ಈ ರೂಪಗಳನ್ನು ಅಪೂರ್ಣ ಕ್ರಿಯಾರೂಪ ಎಂದೂ ಕರೆಯುವರು. ಯಾವುದೇ ವಾಕ್ಯದಲ್ಲಿ ಅರ್ಥವನ್ನು ಪೂರ್ಣ ಮಾಡಲು, ಬೇರೊಂದು ಕ್ರಿಯಾಪದದ ರೂಪವನ್ನು ಬಳಸಿದಾಗ, ಅಂತಹ ಕ್ರಿಯಾರೂಪಗಳನ್ನು ಸಾಪೇಕ್ಷ ಕ್ರಿಯಾರೂಪ ಎನ್ನುವರು.
ಉದಾಹರಣೆ :
ರಾಧಾ ಒಂದೇ ಉಸುರಿಗೆ ಓಡೋಡುತ್ತಾ ತಾಯಿಯ ಬಳಿಗೆ ಬಂದಳು.
ಕರು ಬೇಗ ಬೇಗ ನೆಗೆದಾಡುತ್ತಾ ಓಟ ಕಿತ್ತಿತು.
ಮೇಲಿನ ವಾಕ್ಯಗಳಲ್ಲಿ ನೆಗೆದಾಡುತ್ತಾ, ಓಡಾಡುತ್ತಾ ಎಂಬ ಪದಗಳು ಕ್ರಿಯಾರೂಪ ಗಳಾಗಿವೆ. ಇವು ಸ್ವತಂತ್ರರೂಪದಲ್ಲಿ ಪ್ರಯೋಗದಲ್ಲಿ ಬರುವುದು. ಕ್ರಿಯಾಪದದ ಅರ್ಥವನ್ನು ಪೂರ್ಣಗೊಳಿಸಲು ಅದರೊಂದಿಗೆ ನೆರವಿನ ರೂಪದಲ್ಲಿ ಬರುತ್ತವೆ. ಆದ್ದರಿಂದಲೇ ಇವನ್ನು ಅಪೂರ್ಣ ಕ್ರಿಯಾರೂಪ ಎನ್ನುವರು.
Sometimes, in a sentence, to complete the meaning, it becomes necessary to use other form of verb. Such form of verbs are called Incomplete Verbs,
Example:
Radha rushed to her mother running and running.
The calf went on running jumping and jumping.
In the above said sentences 'running and running' and 'jumping and jumping' such words are used to complete the meaning of the main verb. i.e. 'rushed' and 'went on'.
The incomplete verbs cannot be used independently. They are used only to complete the meaning of the main verb in a sentence, to support. So they are called as 'Incomplete Verbs'.
ಸಾಪೇಕ್ಷ ಕ್ರಿಯಾರೂಪಗಳಲ್ಲಿ 5 ಉಪಭೇದಗಳು ಇವೆ.
(1) ವರ್ತಮಾನ ಕಾಲೀನ ಸಾಪೇಕ್ಷ ಕ್ರಿಯಾರೂಪ.
(2) ಭೂತಕಾಲೀನ ಸಾಪೇಕ್ಷ ಕ್ರಿಯಾರೂಪ.
(3) ನಿಷೇಧಾರ್ಥ ಸಾಪೇಕ್ಷ ಕ್ರಿಯಾರೂಪ.
(4) ಪಾಕ್ಷಿಕ ಸಾಪೇಕ್ಷ ಕ್ರಿಯಾರೂಪ.
(5) ಭಾವಾರ್ಥಸಾಪೇಕ್ಷ ಕ್ರಿಯಾರೂಪ.
There are five sub kinds in Incomplete verbs.
1. Incomplete verbs in Present Tense
2. Incomplete verbs in Past Tense.
3. Negative Incomplete Verbs.
4. Partial Incomplete Verbs.
5. Abstractive Incomplete Verbs.
(1) ವರ್ತಮಾನ ಕಾಲೀನ ಸಾಪೇಕ್ಷ ಕ್ರಿಯಾರೂಪ - Incomplete Verb in Present Tense
ಪೂರ್ಣ ಕ್ರಿಯೆಯ ಹಾಗೂ ಸಾಪೇಕ್ಷ ಕ್ರಿಯೆಯ ಕಾರ್ಯಗಳು ಒಟೊಟ್ಟಿಗೆ ನಡೆದಾಗ, ವರ್ತಮಾನ ಕಾಲೀನ ಸಾಪೇಕ್ಷ ಕ್ರಿಯಾರೂಪಗಳು ಉಂಟಾಗುವುವು.
ಉದಾಹರಣೆ - Example:
Raja became tired running and running.
The child became quiet crying and crying.
ರಾಜನು ಓಡುತ್ತಾ- ಓಡುತ್ತಾ ಸಾಕಾದನು.
ಮಗುವು ಕಿರುಚುತ್ತಾ ಕಿರುಚುತ್ತಾ ಸುಮ್ಮನಾಯಿತು.
(2) ಭೂತಕಾಲೀನ ಸಾಪೇಕ್ಷ ಕ್ರಿಯಾರೂಪ - Incomplete Verb in Past Tense
ಪೂರ್ಣ ಕ್ರಿಯಾಪದದ ಕಾರ್ಯವು ಪೂರ್ಣಗೊಳ್ಳುವ ಪೂರ್ವದಲ್ಲಿಯೇ ಕ್ರಿಯಾ ರೂಪದ ಕಾರ್ಯ ಮುಗಿದಿದ್ದರೆ, ಆ ಕ್ರಿಯಾರೂಪವು ಭೂತಕಾಲೀನ ಕ್ರಿಯಾರೂಪ ಆಗಿರುತ್ತದೆ.
When the work of the incomplete verb is completed before the work, completing by the main verb, then it is said to be Incomplete Verb in Past Tense.
ಉದಾಹರಣೆ - Example:
ಮಗು ನಡೆದು - ನಡೆದು ದಣಿಯಿತು
ಹುಡುಗರು ಆಡಿ - ಆಡಿ ಸಾಕಾದರು
The child walked and walked and tired
The boys played and played and exhausted(3) ನಿಷೇಧಾರ್ಥಕ ಸಾಪೇಕ್ಷ ಕ್ರಿಯಾಪದ - Negative Incomplete Verb
ಸಾಪೇಕ್ಷ ಕ್ರಿಯಾಪದವು ನಿಷೇದಾರ್ಥದಲಿ ಬಂದಾಗ ನಿಷೇಧಾರ್ಥಕ ಸಾಪೇಕ್ಷೆ ಕ್ರಿಯಾಪದ ಎನಿಸುವುದು.
When the incomplete verbs are formed in negative, then they are called Negative Incomplete Verb.
ಉದಾಹರಣೆ - Example:
ರಾಜನು ದಿನವೂ ಚಾಕೊಲೇಟ್ ಪಡೆಯದೆ ಪುಸ್ತಕ ಮುಟ್ಟನು.
Raju does not take the book unless getting choclate daily.
(4) ಯಾವುದೇ ಸಾಪೇಕ್ಷ ಕ್ರಿಯಾಪದವು ಪಕ್ಷದ ಅರ್ಥವನ್ನು ವ್ಯಕ್ತಗೊಳಿಸಿದಾಗ ಪಾಕ್ಷಿಕ ಸಾಪೇಕ್ಷ ರೂಪ ಆಗುವುದು.
ಉದಾಹರಣೆ:
ಕಷ್ಟಪಟ್ಟರೆ ಫಲವುಂಟು.
ಕೈ ಕೆಸರಾದರೆ ಬಾಯಿ ಮೊಸರಾಗುವುದು.
ಮೇಲಿನ ಎರಡೂ ವಾಕ್ಯಗಳಲ್ಲಿ 'ಪಟ್ಟರೆ, ಆದರೆ' ಎಂಬ ಸಾಪೇಕ್ಷ ಕ್ರಿಯಾರೂಪ ಗಳು ಪಕ್ಷಾರ್ಥವನ್ನು ಸೂಚಿಸುವುದರಿಂದ ಪಾಕ್ಷಿಕ ಸಾಪೇಕ್ಷ ಕ್ರಿಯಾರೂಪಗಳಾಗಿವೆ.
(5) ಭಾವಾರ್ಥಸಾಪೇಕ್ಷ ಕ್ರಿಯಾರೂಪಗಳು - Abstractive Incomplete Verb
ಭಾವಾರ್ಥವನ್ನು ವ್ಯಕ್ತಗೊಳಿಸುವ ಸಾಪೇಕ್ಷ ಕ್ರಿಯಾರೂಪಗಳು ಭಾವಾರ್ಥ ಸಾಪೇಕ್ಷ ಕ್ರಿಯಾರೂಪಗಳಾಗಿರುತ್ತವೆ.
Those form of verbs stating the abstractive meaning is called Abstractive Incomplete Verbs.
ಉದಾಹರಣೆ - Example:
ಮಕ್ಕಳೆಲ್ಲರೂ ಚಿತ್ರ ನೋಡಲು ಹೋದರು.
ವಿದ್ಯಾರ್ಥಿಗಳು ಪಾಠ ಕಲಿಯಲು ಶಾಲೆಗೆ ಹೋದರು.
All the children went to see the picture.
The students went to school to learn the lesson.
ಮೇಲಿನ ವಾಕ್ಯಗಳಲ್ಲಿ ನೋಡಲು, ಕಲಿಯಲು' ಈ ಕ್ರಿಯಾರೂಪಗಳು ಭಾವಾರ್ಥವನ್ನು ಸೂಚಿಸುವುದರಿಂದ ಭಾವಾರ್ಥಸಾಪೇಕ್ಷ ಕ್ರಿಯಾರೂಪಗಳಾಗಿವೆ.
In the above said sentences, the verbal forms 'to see' and 'to learn' are abstractive. Hence they are called as Abstractive Incomplete verbs.
Letter Writing in Kannada - ಪತ್ರಲೇಖನ ನಮೂನೆಗಳು
Punctuation Marks - ಲೇಖನ ಚಿಹ್ನೆಗಳು
1. (.) ಪೂರ್ಣವಿರಾಮ Full stop 2. (,)Chandassu and its Kinds - ಛಂದಸ್ಸು ಭೇದಗಳು