ತವೆ:

Look at these examples:

Gopal came.

Rama read the lesson.

Sita sang the song.

Seetha ate.

In the above said sentences ‘read', 'sang', 'came' and 'ate all the four words are the verbs. They denote the work in the verb, is over. So they are in the Past Tense.

ರಾಮನು ಪಾಠವನ್ನು ಓದುವನು.

ಸೀತೆಯು ಹಾಡನ್ನು ಹಾಡುವರು.

ಗೋಪಾಲನು ಬರುವನು.

ಸೀತೆಯು ತಿನ್ನುವಳು.

ಮೇಲಿನ ವಾಕ್ಯಗಳಲ್ಲಿ  ‘ಓದುವನು, ಹಾಡುವಳು, ಬರುವನು, ತಿನ್ನುವಳು' ಈ ನಾಲ್ಲೂ ಕ್ರಿಯಾಪದಗಳೂ ಭವಿಷತ್ಕಾಲದಲ್ಲಿ ಇವೆ.

ಏಕೆಂದರೆ ಕ್ರಿಯೆಯು ಈ ವಾಕ್ಯಗಳಲ್ಲಿ ಇನ್ನೂ ಪ್ರಾರಂಭವೇ ಆಗಿಲ್ಲ. ಮುಂದೆ ಅಂದರೆ ಭವಿಷ್ಯದಲ್ಲಿ ಆಗುವುದರಲ್ಲಿದೆ. ಆದ್ದರಿಂದ ಇಂತಹ ಕಾಲವನ್ನು ಭವಿಷತ್ಕಾಲ ಎನ್ನುವರು.

Rama will read the lesson.

Seetha will sing the song.

Gopal will come.

Seetha will eat.

In the above said sentences, 'will read, will sing, will come, will eat’ are the verbs in Future Tense. Because the work in the verb, has not even started. It is about to start in future. So such tenses are called Future Tense.

ವರ್ತಮಾನದ ಕಾಲದಲ್ಲಿನ ಇನ್ನಿತರ ಉದಾಹರಣೆಗಳು

Some More examples of Present Tense:

That boy talks. -  ಆ ಹುಡುಗನು ಮಾತಾಡುತ್ತಾನೆ.

He takes the book. -  ಅವನು ಪುಸ್ತಕವನ್ನು ತೆಗೆದುಕೊಳ್ಳುತ್ತಾನೆ.

Janaki sees. -  ಜಾನಕಿ ನೋಡುತ್ತಾಳೆ.

Mohan brings. - ಮೋಹನ ತರುತ್ತಾನೆ.

ಭೂತಕಾಲದಲ್ಲಿನ ಇನ್ನೂ ಹಲವು ಉದಾಹರಣೆಗಳು

Some more examples for the Past Tense:

ಆ ಹುಡುಗ ಮಾತಾಡಿದನು.

ಅವನು ಪುಸ್ತಕವನ್ನು ತೆಗೆದುಕೊಂಡನು.

ಜಾನಕಿ ನೋಡಿದಳು

ಮೋಹನ ತಂದನು.

ಭವಿಷತ್ಕಾಲದಲ್ಲಿನ ಇನ್ನೂ ಹಲವು ಉದಾಹರಣೆಗಳು

Some more examples in Future Tense:

Rama will come tomorrow. -ರಾಮನು ನಾಳೆ ಬರುವನು

Raju will read the lesson. - ರಾಜುವು ಪಾಠ ಓದುವನು.

Seetha will sing the song. - ಸೀತೆಯು ಹಾಡು ಹಾಡುವಳು.

Geetha will eat the fruit. - ಗೀತೆಯು ಹಣ್ಣು ತಿನ್ನುವಳು.




Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...