Types of Sentences - ವಾಕ್ಯಗಳಲ್ಲಿ ಪ್ರಕಾರಗಳು


ಎರಡು ಮುಖ್ಯ ಪ್ರಕಾರಗಳು - The sentences can be categorized into 2 divisions. Namely,


(a)ಸಾಮಾನ್ಯ ವಾಕ್ಯ

ನಿಷೇಧವಾಕ್ಯ

ಪ್ರಶ್ನಾರ್ಥಕ ವಾಕ್ಯ

ವಿಧ್ಯರ್ಥಕ ವಾಕ್ಯ

ಉದ್ದಾರವಾಚಕ ವಾಕ್ಯ

ವಿಸ್ಮಯಬೋಧಕ ವಾಕ್ಯ

(b)

1. ಸರಳವಾಕ್ಯ

2.ಮಿಶ್ರವಾಕ್ಯ

3.ಸಂಯೋಜಿತ ವಾಕ್ಯ

  ಅಥವಾ

  ಸಂಯುಕ್ತವಾಕ್ಯ

1. ಸರಳವಾಕ್ಯ

Simple sentence

ಒಂದೇ ಪೂರ್ಣಕ್ರಿಯಾಪದ

Only one main verb

2. ಮಿಶ್ರವಾಕ್ಯ

Compound sentence

ಎರಡು ಪ್ರಧಾನ ಕ್ರಿಯಾಪದಗಳು

Two or more than 2 verbs

3. ಸಂಯೋಜಿತ ವಾಕ್ಯ

Complex sentence

ಒಂದು ಪ್ರಧಾನ

2 main verbs.

ಒಂದಕ್ಕಿಂತಲೂ ಅಧಿಕ

One main verb,

one or more

verb main verbs.

subordinate verbs


ಮಾತು ನಮ್ಮ ಮನೋಭಾವನೆಗಳನ್ನು ವ್ಯಕ್ತಗೊಳಿಸಲು ಬೇಕಾದ ಒಂದು ಪ್ರಮುಖ ಮಾಧ್ಯಮ, ಮಾತಿನ ಮೂಲಕವೇ ನಾವೆಲ್ಲರೂ ವಿಚಾರವಿನಿಮಯ ಮಾಡಿಕೊಳ್ಳುತ್ತೇವೆ.

ವಾಕ್ಯ ಅಂದರೆ ಏನು?

ಇದು ಶಬ್ದಗಳ ಸುಸಜ್ಜಿತ ಜೋಡಣೆಯ, ಸಂಪೂರ್ಣ ಅರ್ಥವನ್ನು ಕೊಡುವ ಪದಗಳ ಜೋಡಣೆ, ಅಂದಮೇಲೆ ವಾಕ್ಯದ ಪರಿಭಾಷೆಯನ್ನು ನಾವು ಹೀಗೆ ಮಾಡಬಹುದು.

“ಸಂಪೂರ್ಣ ಅರ್ಥವನ್ನು ಕೊಡುವ , ಸುಸಜ್ಜಿತ ಪದ ಸಮೂಹವನ್ನು ಪಾಕ ಅನ್ನಬಹುದು.?

ಇದೇ ಅರ್ಥವನ್ನು ಸುಲಭ ರೀತಿಯಲ್ಲಿ ಅರ್ಥೈಸಲು ವಾಕ್ಯಗಳನ್ನೇ ನೆರವಿನ ರೂಪದಲ್ಲಿ ಪಡೆದು ತಿಳಿದುಕೊಳ್ಳಬಹುದು.

“ಕಚ್ಚುವುದಿಲ್ಲ ನಾಯಿ ಬೊಗಳುವ.”

ಮೇಲಿನ ವಾಕ್ಯದಲ್ಲಿ ಶಬ್ದ ಸಮೂಹ ಇದ್ದರೂ ಅರ್ಥ ಕೊಡುತ್ತಿಲ್ಲ. ಕಾರಣ ಶಬ್ದಗಳನ್ನು ಸುಸಜ್ಜಿತ ರೀತಿಯಲ್ಲಿ ಜೋಡಿಸಿಲ್ಲ. ಇದೇ ಶಬ್ದಗಳನ್ನು ಸುಸಜ್ಜಿತ ರೀತಿಯಲ್ಲಿ ಜೋಡಿಸಿದಾಗ ಹೀಗಾಗುತ್ತದೆ

“ಬೊಗಳುವ ನಾಯಿ ಕಚ್ಚುವುದಿಲ್ಲ.”

ಅಂದರೆ ಸರಿ ಅರ್ಥವನ್ನು ಕೊಡುವ, ಸುಸಜ್ಜಿತ ಪದಸಮೂಹ ಮಾತ್ರ ವಾಕ್ಯ ಎನಿಸುವುದು. ಅಂತಹ ವಾಕಗಳಿಂದಲೇ ನಾವು ಮಾತಾಡಿ, ವಿಚಾರ ವಿನಿಮಯ ಮಾಡಿಕೊಳ್ಳಲು ಸಾಧ್ಯ.

"Speech' is the media when we talk. Without it we cannot exchange our opinions. We talk one another using sentences. But the sentences must be sensitive and meaningful. They will become meaningful when they are arranged systematically. That is why the sentence is defined as-

The sentence is the group of words which are arranged systematically to give full meaning.

To make easier the above fact we may get the examples.

"Not bite do dogs barking."

In the above sentence, there are the group of words. But are not sensitive and meaningful. It is because they are not arranged in proper order,

When they are put in proper order. It becomes-

"Barking dogs do not bite."

So we can only take through the meaningful sentence which is arranged through the words in proper order.


ವಾಕ್ಯದ ಪ್ರಕಾರಗಳು - Kinds in Sentences

1. ಸರಳವಾಕ್ಯ-Simple sentence

2. ನಿಷೇಧವಾಕ್ಯ-Negative sentence

3. ಪ್ರಶ್ನಾರ್ಥಕ ವಾಕ್ಯ- Interrogative sentences

4.ವಿಧಿರೂಪಕವಾಕ್ಯ-Imperative sentence

5. ಉದ್ದಾರವಾಚಕ ವಾಕ್ಯ- Exclamatory sentence

(1) ಸರಳ ವಾಕ್ಯ- Simple Sentence

ಇದನ್ನು ಸಾಮಾನ್ಯ ವಾಕ್ಯ ಎಂದೂ ಕರೆಯುತ್ತಾರೆ. ಯಾವುದಾದರೂ ಸಾಮಾನ್ಯ ವಿಚಾರವನ್ನು ಒಂದೇ ವಾಕ್ಯದಲ್ಲಿ ಸರಳರೂಪದಲ್ಲಿ ವ್ಯಕ್ತಗೊಳಿಸಿದರೆ, ಅಂತಹ ವಾಕ್ಯವು ಸರಳ ವಾಕ್ಯ ಎನಿಸುವುದು.

ಭದಾಹರಣೆ:

ರಾಮನು ಒಳ್ಳೆಯ ಹುಡುಗ.

ಸೀತ ಜಾಣೆ ಆಗಿದ್ದಾಳೆ..

ನಾವೆಲ್ಲರೂ ಭಾರತೀಯರು ಆಗಿದ್ದೇವೆ.

ಮೇಲಿನ ಮೂರೂ ವಾಕ್ಯಗಳೂ ಸರಳವಾಗಿವೆ. ಒಂದೇ ವಾಕ್ಯದಲ್ಲಿವೆ. ಸಾಮಾನ್ಯ ವಿಚಾರವನ್ನು ಸರಳ ರೀತಿಯಲ್ಲಿ ವ್ಯಕ್ತಗೊಳಿಸುತ್ತವೆ. ಆದ್ದರಿಂದ ಸರಳವಾಕ್ಯಗಳೆನಿಸಿವೆ.

The simple sentence is always the main single sentence, giving the common meaning. This type of sentence will have only one finite verb.

ಉದಾಹರಣೆ:

Rama is a good boy.

Seetha is a clever girl.

We all are Indians

In all the above three sentences, we observe the simple meaningful fact, having only one finite verb. So, these are simple sentences.

(2) ನಿಷೇಧವಾಕ್ಯ- Negative Sentence

ಇಲ್ಲ. ಅಲ್ಲ, ಬೇಡದು, ಕೂಡದು, ಸಣ್ಣ ಮೊದಲಾದ ನಿಷೇಧರೂಪದ ಅರ್ಥವನ್ನು ಕೊಡುವ ಶಬ್ದಗಳನ್ನು ಒಳಗೊಂಡಿರುವ ವಾಕ್ಯಗಳನ್ನು ನಿಷೇಧವಾಕ್ಯ ಎನ್ನುವರು. ಇದೂ ಸಹ ಸರಳವಾಕ್ಯವೇ ಆಗಿದ್ದು, ನಿಷೇಧರೂಪದ ಅರ್ಥವನ್ನು ಕೊಡುತ್ತದೆ.

ಉದಾಹರಣೆ:

ರಾಮನು ಇನ್ನೂ ಪೇಟೆಯಿಂದ ಏಕೆ ಹಿಂದಿರುಗಿಲ್ಲ ? (ಇಲ್ಲ)

ಈ ಲೆಕ್ಕ ಮಾಡಿದ್ದು ನಾನು ಅಲ್ಲ. (ಅಲ್ಲ)

ಸುಳ್ಳು ಹೇಳಬಾರದು (ಬಾರದು)

ತರಗತಿಯಲ್ಲಿ ಸದ್ದು ಮಾಡಕೂಡದು. (ಕೂಡದು)

ಮೋಸ ಎಂದಿಗೂ ಸಲ್ಲ. (ಸಲ್ಲ)

ನನಗೆ ಊಟ ಬೇಡ. (ಬೇಡ)

ಮೇಲಿನ ವಾಕ್ಯಗಳಲ್ಲಿ ಬಂದಿರುವ ಶಬ್ದಗಳಾದ ಇಲ್ಲ ಅಲ್ಲ, ಬಾರದು, ಕೂಡದು, ಸಲ್ಲ, ಬೇಗ ಇವೆಲ್ಲವೂ ನಿಷೇದಾರ್ಥದ ಶಬ್ದಗಳೇ ಆಗಿದ್ದು, ವಾಕ್ಯಗಳು ನಿಷೇಧ ರೀತಿಯ ಅರ್ಥವನ್ನೇ ಕೊಡುತ್ತಿರುವುದರಿಂದ ನಿಷೇಧವಾಕ್ಯಗಳು ಎನಿಸಿವೆ.

No, not, neither, nor, never all such words give the negative meang. Whenever such words are used in sentences, they are called as Negative Sentences.

Examples:

1. Why has Rama not yet come back from the bazar?

2. I have not done this sum.

3. Do not enter into the classroom?

4. Never talk a lie.

5. Neither Rama nor Bhima has come to the function.

6. He denied to say.

In the above sentences, nor, never, neither, nor, deny all these words give the negative meaning. So they are called as Negative Sentences.

Negative means 'No'.

(3) ಪ್ರಶ್ನಾರ್ಥಕ ವಾಕ್ಯ- Interrogative Sentence

ಪ್ರಶ್ನೆಗಳ ರೂಪದಲ್ಲಿ ಬರುವ ವಾಕ್ಯಗಳನ್ನು ಪ್ರಶ್ನಾರ್ಥಕ ವಾಕ್ಯ ಎನ್ನುವರು. ಏನು, ಯಾರು, ಯಾವುದು, ಯಾರ, ಏಕೆ, ಹೇಗೆ ಮೊದಲಾದ ಪದಗಳು ಪ್ರಶ್ನಾರ್ಥಕ ವಾಕ್ಯ ಎನ್ನುವರು.

ಉದಾಹರಣೆ:

ಶ್ರೀರಾಮನ ತಂದೆ ಯಾರು?

ನಾಳೆ ಯಾವ ವಾರ ಆಗಿದೆ?

ಅಲ್ಲಿ ಕಾಣುತ್ತಿರುವುದು ಏನು?

ಗೋಪಾಲ ಹಳ್ಳಿಯಿಂದ ಯಾವಾಗ ಬಂದ?

ನಿಮ್ಮ ಊರು ಯಾವುದು?

ನಿಮ್ಮ ಆರೋಗ್ಯ ಹೇಗೆ ಇದೆ?

ರಾಮಸ್ವಾಮಿಯ ಊರು ಎಲ್ಲಿ ಇದೆ?

ನಂಜುಂಡ ಮನೆಗೆ ಇನ್ನೂ ಏಕೆ ಬರಲಿಲ್ಲ?

ಮೇಲಿನ ವಾಕ್ಯಗಳಲ್ಲಿ ಬಂದಿರುವ ಯಾರು, ಯಾವ, ಏನು, ಯಾವಾಗ, ಯಾವುದು, ಹೇಗೆ, ಎಲ್ಲಿ, ಏಕೆ ಇವೆಲ್ಲವೂ ಪ್ರಶ್ನಾರ್ಥಕ ಪದಗಳು, ವಾಕ್ಯಗಳಲ್ಲಿ ಇಂತಹ ಪ್ರಶ್ನಾರ್ಥಕ ಪದಗಳು ಬಂದಾಗ ಪ್ರಶ್ನಾರ್ಥಕ ವಾಕ್ಯಗಳು ಎನಿಸುತ್ತವೆ.

Sentences in interrogation are called Interrogative Sentences. Interrogation means "Asking questions". The sentences asking questions, are called Interrogative Sentences.

Examples:

Who is Ashoka's father?

Where is the book?

What do you want?

Why did you come?

When does the match commence?

Whose book is this?

Which book do you want?

How is your health?

In the above stated sentences, "who, whom, whose, which, how all these words ask questions. So if in a sentence, such interrogative words are used they are called Interrogative Sentences. 

(4) ವಿಧಿರೂಪಕ ವಾಕ್ಯ- Imperative Sentence

ಇನ್ನೂ ಹಲವು ವಾಕ್ಯಗಳಲ್ಲಿ ಆಜ್ಞೆ, ವಿನಂತಿ, ಆಶೀರ್ವಾದ, ಪ್ರಾರ್ಥನೆ ಇಂತಹ ಭಾವಗಳು ವ್ಯಕ್ತಗೊಂಡಿರುತ್ತವೆ. ಇವನ್ನು ವಿಧಿರೂಪಕ ವಾಕ್ಯಗಳು ಎನ್ನಲಾಗುವುದು.

ಉದಾಹರಣೆಗಳು:

ನಾಳೆಯಿಂದ ನೀನು ಆಟಕ್ಕೆ ಹೋಗಬೇಡ. (ಆಜ್ಞೆ)

ದಯವಿಟ್ಟು ನನ್ನ ತಪ್ಪನ್ನು ಮನ್ನಿಸಿ. (ವಿನಂತಿ)

ದೇವರೇ, ನನ್ನನ್ನು ಕೈಬಿಡಬೇಡ. (ಪ್ರಾರ್ಥನೆ)

ದೇವರು ಮಗುವಿಗೆ ಆಯಸ್ಸು ಹೆಚ್ಚಿಸಲಿ. (ಹಾರೈಕೆ)

ದೇವರು ನಿನ್ನ ಆಕಾಂಕ್ಷೆಯನ್ನು ಈಡೇರಿಸಲಿ. (ಆಶೀರ್ವಾದ)

ಮೇಲಿನ ವಾಕ್ಯಗಳಲ್ಲಿ ಕ್ರಮವಾಗಿ ಬಂದಿರುವ ಆಜ್ಞೆ, ವಿನಂತಿ, ಪ್ರಾರ್ಥನೆ, ಹಾರಕ, ಆಶೀರ್ವಾದ ಈ ಭಾವಾರ್ಥ ಉಳ್ಳವಾಕ್ಯಗಳು ವಿಧಿರೂಪಕ ವಾಕ್ಯಗಳಾಗಿವೆ.

If the sentences give the feeling of order request, prayer, blessing such sentences are called as Imperative sentences.

Examples:

1. Do not come to school from tomorrow. (order)

2. Please lend me your book. (request)

3. God, help me in this trouble. (prayer)

4. Long live our mother. (blessing)

In the above stated sentences, they state the feelings order, request, prayer and blessings. So they are called as Imperative Sentences.

(5) ವಿಸ್ಮಯ ಬೋಧಕವಾಕ್ಯ- Exclamatory Sentences |

ಇಂತಹ ವಾಕ್ಯಗಳಲ್ಲಿ ವಿಸ್ಮಯ, ದುಃಖ, ಮೆಚ್ಚುಗೆ, ಆತಂಕ, ಹೆದರಿಕೆ, ಅಚ್ಚರಿ ಮೊದಲಾದ ವಿಸ್ಮಯಸೂಚಕ ಭಾವವನ್ನು ವ್ಯಕ್ತಿಗೊಳಿಸುವುದರಿಂದ ವಿಸ್ಮಯ ಬೋಧಕ ವಾಕ್ಯಗಳೆನಿಸಿವೆ.

ಉದಾಹರಣೆ:

ಭಲೇ! ಭಲೇ!ತುಂಬಾ ಚೆನ್ನಾಗಿ ಆಡಿದೆ. (ಮೆಚ್ಚುಗೆ).

ಆಹಾ! ಲಾಲ್‌ಬಾಗ್ ನೋಡಲು ಎಷ್ಟು ರಮ್ಮ ಎನಿಸಿದೆ. (ಆನಂದ)

ಅಯ್ಯೋ! ಮಗು ಮೆಟ್ಟಲುಗಳಿಂದ ಉರುಳಿತು. (ಆತಂಕ)

ಅಬ್ಬಾ! ಭೀಮನ ಸಾಹಸವೇ ಸಾಹಸ. (ಭಯ)

ಹರಿಶ್ಚಂದ್ರ ಎಂತಹ ಶೂರ ಹಾಗೂ ಸತ್ಯವಂತ ರಾಜ! (ಆಶ್ಚರ್ಯ)

ಮೇಲಿನ ವಾಕ್ಯಗಳಲ್ಲಿ ಕ್ರಮವಾಗಿ ಮೆಚ್ಚುಗೆ, ಆನಂದ, ಆತಂಕ, ಆಶ್ಚರ್ಯ, ಭಯ ಭಾವಗಳು ವ್ಯಕಗೊಂಡಿರುವುದರಿಂದ ವಿಸ್ಮಯಬೋಧಕ ವಾಕ್ಯಗಳು ಎನಿಸಿವೆ.

Exclamation means denoting certain sudden feeling. The feelings of wonder, admiration, fear, glory, sorrow are stated in such words. When such words are used in sentences, they are called Exclamatory Sentences.

Examples:

Bravo! you are a hero. (admiration)

Alas! the child fall into the well. (fear)

Oh! The giant is coming. (wonder)

Ah! Lalbaugh is a pleasant garden. (glory)

ಇನ್ನೊಂದು ಪ್ರಾಕಾರದಲ್ಲಿ ವಾಕ್ಯಗಳನ್ನು ಮೂರು ರೀತಿಯಲ್ಲಿ ವಿಂಗಡಿಸಲಾಗಿದೆ.

1. ಸರಳವಾಕ್ಯ

2. ಮಿಶ್ರವಾಕ್ಯ

3. ಅಧೀನವಾಕ್ಯ

In other way, the sentences are divided into 3 groups.

1. Simple sentence

2. Compound sentence

3. Subordinate sentence.





(1) ಸರಳವಾಕ್ಯ- Simple Sentence

ಸರಳವಾಕ್ಯದಲ್ಲಿ ಒಂದೇ ಒಂದು ಪೂರ್ಣ ಕ್ರಿಯಾಪದ ಇರುತ್ತದೆ. ಆದ್ದರಿಂದಲೇ ಇದನ್ನು ಪೂರ್ಣ ಕ್ರಿಯಾಪದದ ವಾಕ್ಯ ಎಂದೂ ಕರೆಯುತ್ತಾರೆ. ಪ್ರಧಾನ ವಾಕ್ಯ ಎಂದೂ ಹೇಳುವರು. ಹೀಗೆ ಒಂದೇ ಪೂರ್ಣಕ್ರಿಯಾಪದ ಇರುವ, ಬೇರೆ ಯಾವ ಅಧೀನವಾಕ್ಯದಲ್ಲಿ ಇಲ್ಲದ, ಸ್ವತಂತ್ರ ಎನಿಸಿರುವ ವಾಕ್ಯವನ್ನು ಸರಳ ವಾಕ್ಯ ಎನ್ನುವರು.

ಉದಾಹರಣೆ:

ಶ್ರೀರಾಮನು ಸೀತೆ, ಲಕ್ಷ್ಮಣರೊಂದಿಗೆ ಕಾಡಿಗೆ ಹೋದನು.

ದೌಪದಿ ಮಾನದ ಸಲುವಾಗಿ ಹೋರಾಡಿದ ಶೀಲವಂತೆ ಆಗಿದ್ದಾಳೆ.

ಮೇಲಿನ ವಾಕ್ಯಗಳಲ್ಲಿ ಹೋದನು, ಆಗಿದ್ದಾಳೆ ಎಂಬ ಎರಡೂ ಕ್ರಿಯೆಗಳೂ ಪೂರ್ಣಕ್ರಿಯಾಪದಗಳಾಗಿದ್ದು, ಅಧೀನವಾಕ್ಯಗಳೇ ಇಲ್ಲದ ಸ್ವತಂತ್ರವಾಕ್ಯ ಎನಿಸಿರುವುದರಿಂದ ಸರಳವಾಕ್ಯ ಹಾಗೂ ಪ್ರಧಾನವಾಕ್ಯ ಎನಿಸಿದೆ.

In simple sentence, there will be only one main verb without any subordinate verbs. Because of this reason, the sentence is called Simple Sentence.

Example:

Sri Rama went to the forest with Sita and Lakshmana.

Draupadi is the noble and virtuous lady.

In the above sentences there is only one main verb no other subordinate sentence. So the above stated both the sentences are called Simple Sentences.

(2) ಮಿಶ್ರವಾಕ್ಯ - Complex Sentence

ಈ ರೀತಿಯ ವಾಕ್ಯಗಳಲ್ಲಿ ಒಂದು ಪ್ರಧಾನ ವಾಕ್ಯವಾಗಿದ್ದು, ಬೇರೆ ಒಂದೋ ಇಲ್ಲವೇ ಅದಕ್ಕಿಂತಲೂ ಹೆಚ್ಚಿನದೋ ಆದ ಅಧೀನವಾಕ್ಯಗಳು ಬಂದಿರುತ್ತವೆ. ಇಂತಹ ವಾಕ್ಯಗಳು ಮಿಶ್ರವಾಕ್ಯ ಎನಿಸಿಕೊಳ್ಳುವುವು.

ಉದಾಹರಣೆ:

ವ್ಯಾಯಾಮ ಮಾಡುವುದು ಆರೋಗ್ಯಕರ ಎಂದು ನಮ್ಮ ಗುರುಗಳು ಹೇಳಿದರು.

ಅಧೀನ ವಾಕ್ಯ (ಪ್ರಧಾನ ವಾಕ್ಯ)

ಯಾರು ಮಿತವಾಗಿ ಊಟ ಮಾಡುತ್ತಾರೋ, ಅವರು ಆರೋಗ್ಯದಿಂದಿರುತ್ತಾರೆ.

ಅಧೀನ ವಾಕ್ಯ (ಪ್ರಧಾನ ವಾಕ್ಯ)

ಮೇಲಿನ ಎರಡೂ ವಾಕ್ಯಗಳಲ್ಲೂ ಒಂದೇ ಒಂದು ಪ್ರಧಾನವಾಕ್ಕ ಇದ್ದು, ಇನ್ನೊಂದು ಅಧೀನವಾಕ್ಕೆ ಪ್ರಧಾನವಾಕ್ಯವನ್ನೇ ಅವಲಂಬಿಸಿದೆ. ಆದ್ದರಿಂದ ಸಮ್ಮಿಶ್ರವಾಕ್ಯಗಳು ಆಗಿವೆ.

In complex sentence there will be only one main sentence and one or more subordinate sentences. Such sentences are called Complex sentences.

Examples: 

Rama told (Main Sentence)that he would come tomorrow. (Subordinate sentence)

I do not know (Main Sentence)  why he did not come. (Subordinate sentence)

In the above stated sentences, there is only one main sentence, having another suboridante sentence with. So both the sentences are Complex sentences.

(3) ಸಂಯೋಜಿತ ಅಥವಾ ಸಂಯುಕ್ತವಾಕ್ಯ - Compound Sentence

ಇಂತಹ ವಾಕ್ಯಗಳಲ್ಲಿ ಎಲ್ಲವೂ ಸ್ವತಂತ್ರವಾಕ್ಯಗಳೇ ಆಗಿರುತ್ತವೆ. ಒಂದಕ್ಕಿಂತಲೂ ಹೆಚ್ಚಾದ ಸರಳವಾಕ್ಯಗಳು ಸಂಯೋಜಿತ ರೀತಿಯಲ್ಲಿ ಒಂದಕ್ಕೊಂದು ಅರ್ಥ ಆಗುವ ರೀತಿಯಲ್ಲಿ ಸೇರಿರುತ್ತದೆ. ಅಧೀವಾಕ್ಯಗಳು ಒಂದೂ ಇರುವುದಿಲ್ಲ. ಇಂತಹ ವಾಕ್ಯಗಳನ್ನೇ ಸಂಯುಕ್ತವಾಕ್ಯಗಳು ಎನ್ನಲಾಗುವುದು.

In such type of sentences all the sentences will be independent No subordinate sentences. All the sentences will have connection with one another. This type of sentence is called Compound Sentence.

Example:

I was eagerly waiting for you. But you did not come.

ನಾನು ನಿನಗಾಗಿಯೇ ಕಾಯುತ್ತಿದ್ದೆ. ಆದರೆ ನೀನು ಬರಲಿಲ್ಲ.

Gandhiji was innocent like a child, so all were liking him.

ಗಾಂಧೀಜಿ ಮಗುವಿನಷ್ಟು ಮುಗ್ಧ ಮನದವರು, ಆದ್ದರಿಂದಲೇ ಎಲ್ಲರೂ ಅವರು ಇಚ್ಚಿಸುತ್ತಿದ್ದರು.

ವಾಕ್ಯ ಸಂಯೋಜನೆ - Combination in Sentences |

“ಸಂಯೋಜನೆ'' ಅಂದರೆ ಕೂಡುವಿಕೆ ಅಥವಾ ಒಂದಾಗುವಿಕೆ ಎಂದರ್ಥ. ಸಂಯೋಜಿತ ವಾಕ್ಯಗಳು ಅತಿ ಉದ್ದ ಇರುವಾಗ, ಇಂತಹ ಸಂಯೋಜಿತ ಕ್ರಮದಿಂದ ಅವನ್ನು ಅರ್ಥಗೆಡದಂತೆ ಚಿಕ್ಕ-ಚೊಕ್ಕ (Short and sweet) ರೀತಿಯಲ್ಲಿ ರಚಿಸಬಹುದು. ಇದರಿಂದ ಓದಲೂ ಸೊಗಸು, ನೋಡಲೂ ಸೊಗಸು. ಅಂದರೆ ಕೆಲವೇ ಪದಗಳ ಅರ್ಥಸಹಿತ ವಾಕ್ಯಗಳ ಸೇರುವಿಕೆಯಿಂದ ಅವುಗಳ ಸಂಬಂಧವು ಸಡಿಲಗೊಳ್ಳದ ರೀತಿಯಲ್ಲಿ ರಚಿಸುವ ಶೈಲಿಗೆ ವಾಕ್ಯ ಸಂಯೋಜನೆ ಎನ್ನಬಹುದು.

ಉದಾಹರಣೆ:

ರಾಮನು ಬುದ್ದಿವಂತನೇ ಅಲ್ಲ, ಶಕ್ತಿವಂತನೂ ಆಗಿದ್ದನು.

ಮೇಲ್ಕಂಡ ವಾಕ್ಯಗಳಲ್ಲಿ ಪೂರ್ಣ ಅರ್ಥವನ್ನು ಕೊಡುವ ಎರಡು ವಾಕ್ಯಗಳಿವೆ. ಈ ಎರಡೂ ವಾಕ್ಯಗಳನ್ನು ಸೇರಿಸಿ, ಅರ್ಥಗೆಡದಂತೆ ಮೊಟಕುಗೊಳಿಸಿದಾಗ

'ರಾಮನು ಬುದ್ದಿವಂತನೂ, ಶಕ್ತಿವಂತನೂ ಆಗಿದ್ದನು” ಎಂದಾಗುತ್ತದೆ.

Combination" means "joining". Because of such combination in compound sentences, the time to say, becomes lesser and seems to be sweet. This is called "Combination in sentences"

Example:

Rama reads well and he also writes well.

In the above compound sentence, there are two main sentences, giving complete meaning. It is too lengthy.

If we shorten this sentence, without any change in meaning it becomes

-Rama reads and writes well.

ವಾಕ್ಯ ಸಂಯೋಜನೆಯ ಅನುಕೂಲಗಳು - Advantage of Combination

1, ಚಿಕ್ಕ ಚಿಕ್ಕದೆನಿಸುತ್ತದೆ.

    Looks short and sweet.

2. ಕಾಲ ಉಳಿಯುತ್ತದೆ.

    The time lessens

3. ಬರವಣಿಗೆಯಲ್ಲಿ ಬಿಗಿ ಭದ್ರತೆ ಉಂಟಾಗುತ್ತದೆ.

4. ವಾಕ್ಯರಚನೆಯಲ್ಲಿ ಶೈಲಿ ರಂಜಿಸುತ್ತದೆ.

    The Style in writing, becomes splendid..

ಅಭ್ಯಾಸ - Exercise

1. ವಾಕ್ಯ ಅಂದರೇನು? ಎಷ್ಟು ಪ್ರಕಾರಗಳಿವೆ. ಹೆಸರಿಸಿ.

2. ಮಿಶ್ರ ಹಾಗೂ ಸಂಯೋಜಿತ ವಾಕ್ಯಗಳಿಗಿರುವ ತಾರತಮ್ಯವನ್ನು ಉದಾಹರಣೆಗಳ ಮೂಲಕ ಸಮರ್ಥಿಸಿ.

3. ವಾಕ್ಯ ಸಂಯೋಜನೆಯ ವಿಶಿಷ್ಟತೆಗಳು ಏನು?




Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...