Nouns - ನಾಮ ಪದಗಳು


4. ನಾಮಪದಗಳು - Nouns 

ಯಾವುದೇ ವಸ್ತುವಿನ, ಪ್ರಾಣಿಯ, ಸ್ಥಳದ, ವ್ಯಕ್ತಿಯ ಹೆಸರನ್ನುತಿಳಿಸುವ ಪದ ನಾಮಪದ ಆಗಿರುತ್ತದೆ ಎಂಬ ವಿಷಯವನ್ನು ಈಗಾಗಲೇ ನಾವು ತಿಳಿದುಕೊಂಡಿದ್ದೇವೆ.

ಈಗ ನಾಮಪದದ ವಿಚಾರವಾಗಿ ಇನ್ನಷ್ಟು ವಿವರವಾಗಿ ತಿಳಿಯೋಣ.

We are known of the Noun that it is the name of any person, place or thing. Let us learn some more of it in detail now.

(1) ಬಗೆಗಳು - Kinds

ನಾಮಪದಗಳಲ್ಲೂ ವಿವಿಧ ಬಗೆಗಳಿವೆ. ವಿವಿಧ ರೂಪದ ಹೆಸರುಗಳನ್ನು ನಾಮಪದವು ಒಳಗೊಂಡಿರುವುದರಿಂದ, ಸುಲಭೀಕರಣದ ದೃಷ್ಟಿಯಿಂದ, ಅಂತಹ ಹೆಸರುಗಳನ್ನು ವಿವಿಧ ರೀತಿಯಲ್ಲಿ ವಿಂಗಡಿಸಲಾಗಿದೆ.

Even in Noun, there are several kinds of names. Accordingly these names are divided into many kinds, to make easy in knowing of noun.

ನಾಮಪದ

ನಾಮಪದದಲ್ಲಿಮುಖ್ಯವಾಗಿ 5 (ಐದು) ವಿಧಗಳಿವೆ.

1. ರೂಢನಾಮ 2. ಅಂಕಿತನಾಮ 3. ಸಮೂಹವಾಚಕ ನಾಮಪದ  4. ಲೋಹ-ವಾಚಕ ನಾಮಪದ  5. ಭಾವನಾಮ

Mainly there are 5 (five) kinds of Nouns.

1. Common Noun

2. Proper Noun

3. Collective Noun

4. Material Noun and

5. Abstract Noun.

 (1) ರೂಢನಾಮ - Common Noun:

ರೂಢಿಯಲ್ಲಿ ಹೇಳುವ ಹೆಸರುಗಳನ್ನು ರೂಢನಾಮ ಎನ್ನುವರು.

ಉದಾಹರಣೆ:

ಬೆಕ್ಕು, ಬುಕ್ಕು, ಮೇಜು, ಪೆನ್ನು, ಚೆಂಡುಮೊದಲಾದವು.

Common noun is the name of any person, place, animal or thing.

Example:

cat, book, table, pen, ball etc.

 2) ಅಂಕಿತನಾಮ - Proper Noun

ನಿರ್ದಿಷ್ಟ ಇಲ್ಲವೇ ಗೊತ್ತಾದ ರೀತಿಯ ಹೆಸರುಗಳನ್ನು ತಿಳಿಸುವ ಪದಗಳು ಅಂಕಿತನಾಮ ಎನಿಸುವುವು.

ಉದಾಹರಣೆ: ಶ್ರೀರಾಮ, ಹಿಮಾಲಯ, ಬೈಬಲ್, ಗಂಗಾನದಿ, ಲಾಲ್‌ಬಾಗ್‌ ಇತ್ಯಾದಿ.

ಮೇಲಿನ ನಾಮಪದಗಳು ನಮಗೆ ತಿಳಿದಿರುವ ಗೊತ್ತಾದ ಹೆಸರುಗಳನ್ನು ತಿಳಿಸುವುದರಿಂದ ಅಂಕಿತನಾಮ ಆಗಿವೆ.

The proper noun is the particular name of any person, place or thing.

Example:

Sri Rama, Himalaya, Bible, River Ganga, Lalbagh etc.

The above stated names are all the particular names given by us. So they are considered as Proper Nouns.

(3) ಸಮೂಹವಾಚಕ ನಾಮಪದ - Collective Noun

ಹಲವು ನಾಮಪದಗಳು ಸಮೂಹವಾಚಕ ರೀತಿಯಲ್ಲಿ ಬರುವುದೂ ಉಂಟು. ಇಂತಹ ನಾಮಪದಗಳನ್ನು ಸಮೂಹವಾಚಕ ನಾಮಪದಗಳು ಎಂದು ಪರಿಗಣಿಸಲಾಗಿದೆ.

ಉದಾಹರಣೆ:

ಗೊಂಚಲು, ದನ, ಸೈನ್ಯ, ನೌಕಾದಳ, ಗುಂಪು ಇತ್ಯಾದಿ.

ಮೇಲಿನ ನಾಮಪದಗಳು ಸಮೂಹ ರೂಪದಲ್ಲಿರುವುದರಿಂದ ಸಮೂಹವಾಚಕ ನಾಮಪದಗಳೆನಿಸಿವೆ.

Example:

Branches, bunches, crowd, gang, cattle, army, navy, herd etc.

The above stated words are considered as the whole and treated as one. So they are called Collective Nouns.

(4) ಲೋಹವಾಚಕ ನಾಮಪದ - Material Noun

ಲೋಹಗಳ ಹೆಸರನ್ನು ತಿಳಿಸುವ ನಾಮಪದಗಳನ್ನು ಲೋಹವಾಚಕ ನಾಮಪದಗಳು ಎನ್ನಲಾಗುವುದು.

ಉದಾಹರಣೆ:

ಚಿನ್ನದ ಸರ, ಬೆಳ್ಳಿಯ ಲೋಟ, ಸ್ಟೀಲ್ ಪಾತ್ರೆ ಇತ್ಯಾದಿ. ಮೇಲಿನ ಪದಗಳಲ್ಲಿ ಬರುವ ಚಿನ್ನ, ಬೆಳ್ಳಿ, ಕಬ್ಬಿಣ ಇವು ಲೋಹವಾಚಕ ಎನಿಸಿರುವುದರಿಂದ ಲೋಹವಾಚಕ ನಾಮಪದಗಳಾಗಿವೆ

The names relating to metals are called Material Noun.

Example:

Gold ring, silver cup, steel vessel. In the above stated words, gold, silver, steel are all the names of metals. So they are called as Material Nouns.

 (5) ಭಾವನಾಮ - Abstract Noun

ಭಾವನೆ (feeling)ಯ ಅಂತರ್ಗತವಾಗಿ ಬರುವ ನಾಮಪದಗಳೆಲ್ಲವನ್ನೂ ಭಾವನಾಮ ಎನ್ನುವರು.

ಉದಾಹರಣೆ:

ಯೌವನ, ಮುಪ್ಪು, ಕ್ರೌರ್ಯ, ಕೇಡು, ದೇವರು, ಧೈರ್ಯ, ದುಃಖ ಮೊದಲಾದವು.

ಭಾವನಾಮದ ಹೆಸರುಗಳನ್ನು ಕಣ್ಣಿನಿಂದ ನೋಡಲು ಆಗುವುದಿಲ್ಲ, ಕೈಗಳಿಂದ ಮುಟ್ಟಲೂ ಸಾಧ್ಯವಿಲ್ಲ. ಕೇವಲ ಭಾವನೆಯ ರೂಪದಲ್ಲಿ ಮಾತ್ರ ಗ್ರಹಿಸಬಹುದು. ಆದ್ದರಿಂದಲೇ ಇವನ್ನು ಭಾವನಾಮ ಎನ್ನಲಾಗುವುದು.

The abstract noun is the name of quality, state or action.

Example:

youth, oldage, cruelty, wickedness, god, bravery, sorrow etc.

These names, we can neither look or touch. We can only guess by feeling. So they are called Abstract Nouns.

ಅಭ್ಯಾಸ - Exercise

1. ನಾಮಪದದಲ್ಲಿ ಎಷ್ಟು ವಿಧಯಾವುವುಹೆಸರಿಸಿ.

2. ರೂಢನಾಮ ಅಂದರೇನುಉದಾಹರಣೆ ಕೊಡಿ.

3. ಅಂಕಿತನಾಮ ಅಂದರೇನುಉದಾಹರಣೆ ಕೊಡಿ.

4. ರೂಢನಾಮಅಂಕಿತನಾಮಗಳಿಗೆ ಇರುವ ಭೇದ ಏನುಉದಾಹರಣೆಗಳ ಮೂಲಕ ಸಮರ್ಥಿಸಿ.

5. ಸಮೂಹವಾಚಕ ನಾಮಪದದ ವಿಶೇಷತೆ ಏನು?

6. ಲೋಹವಾಚಕ ನಾಮಪದ ಅಂದರೇನುಉದಾಹರಣೆ ಕೊಡಿ.

7. ಭಾವನಾಮದ ವೈಶಿಷ್ಟತೆಯನ್ನು ತಿಳಿಸಿ.

 

(2) ವಚನಗಳು - Numbers

ಸಂಸ್ಕೃತದಲ್ಲಿಏಕವಚನ, ದ್ವಿವಚನ, ಬಹುವಚನಎಂಬಮೂರುಭೇದಗಳಿವೆ, ಇಂಗ್ಲೀಷ್ವ್ಯಾಕರಣದಲ್ಲಿರುವಂತೆಕನ್ನಡದಲ್ಲಿಯೂಕೇವಲ 2 (ಎರಡು) ವಚನಗಳಿವೆ

ವಚನಗಳು - Numbers

1. ಏಕವಚನ (Singular) (ಒಬ್ಬನುಒಬ್ಬಳುಒಂದು ಎಂಬ ಅರ್ಥದಲ್ಲಿ ಬಂದಾಗ) denotes one

2. ಬಹುವಚನ (Plural) (ಒಂದಕ್ಕಿಂತ ಹೆಚ್ಚು ಎಂಬ ಅರ್ಥದಲ್ಲಿ ಪದಗಳು ಬಂದಾಗ) denotes more than one

ಒಂದು ಎಂಬ ಅರ್ಥದಲ್ಲಿ ನಾಮಪದಗಳು ಬಂದಾಗ ಏಕವಚನ ಎನಿಸುವುದು.

ಉದಾಹರಣೆ :

ಪುಸ್ತಕಮನುಷ್ಯಹೆಂಗಸುಛತ್ರಿಬೆಕ್.

Nouns denoting one in number are called Singular.

Example:

book, man, woman, umbrella, cat etc.

ಒಂದಕ್ಕಿಂತಲೂ ಹೆಚ್ಚು ಎಂಬ ಅರ್ಥದಲ್ಲಿ ಬರುವ ನಾಮಪದಗಳು ಬಹುವಚನ ಎನಿಸುವುವು.

ಉದಾಹರಣೆ:

ಪುಸ್ತಕಗಳು, ಮನುಷ್ಯರು, ಹೆಂಗಸರು, ಛತ್ರಿಗಳು, ಬೆಕ್ಕುಗಳು ಇತ್ಯಾದಿ.

Nouns denoting more than one in number are called Plural.

Example:

books, men, women, umbrellas, cats etc.

 ವಚನಪರಿವರ್ತನೆಯ ವಿಧಾನ - Changing Singular into Plural

1.ಪುಲ್ಲಿಂಗ ಏಕವಚನದ ಮುಂದೆ 'ರು' ಪ್ರತ್ಯಯವನ್ನು ಸೇರಿಸಿದಾಗ

 By adding suffix 'ರು' to the singulars.

Example - ಉದಾಹರಣೆ:

ಹುಡುಗ-ಹುಡುಗರು, ಮುದುಕ-ಮುದುಕರು,

ಮನುಷ್ಯ-ಮನುಷ್ಯರು, ಯುವಕ-ಯುವಕರು,

ಬಾಲಕ-ಬಾಲಕರು, ನಾಯಕ-ನಾಯಕರು, ಹಿರಿಯ-ಹಿರಿಯರು,

ಕಿರಿಯ-ಕಿರಿಯರು, ಇತ್ಯಾದಿ.

2. ಪುಲ್ಲಿಂಗ ಏಕವಚನದ ಮುಂದೆ ‘ಅಂದಿರು' ಪ್ರತ್ಯಯವನ್ನು ಸೇರಿಸುವುದರ ಮೂಲಕ

By adding 'ಅಂದಿರು' to the nouns in Singular.

ಉದಾಹರಣೆಗಳು - Examples:

ಅಣ್ಣ- ಅಣ್ಣಂದಿರು, ತಮ್ಮ- ತಮ್ಮಂದಿರು, ಮಾವ- ಮಾವಂದಿರು,

ಭಾವ-ಭಾವಂದಿರು, ತಾತ-ತಾತಂದಿರು, ಅಜ್ಜ-ಅಜ್ಜಂದಿರು.

 3. ಪುಲ್ಲಿಂಗ ಏಕವಚನ ನಾಮಪದಗಳ ಮುಂದೆ 'ಗಳು' ಪ್ರತ್ಯಯವನ್ನು ಸೇರಿಸುವುದರ ಮೂಲಕ (ನಪುಂಸಕಲಿಂಗ ಶಬ್ದಗಳಿಗೆ ಮಾತ್ರ ಅನ್ವಯಿಸುತ್ತದೆ.)

 By adding 'ಗಳು' to the Singular in common gender.

ಉದಾಹರಣೆಗಳು - Examples:

ದನ-ದನಗಳು, ಮರ-ಮರಗಳು, ಹಸ-ಹಸುಗಳು,

ಪುಸ್ತಕ-ಪುಸ್ತಕಗಳು, ಹುಲಿ-ಹುಲಿಗಳು, ಒಡವೆ-ಒಡವೆಗಳು

 4. ಸ್ತ್ರೀಲಿಂಗ ಏಕವಚನ ಶಬ್ದಗಳ ಮುಂದೆ 'ಯರು' ಪ್ರತ್ಯಯವನ್ನು ಸೇರಿಸುವುದರ ಮೂಲಕ

 By adding 'ಯರು' to the nouns in Feminine Gender.

ಉದಾಹರಣೆಗಳು - Examples:

ಬಾಲಕಿ-ಬಾಲಕಿಯರು, ಹುಡುಗಿ-ಹುಡುಗಿಯರು, ಲೇಖಕಿ-ಲೇಖಕಿಯರು,

ಮಾಟಗಾತಿ-ಮಾಟಗಾತಿಯರು, ಗಾಯಕಿ-ಗಾಯಕಿಯರು, ಓಟಗಾತಿ-ಓಟಗಾತಿಯರು.

5. ವಿಕಲ್ಪರೂಪದಲ್ಲಿ in reverse

ಮಗು-ಮಕ್ಕಳು

 (3) ಲಿಂಗ - Gender

ಸಾಮಾನ್ಯವಾಗಿ ಕನ್ನಡ ವ್ಯಾಕರಣಾನುಸಾರ ಬರುವ ಲಿಂಗಗಳು 3 (ಮೂರು)

1. ಪುಲ್ಲಿಂಗ - Masuline Gender

2. ಸ್ತ್ರೀಲಿಂಗ – Femine Gender

3. ನಪುಂಸಕಲಿ





 

ಗುಣವಾಚಕ ಪದಗಳು ಮೂರೂ ಲಿಂಗಗಳಲ್ಲಿ - Adjectives in all three Numbers


ಪುಲ್ಲಿಂಗ

ಸ್ತ್ರೀಲಿಂಗ

ನಪುಂಸಕಲಿಂಗ

ಒಳ್ಳೆಯವನು

ಒಳ್ಳೆಯವಳು

ಒಳ್ಳೆಯದು

ಸುಂದರನು

ಸುಂದರಳು

ಸುಂದರವಾದ

ಹೊಸಬನು

ಹೊಸಬಳು

ಹೊಸದು

ಸತ್ಯವಂತನು

ಸತ್ಯವಂತಳು

ಸತ್ಯವಾದವು

ಚಿಕ್ಕವನು

ಚಿಕ್ಕವಳು

ಚಿಕ್ಕದು

ಎಳೆಯನು

ಎಳೆಯಳು

ಎಳೆಯದು

ಹಿರಿಯನು

ಹಿರಿಯಳು

ಹಿರಿದು

ಕಿರಿಯನು

ಕಿರಿಯಳು

ಕಿರಿಯದು

ಹಳಬನು

ಹಳಬಳು

ಹಳೆಯದು

 

ಮೂರೂ ಲಿಂಗಗಳಲ್ಲಿ ಸರ್ವನಾಮದ ಬದಲಾವಣೆ - Pronouns changing in three Genders

ಪುಲ್ಲಿಂಗ

ಸ್ತ್ರೀಲಿಂಗ

ನಪುಂಸಕಲಿಂಗ

ನಾನು

ನಾನು

ನಾನು

ನಾವು

ನಾವು

ನಾವು

ನೀನು

ನೀನು

ನೀನು

ನೀವು

ನೀವು

ನೀವು

ಅವನು

ಅವಳು

ಅವರು

ಅವರು

ಅವರು

ಅವು

ಇವನು

ಇವಳು

ಇದು

ಇವರು

ಇವರು

ಇವು

ತಾನು

ತಾನು

ತಾನು

ಯಾವನು

ಯಾವಳು

ಯಾವುದು

 

ಸಂಖ್ಯಾವಾಚಕ ಶಬ್ದಗಳು ಮೂರೂ ಲಿಂಗಗಳಲ್ಲಿ ಪರಿವರ್ತಿಸುವ ಬಗೆ

ಪುಲ್ಲಿಂಗ

ಸ್ತ್ರೀಲಿಂಗ

ನಪುಂಸಕಲಿಂಗ

ಒಬ್ಬನು

ಒಬ್ಬಳು

ಒಂದು

ಇಬ್ಬರು

ಇಬ್ಬರು

ಎರಡು

ಮೂವರು

ಮೂವರು

ಮೂರು

ನಾಲ್ವರು

ನಾಲ್ವರು

ನಾಲ್ಕು

ಐವರು

ಐವರು

ಐದು

ಆರು ಮಂದಿ

ಆರು ಮಂದಿ

ಆರು

 

ಲಿಂಗಪರಿವರ್ತನೆಯರೀತಿ - Changing Masculine into Feminine

1. ಹಲವೊಂದು ಅಕಾರಾಂತ ಶಬ್ದಗಳನ್ನು ಇಕಾರಾಂತವಾಗಿ ಮಾಡುವುದರಿಂದ

ಉದಾಹರಣೆಗಳು - Examples:

ಹುಡುಗ - ಹುಡುಗಿ, ಲೇಖಕ-ಲೇಖಕಿ, ನಾಯಕ - ನಾಯಕಿ

ಬಾಲಕ – ಬಾಲಕಿ, ವಿದೂಷಕ - ವಿದೂಷಕಿ, ದಡ್ಡ - ದಡ್ಡಿ

ಹೆಡ್ಡ – ಹೆಡ್ಡಿ, ಮೂಗ– ಮೂಗಿ, ಮುದುಕ– ಮುದುಕಿ, ಒಡಯ – ಒಡತಿ

Some words in Masculine ending with '' becomes '' while changing into Feminine.

Examples: as stated above.

2. ಅಕಾರಾಂತ ಪುಲ್ಲಿಂಗ ಶಬ್ದಗಳನ್ನು ಎಕಾರಾಂತವಾಗಿ ಮಾಡುವುದರ ಮೂಲಕ:-

ಉದಾಹರಣೆಗಳು - Examples:

ಬುದ್ದಿವಂತ -ಬುದ್ಧಿವಂತೆ

ಗುಣವಂತ -ಗುಣವಂತೆ

ಜಾಣ- ಜಾಣೆ,

ವಿದ್ಯಾವಂತ - ವಿದ್ಯಾವಂತೆ

Words ending with '' in Masculine become '' while changing into Feminine.

Example: as stated above.

3. ವಿಕಿರೂಪದಲ್ಲಿ In reverse method

ತಾಯಿ-ತಂದೆ, ಹೊತ– ಮೇಕೆ, ಟಗರು – ಕುರಿ

ಮಗ – ಮಗಳು, ಮಾವ - ಅತ್ತೆ, ಭಾವ -ಅತ್ತಿಗೆ

(4) ವಿಭಕ್ತಿ Case

ನಾಮಪದದ ಮೂಲರೂಪವನ್ನು ನಾಮಪ್ರಕೃತಿ ಎಂದು ಕರೆಯುತ್ತಾರೆ. ಇದನ್ನು ನಾವು ವಿವಿಧ ರೀತಿಗಳಲ್ಲಿ ಉಪಯೋಗಿಸುತ್ತಿರುತ್ತೇವೆ.

ಉದಾಹರಣೆ:

ರಾಮನು, ರಾಮನನ್ನು, ರಾಮನಿಗೆ, ರಾಮನಿಂದ, ರಾಮನಲ್ಲಿ.

ಈ ಪದಗಳಲ್ಲಿ ಒಂದೊಂದೂ ಸಹಕ್ರಿಯೆಗೆ ನೆರವು ನೀಡುತ್ತದೆ. ಇದನ್ನೇ ವಿಭಕ್ತಿ (Case) ಎನ್ನುವರು.

ವಾಕ್ಯದಲ್ಲಿ ನಾಮಪ್ರಕೃತಿಗಳಿಗೆ ಇರುವ ಸಂಬಂಧವನ್ನು ತಿಳಿಸಲು, ಸೇರಿಸದ ಪ್ರತ್ಯಯಗಳು ವಿಭಕ್ತಿ ಪ್ರತ್ಯಯ ಎನಿಸುವುವು.

The basis of the noun is called ನಾಮಪ್ರಕೃತಿ. We use this form in several shapes.

Example:

Rama, to Rama, from Rama, in Rama, on Rama.

In the above words each and every ನಾಮಪ್ರಕೃತಿ helps the verb. This is called Case (ವಿಭಕ್ತಿ).

In a sentence, to denote the relation with ನಾಮಪ್ರಕೃತಿ, certain fixes are used. These are called ವಿಭಕ್ತಿ ಪ್ರತ್ಯಯ.

ವಿಭಕ್ತಿ ಪ್ರತ್ಯಯ

ವಿಭಕ್ತಿ ಪ್ರತ್ಯಯಗಳು 7 (ಏಳು)

Such suffixes are seven in Kannada Grammar.

1. ಪ್ರಥಮಾ ವಿಭಕ್ತಿ

2. ದ್ವಿತೀಯಾ ವಿಭಕ್ತಿ

3. ತೃತೀಯಾ ವಿಭಕ್ತಿ

4. ಚತುರ್ಥಿ ವಿಭಕ್ತಿ

5. ಪಂಚಮೀ ವಿಭಕ್ತಿ

6. ಷಷ್ಠಿವಿ ಭಕ್ತಿ

7. ಸಪ್ತಮೀ ವಿಭಕ್ತಿ

ಕ್ರಮಸಂಖ್ಯೆ

ವಿಭಕ್ತಿ

ವಿಭಕ್ತಿಪ್ರತ್ಯಯ

ಬದಲಾದನಾಮಪದ

1

ಪ್ರಥಮಾ ವಿಭಕ್ತಿ

ರಾಮನು

2

ದ್ವಿತೀಯಾ ವಿಭಕ್ತಿ

ಅನ್ನು

ರಾಮನನ್ನು

3

ತೃತೀಯಾ ವಿಭಕ್ತಿ

ಯಿಂದ

ರಾಮನಿಂದ

4

ಚತುರ್ಥಿ ವಿಭಕ್ತಿ

ಇಗೆ, ಗೆ, ಕ್ಕೆ

ರಾಮನಿಗೆ, ಬೆಕ್ಕಿಗೆ, ಅದಕ್ಕೆ

5

ಪಂಚಮೀ ವಿಭಕ್ತಿ

ದೆಸೆಯಿಂದ

ರಾಮನದೆಸೆಯಿಂದ

6

ಷಷ್ಠಿ ವಿಭಕ್ತಿ

ರಾಮನ

7

ಸಪ್ತಮೀ ವಿಭಕ್ತಿ

ಅಲ್ಲಿ

ರಾಮನಲ್ಲಿ

8

ಸಂಬೋಧನಾ ಪ್ರಥಮಾ ವಿಭಕ್ತಿ  

ನೇ

ರಾಮನೇ




Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...