Compound Words - ಸಮಾಸಗಳು



ಸಮಾಸ ಅಂದರೇನು? Define compound words.

ಎರಡು ಅಥವಾ ಅನೇಕ ಪದಗಳು ಕೂಡಿ, ಒಂದು ಅರ್ಥವನ್ನು ಹೇಳುವಾಗ, ವಿಭಕ್ತಿ ಪ್ರತ್ಯಯಗಳು ಲೋಪವಾಗಿ, ಒಂದು ಪದ ಆಗುವುದನ್ನು ಸಮಾಸ ಎನ್ನಲಾಗುವುದು. ಸಮಾಸ ಪದದಲ್ಲಿ ಮುಖ್ಯವಾಗಿ ಎರಡು ಪದಗಳಿರುತ್ತವೆ. ಮೊದಲು ಬರುವ ಪದ ಪೂರ್ವ ಪದ ಆಗಿರುತ್ತದೆ. ಆನಂತರದಲ್ಲಿ ಬರುವ ಪದ ಉತ್ತರ ಪದ ಎನಿಸಿರುತ್ತದೆ. ಸಮಾಸ ಪದವನ್ನು ಬಿಡಿಸಿ ಬರೆದಾಗ ವಿಗ್ರಹ ವಾಕ್ಯ ಎನಿಸುವುದು.

ಉದಾಹರಣೆ Example:

ಪೂರ್ವಪದ

ತ್ತರ

ಸಮಾಸಪದ

ಮಳೆಯ

ಕಾಲ

ಮಳೆಗಾಲ

ಹಿರಿಯ

ಜೇನು

ಹೆಚ್ಚೇನು

ನೀಲವಾದ

ಉತ್ಪಲ

ನೀಲೋತ್ಪಲ

ದನಗಳೂ

ಕರುಗಳೂ

ದನಕರುಗಳೂ

 

Two or more words, joining together to form a compound word is called ಸಮಾಸ.

There are two main words in ಸಮಾಸ.

1. Poorvapada

2. Uttaranada

The first word in the compound words, will be ಪೂರ್ವಪದ. The second word will be ಉತ್ತರಪದ.

Separating the compound words, is called ವಿಗ್ರಹವಾಕ್ಯ.

Examples: as stated above.

ಸಮಾಸ ಪದಗಳಾಗುವ ಬಗೆ, Regarding the formation of compound words

1. ಎರಡು ಸಂಸ್ಕೃತ ಪದಗಳ ಸೇರ್ಪಡೆಯಿಂದ,

By adding one Sanskrit word with another Sanskrit word.

2. ಎರಡುಕನ್ನಡಪದಗಳುಪರಸ್ಪರಸೇರುವುದರಿಂದ.

By adding two Kannada words

3. ತದ್ಭವ-ತದ್ಭವ ಪದಗಳು ಕೂಡುವುದರಿಂದ.

By joining two ತದ್ಭವ words.

4. ಕನ್ನಡ ಪದದೊಂದಿಗೆ ತದ್ಭವ ಪದವು ಸೇರಿದಾಗ.

Pure Kannada word with ತದ್ಭವ Word.

ಸಮಾಸದಲ್ಲಿ ವಿಧಗಳು Kinds in Samasa

1. ತತ್ಪುರುಷ ಸಮಾಸ

2. ಕರ್ಮಧಾರಯ ಸಮಾಸ

3. ಬಹುಮ್ರಿಹಿ ಸಮಾಸ

4. ಕ್ರಿಯಾ ಸಮಾಸ

5. ಅಂಶಿಸಮಾಸ

6. ದ್ವಿಗುಸಮಾಸ

7. ದ್ವಂದ್ವಸಮಾಸ

8. ಗಮಕ ಸಮಾಸ

1. Thathpurusha samasa (Noun + Noun)

2. Karmadharaya samasa (Adjective + Noun)

3. Bahuvrihi samasa (Prominence to external word)

4. Kriya samasa (Noun + verb)

5. Amshi samasa (Indeclinable + Noun)

6. Dwigusamasa (Number + Noun).

7. Dwandwa samasa (Both words important)

8. Gamaka samasa (Pronoun + Noun)

 

() ತತ್ಪುರುಷ ಸಮಾಸ

ಎರಡು ನಾಮ ಪದಗಳು ಸೇರಿದಾಗ, ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ, ತತ್ಪುರುಷ ಸಮಾಸ ಆಗುವುದು.

There will be two nouns in this compound word. Second noun is more important than the first. It is in the nominative case. While the first noun is in some other case. This is called ತತ್ಪುರುಷಸಮಾಸ.

ಉದಾಹರಣೆ Example:

ಉತ್ತಮರಲ್ಲಿ                                    ಉತ್ತಮ  = ಉತ್ತಮೋತ್ತಮ

ದೇವರ                                          ಮಂದಿರ = ದೇವಮಂದಿರ

ಕಣ್ಣಿನಿಂದ                                       ಕುರುಡ = ಕಣ್ಣುಕುರುಡ

ಬೆಟ್ಟದ                                           ತಾವರೆ  = ಬೆಟ್ಟದಾವರೆ

ವ್ಯಾಘ್ರದ ದೆಸೆಯಿಂದ                        ಭಯ. = ವ್ಯಾಘ್ರಭಯ

ಇಂದ್ರನ                                         ಲೋಕ  = ಇಂದ್ರಲೋಕ

Examples: as stated above.

 

() ಕರ್ಮಧಾರಯ ಸಮಾಸ (Adjective + Noun)

ಪೂರ್ವ ಹಾಗೂ ಉತ್ತರ ಪದಗಳು ಲಿಂಗವಚನ, ವಿಭಕ್ತಿಗಳಿಂದ ಸಮಾಸವಾಗಿರುತ್ತದೆ. ವಿಶೇಷಣ-ವಿಶೇಷ ಸಂಬಂಧದಿಂದ ಕೂಡಿರುತ್ತದೆ. ಇದನ್ನೇ ಕರ್ಮಧಾರಯ ಸಮಾಸ ಎನ್ನಲಾಗುವುದು.

ಉದಾಹರಣೆ Example:

Adjective

Noun

Compound word

ಕೆಂಪಾದ

ತಾವರೆ

ಕೆಂದಾವರೆ

ನೀಲವಾದ

ಸಮುದ್ರ

ನೀಲಸಮುದ್ರ

ಚಿಕ್ಕದು

ಮಗು

ಚಿಕ್ಕಮಗು

ಹಿರಿದಾದ

ಮರ

ಹೆಮ್ಮರ

ಇನಿದು

ಸರ

ಇಂಚರ

The combination of an adjective and anoun is called ಕರ್ಮಧಾರಯ ಸಮಾಸ.

Examples: as shown above.

 

() ಬಹುಮ್ರಿಹಿ ಸಮಾಸ (Prominence to external word)

ಎರಡು ಇಲ್ಲವೇ ಅನೇಕ ಪದಗಳು ಕೂಡಿಕೊಂಡು ಸಮಾಸ ಆದಾಗ ಬೇರೊಂದು ಅರ್ಥದ ಪದವು ಪ್ರಧಾನವಾಗಿ ಬಂದರೆ, ಅಂತಹ ಸಮಾಸವನ್ನು ಬಹುಮ್ರಿಹಿ ಸಮಾಸ ಎನ್ನುವರು.

ಉದಾಹರಣೆ Example:

ಹಣೆಯಲ್ಲಿ ಕಣ್ಣು ಉಳ್ಳವನು ಯಾವನೋ ಅವನು ಹಣೆಗಣ್ಣ (ಈಶ್ವರ)

ಪೀತವಾದ ಅಂಬರವನ್ನು ಯಾರು ಧರಿಸಿರುವರೋ ಅವರು ಪೀತಾಂಬರಿ (ವಿಷ್ಣು)

ಚಕ್ರವನ್ನು = ಪಾಣಿಯಲ್ಲಿ ಯಾರು ಧರಿಸಿರುವರೋ ಅವರು ಚಕ್ರಪಾಣಿ (ವಿಷ್ಣು)

ವಿ.ಸೂ:

ಪೂರ್ವ- ಉತ್ತರ ಪದಗಳೆರಡೂ ಒಂದೇ ವಿಭಕ್ತಿಯಲ್ಲಿ ಇರುತ್ತವೆ.

When the words found in the combination and not important but an external person or thing becomes prominent, then such compound words will be in ಬಹುಮ್ರಿಹಿಸಮಾಸ

Examples: as shown above.

 

() ಕ್ರಿಯಾಸಮಾಸ (Noun + verb)

ಪೂರ್ವ ಪದವು ಸಾಮಾನ್ಯವಾಗಿ ದ್ವಿತೀಯಾ ವಿಭಕ್ತಿಯಲ್ಲಿದ್ದು ಉತ್ತರ ಪದವು ಕ್ರಿಯಾಪದ ಆಗಿದ್ದರೆ, ಅಂತಹ ಸಮಾಸವು ಕ್ರಿಯಾಸಮಾಸ ಎನಿಸುವುದು.

ಉದಾಹರಣೆ Example:

ಕೈಯನ್ನು + ಹಿಡಿದು = ಕೈಹಿಡಿದು

ಮೈಯನ್ನು + ತೊಳೆದು = ಮೈತೊಳೆದು

ಆಟವನ್ನು + ಅಡಿ = ಆಟವಾಡಿ

ಪೂಜೆಯನ್ನು + ಮುಗಿಸಿ = ಪೂಜೆಮುಗಿಸಿ

ಕಣ್ಣಿನಿಂದ + ಕೆಡು = ಕಂಗೆಡು

In the combination of a noun and a verb, the verb takes prominence. Such compound words are called ಕ್ರಿಯಾಸಮಾಸ.

Examples: as mentioned above.

 






() ಅಂಶಿಸಮಾಸ (Indeclinable + Noun)

ಅವ್ಯಯ ಮತ್ತು ನಾಮಪದಗಳು ಒಟ್ಟಿಗೆ ಸೇರಿ ಬಂದಾಗ ಅಂಶಿ ಸಮಾಸ ಆಗುವುದು.

ಉದಾಹರಣೆಗಳು Example:

ತಲೆಯ + ಮುಂದು = ಮುಂದಲೆ

ಕಾಲಿನ + ಹಿಂದು = ಹಿಂಗಾಲು

ತಲೆಯ + ಹಿಂದು = ಹಿಂದಲೆ  

ನೋಟದ + ಮುಂದು = ಮುನ್ನೋಟ

ಅಂಶಿ ಅಂದರೆ ಭಾಗಶಃ ಎಂದು ಅರ್ಥ ಆಗುತ್ತದೆ. ಮೇಲಿನ ಉದಾಹರಣೆಗಳು ಈ ರೀತಿಯ ಭಾಗಗಳು ಸೇರಿ, ಪೂರ್ಣಪದ ಎನಿಸಿವೆ.

When an indeclinable and a noun join together, ಅಂಶಿಸಮಾಸ arises. ಅಂಶಿ means ‘part of the whole'. Hence the indeclinable is more important.

Examples: as mentioned above.

 

() ದ್ವಿಗು ಸಮಾಸ (Number + Noun).

ಪೂರ್ವಪದವು ಸಂಖ್ಯಾವಾಚಕವೂ, ಉತ್ತರಪದವು ನಾಮಪದವೂ ಆಗಿದ್ದರೆ ಪರಸ್ಪರ ಸೇರ್ಪಡೆ ಆಗಿದ್ದರೆ, ದ್ವಿಗು ಸಮಾಸ ಎನಿಸುವುದು.

ಸಾಮಾನ್ಯವಾಗಿ ಇದನ್ನು ತತ್ಪುರುಷ ಸಮಾಸದ ಒಂದು ಭಾಗ ಎಂದು ಹೇಳುವರು.

ಉದಾಹರಣೆ Example:

ಎರಡು + ಮಡಿ = ಇಮ್ಮಡಿ

ಹತ್ತು + ರೂಪಾಯಿಗಳು = ಹತ್ತುರೂಪಾಯಿಗಳು

ದಶ + ದಿಸೆಗಳು = ದಶದಿಸೆಗಳು

ಸಪ್ತ + ಸಮುದ್ರಗಳು = ಸಪ್ತಸಮುದ್ರಗಳು

ಮೂರು + ಗಾವುದ = ಮೂರು ಗಾವುದ

When two words-are denoting a number and another in the form of a noun, combining together, is called ದ್ವಿಗುಸಮಾಸ.

Examples: as mentioned above.

 

() ದ್ವಂದ್ವ ಸಮಾಸ (Both words important)

ಪೂರ್ವ-ಉತ್ತರ ಪದಗಳೆರಡೂ ಸಮಾಸ ಆಗುವಾಗ ಪ್ರಮುಖ ಎನಿಸಿದ್ದರೆ, ಅಂತಹ ಸಮಾಸವನ್ನು ದ್ವಂದ್ವ ಸಮಾಸ ಎನ್ನುವರು.

ಉದಾಹರಣೆ Example:

ಆನೆಗಳೂ, ಕುದುರೆಗಳೂ, ಒಂಟೆಗಳೂ = ಆನೆ ಕುದುರೆ ಒಂಟೆಗಳು

ಕೆರೆಗಳೂ, ಕಟ್ಟೆಗಳೂ, ಬಾವಿಗಳೂ = ಕೆರೆ ಕಟ್ಟೆ ಬಾವಿಗಳು

ಮರವೂ, ಗಿಡವೂ, ಬಳ್ಳಿಯೂ = ಮರ ಗಿಡ ಬಳ್ಳಿಗಳು

ಸೂರ್ಯನೂ, ಚಂದ್ರನೂ, ನಕ್ಷತ್ರವೂ = ಸೂರ್ಯ ಚಂದ್ರ ನಕ್ಷತ್ರಗಳೂ

ರಾಮನೂ, ಕೃಷ್ಣನೂ, ಮುಕಂದನೂ = ರಾಮ ಕೃಷ್ಣ ಮುಕುಂದರು

When two or more words join together and all the words are equally important such compound words are called ದ್ವಂದ್ವಸಮಾಸ.

Examples: as mentioned above.

 

() ಗಮಕ ಸಮಾಸ

ಪೂರ್ವಪದವು ಸರ್ವನಾಮವೋ, ಕೃದಂತವೋ ಆಗಿದ್ದು, ಉತ್ತರ ಪದ ನಾಮಪದವೆನಿಸಿದ್ದು, ಎರಡೂ ಪದಗಳ ಸೇರ್ಪಡೆ ಆಗಿದ್ದರೆ, ಅಂತಹ ಸಮಾಸವು ಗಮಕ ಸಮಾಸ ಎನಿಸುವುದು.

ಉದಾಹರಣೆಗಳು:

ಅದು + ಮನೆ = ಆ ಮನೆ

ಇದು + ಹಣ್ಣು = ಈ ಹಣ್ಣು

ಇವನು + ಹುಡುಗ = ಈ ಹುಡುಗ

ಅವರು + ಸಹೋದರರು = ಆ ಸಹೋದರರು

ಇವು + ಪುಸ್ತಕಗಳು = ಈ ಪುಸ್ತಕಗಳು

ಅವನು + ಮನುಷ್ಯ = ಆಮನುಷ್ಯ

A compound between a pronoun and a nounm is called as ಗಮಕ ಸಮಾಸ.

Examples: as mentioned above.

 ಎರಡೂ ಸಮಾಸಗಳಲ್ಲದೆ ಅರಿ ಸಮಾಸ ಎಂಬ ಇನ್ನೂ ಒಂದು ಭೇದ ಉಂಟು. ಕನ್ನಡ ಪದದೊಂದಿಗೆ ಸಂಸ್ಕೃತ ಪದವನ್ನು ಸೇರಿಸಿ ಸಮಾಸ ಮಾಡಿದಾಗ, ಅರಿಸಮಾಸ ಆಗುವುದು.

ಉದಾಹರಣೆ Example:

ಕನ್ನಡ + ಸಂಸ್ಕೃತ = ಸಮಾಸ

ಮಳೆಯ + ಕಾಲ = ಮಳೆಗಾಲ

ತುರಗದ + ದಳ = ತುರಗದಳ

ದಳದ + ಪತಿ = ದಳಪತಿ

Besides these samasas, there is one more samasa, called ಅರಿಸಮಾಸ. The speciality in this samasa is the first word will be in Kannada and the second is in Sanskrit.

Examples: as shown above.

 

ದ್ವಿರುಕ್ತಿ (Repetition of a Word)

ಒಂದೇ ಶಬ್ದವನ್ನು ಎರಡೆರಡು ಬಾರಿ ಉಚ್ಚರಿಸಿದಾಗ, ಅಂತಹ ಶಬ್ದಗಳು ದ್ವಿರುಕ್ತಿ ಎನಿಸುವುವು. ಶಬ್ದಾರ್ಥದಲ್ಲಿ ಒತ್ತಡವನ್ನು ತರುವ ಸಲುವಾಗಿ ಈ ರೀತಿ ಎರಡೆರಡುಬಾರಿ ಹೇಳಲಾಗುವುದು.

ಉದಾಹರಣೆ Example:

ಬೇಗಬೇಗ (ತ್ವರೆಯನ್ನು ವ್ಯಕ್ತಪಡಿಸುವುದು)

ಊರೂರಿಗೆ (ಆಧಿಕ್ಯವನ್ನು ಸೂಚಿಸುವಸಲುವಾಗಿ)

(1) ಉತ್ಸಾಹದಲ್ಲಿ

ನಿಲ್ಲು ನಿಲ್ಲು, ನಾವೂ ಬರುತ್ತೇವೆ.

ತಾಳು ತಾಳು, ಅವಸರ ಪಡಬೇಡ.

(2) ಆಧಿಕ್ಯ ಸೂಚಿಸಲು

ಕುಂಬಳ ಬಳ್ಳಿಯಲ್ಲಿ ದೊಡ್ಡ ದೊಡ್ಡ ಕಾಯಿಗಳು ಬಿಟ್ಟಿವೆ.

ರಾಜಭೋಜನಕ್ಕೆ ಹೆಚ್ಚು ಹೆಚ್ಚು ಜನ ಬರುತ್ತಲೇ ಇದ್ದಾರೆ.

(3) ಸಂಭ್ರಮ ಸೂಚಕವಾಗಿ

ಭಲೇ ಭಲೇ! ಚೆನ್ನಾಗಿ ಆಡಿದ.

ಬರಬೇಕು, ಬರಬೇಕು, ಬಡವನ ಮನೆಗೆ ಭಾಗ್ಯ ಬಂದಂತಾಯಿತು.

(4) ಆಶ್ಚರ್ಯಸೂಚಕವಾಗಿ

ಅಬ್ಬಬ್ಬಾ! ಎಂತಹ ವಿಷಸರ್ಪ!

(5) ಹರ್ಷಸೂಚಕವಾಗಿ

ಅಮ್ಮಾ, ಆ ಚಿತ್ರ ಬರೆದದ್ದು ನಾನೇ ನಾನೇ!

(6) ಒಪ್ಪಿಗೆಯನ್ನು ನೀಡುವ ಅರ್ಥದಲ್ಲಿ

ಹೌದು ಹೌದು, ಅವನು ಹೇಳಿದ್ದು ನಿಜ.

When an idea has to be stressed, we repeat the same word twice. This indicates that the work happens again and again.

Example: as stated above.






Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...