Punctuation Marks - ಲೇಖನ ಚಿಹ್ನೆಗಳು


1. (.) ಪೂರ್ಣವಿರಾಮ Full stop

2. (,) ಅಲ್ಪವಿರಾಮ (Comma)

3. (;) ಅರ್ಧವಿರಾಮ (Semi colon)

4. (?) ಪ್ರಶ್ನಸೂಚಕ ಚಿಹ್ನೆ (Question mark)  

5. (!) ವಿಸ್ಮಯ ಬೋಧಕ ಚಿಹ್ನೆ (Exclamatory mark)

6. (“ “) ಉದ್ಧರಣ ಚಿಹ್ನೆ

7. (‘ ‘) ವಿಶೇಷಕ (Inverted commas)

8. ( ) ಆವರಣ (Brackets)

9. (:) ವಿವರಣಾತ್ಮಕ (Colen)

10. (+) ಅಧಿಕ ಚಿಹ್ನೆ (Addition mark)

11. (=) ಸಮ ಚಿಹ್ನೆ (Equal)

ನಮ್ಮೆಲ್ಲರ ವಿಚಾರವಿನಿಮಯವು ಮಾತುಗಾರಿಕೆಯಿಂದಲೇ ಅಲ್ಲ, ಬರವಣಿಗೆಯಿಂದಲೂ ಸಹ, ಮಾತಾಡುವಾಗ ಧ್ವನಿ ಸಂಕೇತಗಳು ನೆರವಾದರೆ, ಬರೆಯುವಾಗ ಲೇಖನ ಚಿಹ್ನೆಗಳು ನೆರವಿಗೆ ಬರುತ್ತವೆ. ಇವುಗಳ ನೆರವಿನಿಂದ ಬರೆದಿರುವುದನ್ನು ಓದಿ, ಅರ್ಥ ಮಾಡಿಕೊಳ್ಳಲು ಸುಲಭವಾಗುವುದು. ಆದ್ದರಿಂದ ಲೇಖನ ಚಿಹ್ನೆಗಳ ಜ್ಞಾನವೂ ಸಹ ನಮಗೆ ಅತ್ಯವಶ್ಯಕ.

1. ಪೂರ್ಣವಿರಾಮ Full stop (.)

ಆವರಣದಲ್ಲಿ ಕೊಟ್ಟಿರುವ ಗುರುತು ಪೂರ್ಣವಿರಾಮದ ಸಂಕೇತ ಬರವಣಿಗೆಯಲ್ಲಿ ಪ್ರತಿವಾಕ್ಯ ವೂಪೂರ್ಣ ಆದಾಗ ವಾಕ್ಯದ ಕೊನೆಯಲ್ಲಿ ಈ ಗುರುತನ್ನುಇಡಬೇಕಾಗುವುದು.

ಇಲ್ಲವಾದರೆ ಅರ್ಥೈಸಿಕೊಳ್ಳುವಾಗ ಹಲವಾರು ಅನರ್ಥಗಳಿಗೆ ಆಸ್ಪದ ಉಂಟಾಗುವುದು.

2. ಅಲ್ಪವಿರಾಮ Comma (,)

ಹಲವಾರು ನಾಮಪದಗಳು ವಾಕ್ಯದಲ್ಲಿ ಒಟ್ಟಿಗೆ ಬಂದಾಗ, ವಾಕ್ಯವು ಪೂರ್ಣ ಆಗುವ ಮೊದಲು, ಪ್ರತಿನಾಮ ಪದ ಶಬ್ದಗಳ ಮುಂದೆ ಅಲ್ಪ ವಿರಾಮದ ಗುರುತಾದ (,) ಅನ್ನು ಉಪಯೋಗಿಸುತ್ತೇವೆ. ಸಮುಚ್ಚಯ ಪದಗಳ ಅಂತ್ಯದಲ್ಲಿ “ಊ'' ವಿಸರ್ಗವು ಬಂದಾಗಲೂ, ಈ ಗುರುತು ಹಾಕುತ್ತೇವೆ. ಇದೇ ರೀತಿ ಸಂಬೋಧನೆಯ ಪದಗಳ ಮುಂದೆಯೂ ಸಹ ಈ ಅಲ್ಪವಿರಾಮದ ಗುರುತನ್ನು ಉಪಯೋಗಿಸುತ್ತೇವೆ.

ಉದಾಹರಣೆ Example:

ಭೀಮನು ಹಿಡಿಂಬಿ, ಘಟೋತ್ಗಜರನ್ನು ಕಾಡಿನಲ್ಲಿ ಕರೆದುಕೊಂಡು ಹೋದನು.ಲತಾಮಂಗೇಶ್ವರ್‌ ಸ್ಪಷ್ಟವಾಗಿಯೂ, ಸ್ಪುಟವಾಗಿಯೂ ಹಾಡುತ್ತಾರೆ.

ರಾಮನೇ, ಇಲ್ಲಿ ಬಾ.

3. ಅರ್ಧವಿರಾಮ (;) Semi colon

ಯಾವುದೇ ಪ್ರಧಾನವಾಕ್ಯಕ್ಕೆ ಸಂಬಂಧಿಸಿದಂತೆ ಅಧೀನ ವಾಕ್ಯಗಳು ಜೊತೆಯಲ್ಲಿ ಬಂದಾಗ ಅರ್ಧವಿರಾಮದ ಗುರುತನ್ನು ನಮೂದಿಸುತ್ತೇವೆ.

ಉದಾಹರಣೆ Example:

ನಾನೆಷ್ಟೋ ಆ ದಡ್ಡನಿಗೆ ತಿಳಿ ಹೇಳಿದೆ; ಆದರೆ ಅವನು ಅರ್ಥ ಮಾಡಿಕೊಳ್ಳಲಿಲ್ಲ.








4. ಪ್ರಶ್ನೆಸೂಚಕ ಚಿಹ್ನೆ (?) Mark of Interrogation

ಪ್ರಶ್ನವಾಚಕವಾಕ್ಯ (Interrogative sentence)ದ ಕೊನೆಯಲ್ಲಿ ಪ್ರಶ್ನಸೂಚಕ ಚಿಹ್ನೆಯನ್ನು ನಮೂದಿಸ ಬೇಕಾಗುತ್ತದೆ.

ಉದಾಹರಣೆ Example:

ರಾಮನು ಎಲ್ಲಿಗೆ ಹೋದ? ಸೀತಾ ಇನ್ನೂ ಏಕೆ ಬರಲಿಲ್ಲ?

5. ವಿಸ್ಮಯ ಸೂಚಕ ಚಿಹ್ನೆ (!) Exclamatory Sentence

ಹರ್ಷ, ಆಶ್ಚರ್ಯ, ದುಃಖ, ಕೋಪ ಮೊದಲಾದ ಭಾವಗಳನ್ನು ವ್ಯಕ್ತಗೊಳಿಸುವ ಸಮಯದಲ್ಲಿ ವಿಸ್ಮಯ ಸೂಚಕ ಚಿಹ್ನೆ (!)ಯನ್ನು ಬಳಸಲಾಗುವುದು.

ಉದಾಹರಣೆ Example:

ಆಹಾ! ತಂಗಾಳಿ ಹೇಗೆ ಬೀಸುತ್ತಿದೆ!

6. ಉದ್ಧರಣ ಚಿಹ್ನೆ (“ “) Inverted Commas

ಇದನ್ನು ಅವತರಣಿಕೆ ಚಿಹ್ನೆಎಂದೂ ಕರೆಯುವರು.

ಉದಾಹರಣೆ Example:

“ಮಾಡಿರಿ, ಇಲ್ಲವೇ ಮಡಿಯಿರಿ” ಎಂದು ಭಾರತ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಗಾಂಧೀಜಿ ನುಡಿದರು.

7. ವಿಶೇಷಕ ಚಿಹ್ನೆ (‘ ‘)

ವಿಶೇಷ ರೀತಿಯ ಹಾಗೂ ವಿಧಾಯಕ ರೂಪದ ಪದವನ್ನು ಸೂಚಿಸಲು ಈ ರೀತಿಯ ವಿಶೇಷಕ ಚಿಹ್ನೆಯನ್ನು ಬಳಸಲಾಗುವುದು.

ಉದಾಹರಣೆ Example:

“ನಾನು ಎಂಬುದನ್ನು ಬಿಡದ ಹೊರತು, ಅಹಂಕಾರ ಅಳಿಯದು.”

8. ಆವರಣ ಚಿಹ್ನೆ ( ) Brackets

ವಾಕದಲ್ಲಿ ಹಲವೆಡೆ ಹೆಚ್ಚಿನ ಮಾಹಿತಿಗಳನ್ನು ನೀಡುವಾಗ, ಅರ್ಥ ವಿವರಣೆ ಹಾಗೂ ಸಮಾನಾರ್ಥ ಪದವನ್ನು ಸೂಚಿಸುವಾಗ ಈ ಚಿಹ್ನೆಯನ್ನು ಬಳಸಲಾಗುವುದು.

ಉದಾಹರಣೆ Example:

ಕನ್ನಡದ ಮೂರು ಸಂಧಿಗಳಲ್ಲಿ ಆಗಮ ಸಂಧಿಯೂ ಒಂದು. ಆಗಮ ಅಂದರೆ ಆಗಮಿಸು (ಬರುವುದು) ಎಂದರ್ಥ.

9.ವಿವರಣಾತ್ಮಕ ಚಿಹ್ನೆ (:) Colon

ಒಂದು ಅಭಿಪ್ರಾಯವನ್ನು ವಿವರಿಸುವಾಗ, ಅದು ಮುಂದಿನಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ.

ಉದಾಹರಣೆ Example:

ಇಂದು ನಾವು ಕಲಿಯುತ್ತಿರುವ ಇತಿಹಾಸ ಪಾಠದ ವಿಷಯ: ಇಂಗ್ಲಿಷರ ಆಗಮನ.

10. ಅಧಿಕ ಚಿಹ್ನೆ (+) Plus

ಎರಡು ಪದಗಳನ್ನು ಕೂಡಿಸಿ, ಸಂಧಿ ಮಾಡಿದಾಗ

ಉದಾಹರಣೆ Example:

ರಾಮ + ಇಂದ = ರಾಮನಿಂದ, ಎರಡು + ಮೂರು = ಐದು.

11. ಸಮಾನಾರ್ಥಕ ಚಿಹ್ನೆ(=) Equals

ಎರಡು ಪದಗಳ ಅರ್ಥವೂ ಸಮ ಎನಿಸಿದಾಗ, ಆ ಭಾವವನ್ನು ವ್ಯಕ್ತಗೊಳಿಸಲು = ಗುರುತನ್ನು ಉಪಯೋಗಿಸಲಾಗುವುದು.

ಉದಾಹರಣೆ Example:

ರಜತ = ಬೆಳ್ಳಿ

ಸುವರ್ಣ = ಚಿನ್ನ

ನಭ = ಆಕಾಶ

ವೃಕ್ಷ = ಮರ






Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...