Pronouns & Types - ಸರ್ವನಾಮ-ವಿಧಗಳು


ನಾಮಪದಕ್ಕೆ ಬದಲಾಗಿ ಬರುವ ಪದಗಳನ್ನು ಸರ್ವನಾಮ ಎನ್ನಲಾಗುವುದು,

ಉದಾಹರಣೆ:

ರಾಮನು ಓದುವುದರಲ್ಲಿ ಚುರುಕು, ಅವನು ಹಾಡುವುದರಲ್ಲಿಯೂ ತುಂಬ ಚುರುಕು.

ರಾಣಿ ಊರಿಗೆ ಹೋಗಿ ತುಂಬಾ ದಿನಗಳಾದುವು, ಳು ಏಕೆ ಇನ್ನೂ ಹಿಂದಿರುಗಿಲ್ಲ?

ಮೋತಿ ನಮ್ಮ ಮುದ್ದು ನಾಯಿ. ಅದು ನಮ್ಮ ಮನೆ ಕಾಯುತ್ತದೆ,

ಮೇಲಿನ ವಾಕ್ಯಗಳಲ್ಲಿ 'ಅವನು' ಎಂಬ ಪದವು 'ರಾಮನು' ಎಂಬ ನಾಮಪದಕ್ಕೆ ಬದಲಾಗಿಯೂ, 'ಅವಳು' ಎಂಬುದು 'ರಾಣಿ' ಎಂಬ ನಾಮಪದಕ್ಕೆ ಬದಲಾಗಿಯೂ, 'ಅದು' ಎಂಬುದು 'ಮೋತಿ' ಎಂಬ ನಾಮಪದಕ್ಕೆ ಬದಲಾಗಿಯೂ ಬಂದಿರುವುದರಿಂದ ಸರ್ವನಾಮ ಆಗಿವೆ.

The Pronoun stands for the Noun. It means the word, we use! instead of a noun is called Pronoun. 

Example:

Rama is smart in reading. He is smart even in singing.

Rani went to the village many months back. Why had she not yet come back

Mothi is our pet dog. It watches our house.

In the above mentioned examples. 'He' has come in the place the noun 'Rama'. 'She' in the place of the noun 'Rani' and 'It' in the place of 'Moti'. So 'he, she, it' all the three words are Pronouns.

ಇದೇ ರೀತಿ ನಾನು-ನಾವು, ನೀನು-ನೀವು- ತಾವು ಅವರು-ಇವರು, ಯಾರು. ಏನು-ಯಾವುದು..

Similarly 1-We, you-thou, Those-these-they, who, what, which all these words are the Pronouns. 

ಸರ್ವನಾಮದಲ್ಲಿ ವಿಧಗಳು - Kinds in Pronoun

1. ಪುರುಷವಾಚಕ ಸರ್ವನಾಮ Personal pronoun

2. ಆತ್ಮಾರ್ಥಕ ಸರ್ವನಾಮ Relexive pronoun.

3. ಪ್ರಶ್ನವಾಚಕ ಸರ್ವನಾಮ Interrogative pronoun

4. ಸಂಬಂಧ ಸೂಚಕ ಸರ್ವನಾಮ Relative pronoun

5. ನಿರ್ದಿಷ್ಟ ವಾಚಕ ಸರ್ವನಾಮ Demonstrative pronoun

(1) ಪುರುಷವಾಚಕ ಸರ್ವನಾಮ Personal Pronoun

ಪುರುಷವಾಚಕ ಸರ್ವನಾಮಗಳು ಪ್ರಥಮ, ಮಧ್ಯಮ, ಉತ್ತಮ ಪುರುಷರೂಪ ಗಳಲ್ಲಿ ಇರುತ್ತವೆ.

Personal pronouns are subdivided into 3 groups.

1. 1st personal pronoun

2. 2nd personal pronoun

3. 3rd personal pronoun

Pronoun in Kannada

ವಿಶೇಷ ಸೂಚನೆ - Note below: ಮಧ್ಯಮ ಹಾಗೂ ಉತ್ತಮ ಪುರುಷಗಳಲ್ಲಿ ಪುಲ್ಲಿಂಗ, ಸ್ತ್ರೀಲಿಂಗಗಳು ಏಕವಚನ-ಬಹುವಚನಗಳಲ್ಲಿ ಯಾವ ಬದಲಾವಣೆಯನ್ನೂ ಹೊಂದುವುದಿಲ್ಲ,

In 1st and 2nd person, no any change in singular and plural.

(2) ಪ್ರಶ್ನವಾಚಕ ಸರ್ವನಾಮಗಳು Interrogative Pronouns

ಈ ಪ್ರಶ್ನೆಗಳನ್ನು ಸೂಚಿಸುವ ಸರ್ವನಾಮಗಳನ್ನು ಪ್ರಶ್ನವಾಚಕ ಸರ್ವನಾಮಗಳು ಎನ್ನುವರು. 

ಉದಾಹರಣೆ:

ಈ ಹುಡುಗ ಯಾರು?

ಮೇಜಿನ ಮೇಲೆ ಇರುವ ಪುಸ್ತಕ ಯಾವುದು?

ಚಿನ್ನವೋ ರತ್ನವೋ ಯಾವುದು ಬೇಕು?

ಆ ಚಿತ್ರದಲ್ಲಿ ಕಾಣುತ್ತಿರುವುದು ಏನು?

ಶ್ರೀರಾಮನು ಯಾರ ಮಗ?

ನಿನಗೆ ಯಾವ ಪುಸ್ತಕ ಬೇಕು?

ಮೇಲಿನ ವಾಕ್ಯಗಳಲ್ಲಿ ಬಂದಿರುವ ಯಾರು, ಯಾವುದು, ಏನು, ಯಾರು, ಯಾವ 

ಇವುಗಳು ವಾಕ್ಯಗಳಲ್ಲಿ ಪ್ರಶ್ನೆಗಳನ್ನು ಕೇಳುವುದರಿಂದ ಪ್ರಶ್ನವಾಚಕ ಸರ್ವನಾಮಗಳಾಗಿವೆ.

Pronouns, asking, questions are called Interrogative Pronouns.

Examples:

Who is this boy?

Which is that book on the table?

What is that in the picture?

Which do you want, gold or diamond?

Whose is that book?

Which is your book?

In the above said sentences, who-which-what-whose all these words are asking questions. So they are called as Interrogative Pronouns.

Note below ವಿಶೇಷ ಸೂಚನೆ

ಪ್ರಶ್ನಾರ್ಥಕ ವಾಕ್ಯಗಳು ಬಂದಾಗ, ವಾಕ್ಯದ ಕೊನೆಯಲ್ಲಿ ಪೂರ್ಣವಿರಾಮದ ಗುರುತಿಗೆ ಬದಲಾಗಿ ಪ್ರಶ್ನವಾಚಕ ಗುರುತಾದ (?) ಬಂದಿರುತ್ತದೆ.

In Interrogative sentences, we must mark at the end of the sentence "question mark (?) instead of Full stop (.)

(3) ಆತ್ಮಾರ್ಥಕ ಸರ್ವನಾಮ

ಮೂರು ಲಿಂಗಗಳಲ್ಲಿಯೂ ಏಕರೂಪವಾಗಿ ಬಳಸುವ ''ತಾನು”, “ತಾವು”. ಎಂಬುದರ ಎಲ್ಲಾ ರೂಪಗಳೂ ಆತ್ಮಾರ್ಥಕ ಸರ್ವನಾಮಗಳೇ ಆಗಿರುತ್ತವೆ.

ಉದಾಹರಣೆ:

(ಅದು) ಆ ಕರಡಿ ತನ್ನ ಪಾಡಿಗೆ ತಾನು ಹೊರಟುಹೋಯಿತು.

(ಅವನು) ಆ ಭಿಕ್ಷುಕ ತನ್ನ ಪಾಡಿಗೆ ತಾನು ಹೊರಟುಹೋದ.

(ಅವಳು) ಕುಸುಮಾ ಅವರೆಲ್ಲರೂ ಗೇಲಿ ಮಾಡುತ್ತಿದ್ದರೂ ಸಹ ತನ್ನ ಪಾಡಿಗೆ

ತಾನು ಹೊರಟುಹೋದಳು.

ಮೇಲ್ಕಂಡ ವಾಕ್ಯಗಳಲ್ಲಿ ಬಂದಿರುವ “ತಾನು” ಎಂಬುದು ಮೂರೂ ರೂಪ ಭಯೂ ವ್ಯತ್ಯಾಸಗೊಳ್ಳದೆ ಬಂದಿದೆ. 

ಆದ್ದರಿಂದ ಇದನ್ನು ಆತ್ಮಾರ್ಥಕ ಸರ್ವನಾಮ ಎನ್ನಲಾಗಿದೆ.





(4) ನಿರ್ದಿಷ್ಟವಾಚಕ ಸರ್ವನಾಮ Demonstrative Pronoun

ನಾಮಪದಗಳಿಗೆ ವಿಶೇಷಣ ರೀತಿಯಲ್ಲಿ ಕೆಲಸ ಮಾಡುವ ಸರ್ವನಾಮಗಳನ್ನು ನಿರ್ದಿಷ್ಟವಾಚಕ ಸರ್ವನಾಮ ಎನುವರು.

ಉದಾಹರಣೆ:

ಅದು ಮನ ಆಗಿದೆ.

ಇದು ಪುಸ್ತಕ ಆಗಿದೆ.

ಮೇಲಿನ ವಾಕ್ಯಗಳಲ್ಲಿ ಅದು, ಇದು ಈ ಪದಗಳು ಕ್ರಮವಾಗಿ ಮನೆ, ಪುಸ್ತಕ ಎಂಬ ನಾಮಪದಗಳ ಬದಲಾಗಿ ನಿರ್ದಿಷ್ಟ ರೀತಿಯಲ್ಲಿ ಬಂದಿರುವುದರಿಂದ ನಿರ್ದಿಷ್ಟವಾಚಕ ಸರ್ವನಾಮ ಆಗಿವೆ.

Demonstrative pronouns point out the nouns.

For example:

That is a book.

This is pencil.

In the above mentioned sentences this-that both the words point out the nouns book and pencil. So they are called as Demonstrative Pronouns.

(5) ಸಂಬಂಧ ಸೂಚಕ ಸರ್ವನಾಮ Relative Pronoun

ಸಂಬಂಧ ಸೂಚಕ ಸರ್ವನಾಮದಲ್ಲಿ ಎರಡು ವಾಕ್ಯಗಳ ಸಂಬಂಧವನ್ನು ಸೂಚಿಸುವ ಸರ್ವನಾಮ ಪದಗಳು ಬಂದಿರುತ್ತವೆ.

ಉದಾಹರಣೆ:

ನಾನು ನನ್ನೆ ಯಾರನ್ನು ನೋಡಿದ್ದೆನೋ, ಆ ಹುಡುಗ ಇವನೇ

ನಾನು ಯಾವುದನ್ನು ಅಪೇಕ್ಷಿಸಿದ್ದೆನೋ ಆ ಪುಸ್ತಕ ಇಲ್ಲಿದೆ.

ಮೇಲಿನ ವಾಕ್ಯಗಳಲ್ಲಿ ಯಾರನ್ನು, ಯಾವುದನ್ನು ಎಂಬ ಸರ್ವನಾಮಗಳು ಎರಡು ವಾಕ್ಯಗಳ 

ಸಂಬಂಧವನ್ನು ತಿಳಿಸುತ್ತಿರುವುದರಿಂದ ಸಂಬಂಧ ಸೂಚಕ ಸರ್ವನಾಮಗಳು ಆಗಿವೆ.

Relative pronoun shows the relation between two sentences.

Example:

This is the boy whom I saw yesterday.

Here is the book which I was in need of

In the above sentences, the pronouns whom and which show the relation between two sentences. So they are called Relative Pronouns.

ಅಭ್ಯಾಸ Exercise 

1. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ:

(ಅ) ಸರ್ವನಾಮ ಅಂದರೇನು? ಎಷ್ಟು ವಿಧ ಹೆಸರಿಸಿ.

(ಆ) ಪುರುಷವಾಚಕ ಸರ್ವನಾಮದ ಉಪಭೇದಗಳನ್ನು ಪಟ್ಟಿಮಾಡಿ.

(ಇ) ನಿರ್ದಿಷ್ಟ ವಾಚಕ ಸರ್ವನಾಮವನ್ನು ನಿರ್ದಿಷ್ಟ ವಾಚಕ ವಿಶೇಷಣಗಳಿಗೂ ಇರುವ ತಾರತಮ್ಯವನ್ನು ತಿಳಿಸಿ. 

2. ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ಸರ್ವನಾಮವನ್ನು ಗುರ್ತಿಸಿ ಸಂಬಂಧಿತ ಹೆಸರನ್ನು ತಿಳಿಸಿ.

(ಅ) ನಾನು ನಾಳೆ ಬರುತ್ತೇನೆ.

(ಅ) ಅವನು ಅವನಷ್ಟಿಗೆ ಅವನೇ ಮಾತಾಡಿಕೊಳ್ಳುತ್ತಿದ್ದ.

(ಇ) ಬಾಗಿಲ ಬಳಿ ನಿಂತಿರುವವರು ಯಾರು?

(ಈ) ನನಗೆ ಓದುವಾಗ ಯಾರು ಸಹಾಯ ಮಾಡಿದ್ದರೋ, ಅವರು ಇವರೇ.

(ಉ) ಇದು ನನ್ನ ಪುಸ್ತಕ.





Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...