ಛಂದಸ್ಸು, ಗಣ
1. ಪಾದ 2. ಗಣ 3. ಮಾತ್ರೆ
Paada Gana Maathre
ಲಘು ಗುರು
ಒಂದು ಮಾತ್ರೆ ಎರಡು ಮಾತ್ರೆ
ಗುರುತು ಗುರುತು
Symbol (U) Symbol (-)
ಬಗೆಗಳು
1. ರಗಳೆ
2. ಪಟ್ಟದಿ
ಲಲಿತೆ, ಉತ್ಸಾಹ, ಮಂದಾನಿಲ, ಕಂದ ಷಟ್ಟದಿ, ಭಾಮಿನೀಷಟ್ಟದಿ
ವೃತ್ತಗಣ
1. ಉತ್ಪಲಮಾಲಾ ವೃತ್ತ
2. ಶಾರ್ದೂಲಮಾಲಾ ವೃತ್ತ
3. ಸ್ರಗ್ಧರಾ ವೃತ್ತ
4. ಮತ್ತೇಭವಿಕ್ರೀಡಿತ ವೃತ್ತ
5. ಚಂಪಕಮಾಲಾ ವೃತ್ತ
6. ಮಹಾಸ್ರಗ್ಧರಾವೃತ್ತ
ಛಂದಸ್ಸಿನ ಪರಭಾಷೆ - Definition of ಛಂದಸ್ಸು
ಛಂದಸ್ಸು ಎಂಬ ಶಬ್ದದಲ್ಲಿ ಎರಡು ಉಪಶಬ್ದಗಳಿವೆ.
1. ಛಂದ
2. ಅಚ್ಛಾದಿಸು
ಇವೆರಡೂ ಶಬ್ಬಗಳ ಸೇರ್ಪಡೆಯೇ “ಛಂದಸ್ಸು”, “ಅಚ್ಛಾದನಿ" ಎಂಬುದರ ಅರ್ಥ 'ಹೊದಿಕೆ", ಆದ್ದರಿಂದ ಕಾವ್ಯದ ಹೊದಿಕೆ ಅಥವಾ ಅಚ್ಚಾದನವನ್ನು ಛಂದಸ್ಸು ಎನ್ನಬಹುದು. ಅಂದರೆ ಸ್ವರಸಂಯೋಜನೆಗಳ ನಿಯತ ರೀತಿಯ ಆವರ್ತನೆಯಿಂದ ಉಂಟಾಗುವ ಆಂದೋಳನವನ್ನು ಛಂದಸ್ಸು ಎನ್ನಬಹುದು.
There are two sub words in the word "ಛಂದಸ್ಸು"
(1) ಛಂದ
(2) ಅಚ್ಛಾದಿಸು
“ಅಚ್ಛಾದಿಸು” gives the meaning “cover". So the beautiful cover on any poetry is called ಛಂದಸ್ಸು,
ವಂದಸ್ಸು ಕಾವ್ಯ ಅಲ್ಲ. ಆದರೆ ಕಾವ್ಯದ ಅಂದವನ್ನು ಛಂದಸ್ಸು ಪ್ರಪ್ರದ ಗೊಳಿಸುತ್ತದೆ.
'ವಂದಸ್ಸು'' itself is not 'ಕಾವ್ಯ'". But it increases the beauty of "Kavya kannika"
ಕಾವ್ಯದಲ್ಲಿ ಪ್ರಾಸ, ಗಣ, ಪಾದ ಮೊದಲಾದ ವಿಷಯಗಳು ಇರುತ್ತವೆ. ಇವೆಲ್ಲದರ ಬಗೆ ವಿವರವಾಗಿ ತಿಳಿಸುವ ಶಾಸ್ತ್ರವೇ ಕಾವ್ಯಶಾಸ್ತ್ರ.
There are so many subjects like ಪ್ರಾಸ, ಗಣ, ಪಾದ etc in the poem.
Studying in detail of the above subjects is called ಕಾವ್ಯಶಾಸ್ತ್ರ.
ಛಂದಶ್ಯಾಸ್ತ್ರದಲ್ಲಿರುವ ಪ್ರಮುಖ ಭಾಗಗಳು - Main Parts in ಛಂದಶ್ಯಾಸ್ತ್ರ
1. ಪಾದ
2. ಗಣ
3. ಮಾತ್ರಾಗಣ
4. ಲಘು-ಗುರು
5. ಅಕ್ಷರಗಣ
6. ವರ್ಣಗಣ ವೃತ್ತಗಳು
1. ಪಾದ - Paada
“ಪಾದ” ಅಂದರೆ ಸಾಲು. ಪ್ರತಿ ಪದ್ಯದ ಪ್ರಾಕಾರದಲ್ಲಿಯೂ ಇಷ್ಟಿಷ್ಟೇ ಸಾಲುಗಳು ಅಂದರೆ ಪಂಕ್ತಿಗಳು ಇರಬೇಕೆಂಬ ನಿರ್ಧಾರ ಇರುತ್ತದೆ.
ಉದಾಹರಣೆ Example:
ಷಟ್ಟದಿ...... ಆರು ಸಾಲುಗಳು
ಚೌಪದಿ...... ನಾಲ್ಕು ಸಾಲುಗಳು
ತ್ರಿಪದಿ...... ಮೂರು ಸಾಲುಗಳು
ದ್ವಿಪದಿ...... ಎರಡು ಸಾಲುಗಳು
2. ಗಣ (group)
ಅಕ್ಷರ ಅಥವಾ ಮಾತ್ರೆಗಳ ಗುಂಪನ್ನು ಗಣ ಎನ್ನಲಾಗುವುದು.
ಗಣಗಳಲ್ಲಿ ವಿಧಗಳು Kinds in group”
1. ವರ್ಣಗಣ
2. ಮಾತ್ರಗಣ
3. ಅಂಶಗಣ.
ಸಾಮಾನ್ಯವಾಗಿ ವರ್ಣ ಮತ್ತು ಮಾತ್ರೆಗಳನ್ನು ಮಾತ್ರ ಗಣ ಎಂದು ಪರಿಗಣಿಸಲಾಗುತ್ತದೆ.
Commonly letters and wind res are considered as "group"
ವರ್ಣಗಣ
ಅಕ್ಷರಗಳ ಗುಂಪನ್ನು ಆಧರಿಸಿ ಹೇಳುವುದನ್ನು ವರ್ಣಗಣ ಎನ್ನುವರು.
ಮಾತ್ರಾಗಣ
'ಮಾತ್ರೆ' ಅಂದರೆ ಅಕ್ಷರಗಳನ್ನು ಉಚ್ಚರಿಸುವಾಗ ತೆಗೆದುಕೊಳ್ಳುವ ಸಮಯ ಅಥವಾ ಕಾಲ ಎಂದರ್ಥ.
ಮಾತ್ರೆಗಳಲ್ಲಿ ಲಘು, ಗುರು ಎಂಬ ಎರಡು ಭಾಗಗಳಿವೆ. 'ಮಾತ್ರೆ' means the time taken when pronouncing the letters (alphabets). There are two kinds in 'ಮಾತ್ರೆಗಳು'
(1) Laghu ( U )
(2) Guru ( - )
ಲಘು-ಗುರು
ಸ್ವರಗಳೊಂದಿಗೆ ಸೇರಿ ಬರುವ ಹ್ರಸ್ವಗಳನ್ನು ಲಘು ಎನ್ನಬಹುದು. ಇದರ ಚಿಹ್ನೆ 'U’ ಲಘು ಒಂದು ಮಾತ್ರೆಯ ಗಣ.
All Hraswas in vowels are considered as "ಲಘು". The symbol of “ಲಘು” is 'U'. 'ಲಘು' is the group of one ಮಾತ್ರೆ.
ಉದಾಹರಣೆ Example:
ರ ತಿ ಪ ತಿ ಚ ಲ ಪ ತಿ ಸಿ ರಿ ಪ ತಿ ಚ ಳು ವ ಳಿ
U U U U U U U U U U U U U U U U
ಮೇಲಿನ ಉದಾಹರಣೆಗಳಲ್ಲಿ ಬಂದಿರುವ ಸ್ವರಗಳೆಲ್ಲವೂ ಹ್ರಸ್ವಗಳನ್ನು. ಈ ರೀತಿಯ ಸ್ವರರಹಿತ ವ್ಯಂಜನಗಳೂ ಸೇರಿದಂತೆ ಬರುವ ಹ್ರಸ್ವಗಳನ್ನು ಲಘು ಅನ್ನುವರು.
ಉಚರಿಸುವಾಗ ಎರಡು ಮಾತ್ರೆಗಳು ಬಂದರೆ, ಅವನ್ನು ಗುರು ಅನ್ನುವರು. ಈ ಗಣದ ಸಂಕೇತ ‘ - ’
When pronouncing, if we get two ಮಾತ್ರೆಗಳು, it is said to be 'ಗುರು'. The symbol of 'ಗುರು' is ‘ - ’
ಉದಾಹರಣೆ Example :
ರೂವಾರಿ (- - U ) ನಂದನ (- - U ) ಮಂದಿರ ( - U U ) ಕುಸ್ತಿ ( U - ) ಚಂದ್ರ (- U)
ಅಕ್ಷರಗಣ
ಮೂರು ಅಕ್ಷರಗಳ ಒಂದೊಂದು ಗುಂಪಿಗೂ ಸಾಮಾನ್ಯವಾಗಿ 'ಗಣ' ಎಂದು ಕರೆಯಲಾಗುವುದು. ಈ ಅಕ್ಷರಗಣಗಳಲ್ಲಿ 8 ಭಾಗಗಳಿವೆ.
1. ಮಗಣ, 2. ಭಗಣ, 3. ಯಗಣ, 4. ಸಗಣ, 5. ಜಗಣ, 6. ರಗಣ. 7. ನಗಣ, 8. ತಗಣ
There are 8 kinds of groups as stated above.
ಗಣಗಳ ಲಕ್ಷಣಗಳು The qualities of the groups and symbols
1. ಗುರು ಮೂರಿರೆ ಮಗಣ ( - - - )
2. ಲಘು ನಡುವಿಕೆ ರಗಣ ( - U - )
3. ಲಘುಮೂರಿರೆ ನಗಣ. ( U U U )
4. ಗುರುಮೊದಲಿಗೆ ಭಗಣ ( - U U )
5. ಲಘು ಮೊದಲಿಗೆ ಯಗಣ ( U - - )
6. ಗುರು ನಡುವಿರೆ ಜಗಣ ( U - U )
7. ಗುರು ಕಡೆಗಿರೆ ಸಗಣ ( U U - )
8. ಲಘು ಕಡೆಗಿರೆ ತಗಣ ( - - U )
ಇದನ್ನೇ 'ಯಮಾತಾರಾಜ ಭಾನಸಲಗಂ' ಎಂಬ ಸೂತ್ರದಲ್ಲಿ ಮೊದಲಿಂದ ಕ್ರಮವಾಗಿ ಮೂರು ಅಕ್ಷರಗಳನ್ನು ತೆಗೆದುಕೊಂಡರೆ, ಅದರ ಮೊದಲಕ್ಷರವು ಗಣದ ಹೆಸರನ್ನು ಸೂಚಿಸುತ್ತದೆ.
The same, when taken according to the definition " Iಯಮಾತಾರಾಜ ಭಾನಸಲಗಂ', its first letter denotes the name of the group
ಯಮಾತಾ ( U - - ) ಯಗಣ
ಮಾತಾರಾ ( - - - ) ಮಗಣ,
ತಾರಾಜ ( - - U ) ಸಗಣ
ರಾಜಭಾ ( - U - ) ರಗಣ
ಜಭಾನ ( U - U ) ಜಗಣ
ಭಾನಸ ( - U U) ಭಗಣ
ನಸಲ ( U U U) ನಗಣ
ಸಂಗಂ ( U U - ) ಸಗಣವರ್ಣಗಣ ವೃತ್ತಗಳು
ಈ ರೀತಿಯ ವೃತ್ತದ ಭೇದಗಳನ್ನು ಕೆಳಕಂಡ ಪದ್ಯದಲ್ಲಿ ಸ್ವಾರಸ್ಯ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಹೀಗೆ ಹೇಳಲಾಗಿದೆ.
The kinds in ವರ್ಣಗಣವೃತ್ತ one is shown well in the undermentioned shloka interestingly and meaningfully
ಗುರುವಂದಾದಿಯೋಳುತಲ೦, ಗುರು ಮೊದಲರಾಗೆ ಶಾರ್ದೂಲಮಾ. ಗುರುನಾಲ್ಕಾಗಿರಲಂತು ಪ್ರಗ್ನರ, ಲಘುದ್ವಂದ್ವಂಗುರುದ್ವಂದ್ವಮಾಗಿರೆ ಮತ್ತೇಭ, ಲಘು ದ್ವಯಗುರುವಾದಕ್ಕುಂ ಮಹಾಸ್ರಗ್ತಾರಂ, ಹರಿಸಾಕ್ಷಿ ಲಘುನಾಲ್ಕು ಚಂಪಕಮಿನಾರಂ.
Meaning -
“ಪದದ ಆದಿಯಲ್ಲಿ ಒಂದು ಗುರು ಇದ್ದರೆ ಉತ್ಸಲಾಮಾಲಾ, ಆದಿಯಲಿ ಮೂರು ಗುರುಗಳು ಬಂದಿದ್ದರೆ ಶಾರ್ದೂಲವಿಕ್ರೀಡಿತಾ, ಆದಿಯಲ್ಲಿ ನಾಲ್ಕು ಗುರು ಇದ್ದರೆ ಸಗರ, ಆದಿಯಲ್ಲಿ ಎರಡು ಗುರು, ಎರಡು ಲಘು ಇದ್ದರೆ ಮತ್ತೇಭವಿಕ್ರೀಡಿತ, ಆದಿಯಲಿ ಎರಡು ಲಘು, ನಂತರ ಮೂರು ಗುರು ಬಂದರೆ ಮಹಾಸಗ ರ, ಆದಿಯಲಿ ನಾಲ್ಕು ಲಘುಗಳು ಬಂದಿದ್ದರೆ ಚಂಪಕಮಾಲಾವೃತ್ತಗಳೆಂದು ಭಾವಿಸಿ, ಅನಂತರ ಪ್ರಸಾರದೊಂದಿಗೆ ನಿರ್ಧರಿಸಿಕೊಳ್ಳಬೇಕು.”
ವೃತ್ತಗಳು
(1) ಉತ್ಸಲಾಮಾಲಾವೃತ್ತ - Utpalamala Vruttha
(ಉತ್ಸಲಾಮಾಲೆಯಪ್ಪುದುಭರಂ ನಭಭಂರಲಗಂನೆಗಿರಲ್)
ಇದರಲ್ಲಿ 4 ಸಮಾನ ಸಾಲುಗಳಿರುವುವು.
ಪ್ರತಿ ಸಾಲಿನಲ್ಲಿಯೂ 20 ಅಕ್ಷರಗಳಿರುತ್ತವೆ.
ವ್ಯಂಜನ ವರ್ಣಗಳು ಪರಿಗಣನೆಗೆ ಬರುವುದಲ್ಲ.
ನಾಲ್ಲೂ ಸಮಾನಸಾಲುಗಳ ಪ್ರತಿ ಸಾಲಿನಲ್ಲಿಯೂ ಭ, ರ, ನ, ಭ, ಭ, ರ ಗಣಗಳೂ ಜೊತೆಗೆ ಒಂದು ಲಘು ಇನ್ನೊಂದು ಗುರು ಇರುತ್ತವೆ.
Four equal lines.
Twenty letters in each line.
No consonants to be considered.
In all four equal lines, there will be the groups of ಭ, ರ, ನ, ಭ, ರ, in addition to one ಲಘು and another ಗುರು.
(2) ಚಂಪಕ ಮಾಲಾವೃತ್ತ - Champakamaala Vruttha
ಸೂತ್ರ
(ನಜಭಜಜಂ ಜರ ಬಗೆಗೊಳ್ಳುತಿರೆ ಚಂಪಕಮಾಲೆಯೆಂದಪರ್)
ನಾಲ್ಕು ಪಾದಗಳಿರುತ್ತವೆ.
ಪ್ರತಿ ಪಾದದಲ್ಲೂ 21 ಅಕ್ಷರಗಳಿರುತ್ತವೆ.
ಪ್ರತಿ ಪಾದದಲ್ಲೂ ನ, ಜ, ಛ, ಜ, ಜ, ಜ, ರ ಗಣಗಳು ಒಳಗೊಂಡಿರುತ್ತವೆ.
ಸುಲಭ ಸೂತ್ರ
(ಲಘು ನಾಲ್ಕು ಚಂಪಕಂ)
ಕ್ರಮವಾಗಿ 4 ಲಘುಗಳು ಕ್ರಮವಾಗಿ ಬಂದರೆ ಚಂಪಕಮಾಲಾವೃತ್ತ.
(ಶಬರಶಂಕರವಿಲಾಸ)
(3) ಶಾರ್ದೂಲ ವಿಕ್ರೀಡಿತ ವೃತ್ತ - Shardoola Vikreedita Vruttha
ಸೂತ್ರ
(ಕಣೋಪ್ಪಲ್ ಮಸಜಂ ಸತಂ ತಗಮುಮಾ ಶಾರ್ದೂಲ ವಿಕ್ರೀಡಿತಂ)
ನಾಲ್ಕು ಸಮಾಸ ಪದಗಳಿರುತ್ತವೆ.
ಪ್ರತಿ ಸಾಲಿನಲ್ಲಿ 19 ಅಕ್ಷರಗಳಿರುತ್ತವೆ.
ಪ್ರತಿ ಸಾಲಿನಲ್ಲಿಯೂ ಮ, ಸ, ಜ, ಸ, ತ, ತ ಎಂಬ ಆರು ಗಣಗಳಿರುತ್ತವೆ.
ಜೊತೆಗೆ ಒಂದು ಗುರುವೂ ಇರುತ್ತದೆ.
(4) ಮತ್ತೇಭವಿಕ್ರೀಡಿತ ವೃತ್ತ - Matthebhavikreedita Vruttha
ಸೂತ್ರ
(ಸಭರಂ ನಂ ಮಲಯಲಂಗಮು ಬಗೆಗೊಳಲ್ ಮತ್ತೇಭವಿಕ್ರೀಡಿತಂ)
ಸುಲಭ ಸೂತ್ರ
ಆದಿಯಲ್ಲಿ ಎರಡು ಬಂದು, ನಂತರ ಎರಡು ಗುರು ಬಂದರೆ, ಮತ್ತೇಭವಿಕ್ರೀಡಿತ,
ಇದರಲ್ಲೂ ನಾಲ್ಕು ಸಮಾಸ ಪದಗಳಿರುತ್ತವೆ.
ಪ್ರತಿ ಪಾದದಲ್ಲೂ 20 ಅಕ್ಷರಗಳಿರುತ್ತವೆ.
ಸ ಭ ರ ನ ಮ ಯ ಗಣಗಳಿರುತ್ತವೆ.
ಕೊನೆಯಲ್ಲಿ ಒಂದು ಲಘು ಹಾಗೂ ಒಂದು ಗುರು ಬಂದಿರುತ್ತದೆ.
(5) ಸಗ್ಧರಾ ವೃತ್ತ - Sthagdhara Vruttha
ಸೂತ್ರ
(ತೋರಲ್ ಮುರಂಭಾನಂ ಮಾಯಗಣ ಮದುವೆ ತಾಂ ಸಗ ರಾವತ ಮಾಡಕಂ)
ಸುಲಭ ಸೂತ್ರ
ಗುರುಗಳು ಅನುಕ್ರಮ ರೀತಿಯಲ್ಲಿ ನಾಲ್ಕು ಬಂದರೆ ಸಗ್ಧರಾವೃತ್ತ ಎನಿಸುವುದು.
ಗುರು ನಾಲ್ಕಾಗಿರಲಂತು ಸ್ರಗ್ಧರೆ
ನಾಲ್ಕು ಸಮ ಪಾದಗಳಿರುತ್ತವೆ.
ಪ್ರತಿ ಸಾಲಿನಲ್ಲೂ ಇಪ್ಪತ್ತೊಂದು (21) ಅಕ್ಷರಗಳಿರುತ್ತದೆ.
ಮ ರ ಭ ವ ನ ಯ ಯ ಯ ಗಣಗಳಿರುತ್ತವೆ.
(6) ಮಹಾಸ್ತಗ್ಧರಾವೃತ್ತ - Mahaa Sthagdhara Vruttha
ಸೂತ್ರ
ಸತತಂ ನಂ ಸಂ ರರುಗಂ ನೆರೆದೆಸೆಯ ಮಹಾಸ್ರಗ್ಧರಾ ವೃತ್ತಮಕ್ಕುಂ.
ಸುಲಭ ಸೂತ್ರ
ಲಘುದ್ವಯ ಶ್ರೀಗುರುವಿನಕುಂ ಅಂದರೆ ಪ್ರಾರಂಭದಲ್ಲಿ ಎರಡು ಲಘುಗಳು ಆ ನಂತರ ಮೂರು ಗುರುಗಳಿರುತ್ತದೆ.
(2) ರಗಳೆಗಳು
1. ಉತ್ಪಾಹರಗಳೆ
2. ಮಂದಾನಿಲರಗಳೆ
3. ಲಲಿತರಗಳೆ
ಸೂತ್ರ
ಪಾದ-ನಿಯಮ ಇಲ್ಲದೆ, ಸಮಾನವಾದ ಮಾತ್ರೆಗಳಿಂದ ಕೂಡಿದ ಪದ್ಯ ರಚನೆಯನ್ನು ರಗಳೆ ಎನ್ನುವರು.
(1) ಉತ್ಸಹರಗಳೆ - Uthsaaha Ragale
ಎರಡು ಸಾಲುಗಳಲ್ಲಿ ಪ್ರಾಸ ನಿಯಮದೊಂದಿಗೆ ಮೂರು ಮಾತ್ರೆಯ ನಾಲ್ಕು ಗಣಗಳಿರುತ್ತದೆ. ಸಾಲುಗಳ ಯಾವ ನಿಯಮವೂ ಇರದು.
(2) ಮಂದಾನಿಲ ರಗಳೆ - Mandaanila Ragale
ಪಾದಗಳ ನಿಯಮ ಇಲ್ಲ.
ಪ್ರತಿ ಪಾದದಲ್ಲೂ 4 ಮಾತ್ರೆಗಳ 4 ಪಾದಗಳಿರುತ್ತವೆ.
ಎರಡೆರಡು ಸಾಲುಗಳಿರುತ್ತವೆ.
(3) ಲಲಿತರಗಳೆ - Lalitha Ragale
ನಾಲ್ಕು ಸಾಲುಗಳಿರುತ್ತವೆ.
ಮೊದಲ ಎರಡನೆಯ ಸಾಲುಗಳಲ್ಲಿ ಆದಿ ಪ್ರಾಸ-ಅಂತ್ಯ ಪ್ರಾಸಗಳಿರುತ್ತವೆ.
5 ಮಾತ್ರೆಗಳ ನಾಲ್ಕು ಗಣಗಳಿರುತ್ತವೆ.
ಉಳಿದೆರಡು ಸಾಲುಗಳಲ್ಲಿ ಆದಿ ಪ್ರಾಸ-ಅಂತ್ಯ ಪ್ರಾಸಗಳೂ ಇರುತ್ತವೆ.
ಇಂತಹ ಪದ ರಚನೆಯನ್ನು ಲಲಿತರಗಳೆ ಎನ್ನುವರು.
(3) ಷಟ್ಟದಿಗಳು-ಲಕ್ಷಣಗಳು - Shatpadi- Qualities
ಆರು ವಿಧಗಳು- Six kinds
1. ಶರಷಟ್ಟದಿ
2. ಕುಸುಮ ಷಟ್ಟದಿ
3. ಭೋಗಷಟ್ಟದಿ
4. ಭಾಮಿನೀ ಷಟ್ಟದಿ
5. ಪರಿವರ್ಧಿನಿ ಷಟ್ಟದಿ
6. ವಾರ್ಧಿಕ ಷಟ್ಟದಿ
7. ಕಂದ ಪಟ್ಟದಿ
(1) ಕಂದಷಟ್ಟದಿ - Kanda Shatpadi
ಒಂದು ಮೂರನೆಯ ಪಾದಗಳಲ್ಲಿ 12 ಮಾತ್ರೆಗಳು
ಎರಡು ನಾಲ್ಕನೆಯ ಪಾದಗಳಲ್ಲಿ 20 ಮಾತ್ರೆಗಳು
ಕೆಳಗೆ ಕೊಟ್ಟಿರುವ ಪದ್ಯದಲ್ಲಿ 2 ಸಾಲುಗಳಿಗೆ ಮಾತ್ರ ಗುರು ಹಾಕಿ ತೋರಿಸಿದ.
(2) ಶರಷಟ್ಟದಿ - Shara Shatpadi
ಷಟ್ = ಆರು, ಅದಿ = ಪಾದಗಳಿದ್ದು
Poem is in six lines
ಲಕ್ಷಣಗಳು
6 ಸಾಲುಗಳಿರುತ್ತವೆ.
1,2,4,5ನೆಯ ಸಾಲುಗಳು ಸಮವಾಗಿರುತ್ತವೆ.
4 ಮಾತ್ರೆಯ 2 ಗಣಗಳಿಂದ ಕೂಡಿರುತ್ತವೆ.
3,6ನೆಯ ಸಾಲುಗಳು ಗುರು ಅಕ್ಷರದಿಂದ ಮುಕ್ತಾಯ ಹೊಂದುತ್ತದೆ. ಎಲ್ಲಿಯೂ ಈ ಜಗಣ ಬಂದಿರುವುದಿಲ್ಲ.
(3) ಕುಸುಮ ಷಟ್ಟದಿ - Kusuma Shatpadi
ಲಕ್ಷಣಗಳು
6 ಪಾದಗಳಿರುತ್ತವೆ.
1,2,4,5ನೆಯ ಸಾಲುಗಳು ಸಮವಾಗಿರುತ್ತದೆ.
ಪ್ರತಿ ಸಾಲಿನಲ್ಲಿಯೂ ಐದೈದು ಮಾತ್ರೆಯ ಎರಡು ಗಣಗಳಿರುತ್ತವೆ.
3,6ನೆಯ ಸಾಲುಗಳು ಒಂದೇ ಸಮವಾಗಿರುತ್ತದೆ.
ಅಲ್ಲದೆ ಐದೈದು ಮಾತ್ರೆಗಳ 3 ಗಣಗಳೊಂದಿಗೆ ಹಾಗೂ ಒಂದು ಗುರುವಿನೊಂದಿಗೆ ಕೂಡಿರುತ್ತವೆ.
(4) ಭೋಗಷಟ್ಟದಿ - Bhoga Shatpadi
ಲಕ್ಷಣಗಳು
ಪಟ್ಟದಿ ಹೆಸರಿಗೆ ತಕ್ಕಂತೆ ಆರು ಪಾದಗಳಿರುತ್ತವೆ.
1,2,4,5ನೆಯ ಸಾಲುಗಳು ಒಂದೇ ಸಮವಾಗಿರುತ್ತವೆ.
3-3 ಮಾತ್ರೆಯ 4 ಗಣಗಳಿಂದ ಕೂಡಿರುತ್ತವೆ.
3 ಮತ್ತು 6ನೆಯ ಸಾಲುಗಳು ಒಂದೇ ಸಮನಾಗಿದ್ದು 3 ಮಾತ್ರೆಗಳ 6 ಗಣಗಳಿಂದಲೂ 1 ಗುರುವಿನಿಂದಲೂ ಕೂಡಿರುತ್ತದೆ.
(5) ಭಾಮಿನೀ ಷಟ್ಟದಿ - Bhaamini Shatpadi
ಲಕ್ಷಣಗಳು
6 ಪಾದಗಳನ್ನು ಒಳಗೊಂಡಿರುತ್ತದೆ.
1,2,4,5ನೆಯ ಸಾಲುಗಳು ಸಮ ಎನಿಸಿರುತ್ತವೆ.
3 ಮತ್ತು 4 ಮಾತ್ರೆಗಳ 4 ಗಣಗಳಿರುತ್ತವೆ.
3ನೆಯ 6ನೆಯ ಸಾಲುಗಳು ಸಮವಾಗಿದ್ದರೂ, 3 ಮತ್ತು 4 ಮಾತ್ರೆಗಳ 6 ಗಣಗಳಿಂದಲೂ,
1 ಗುರುವಿನಿಂದಲೂ ಕೂಡಿರುತ್ತವೆ.
1,2,4,5 ನೆಯ ಸಾಲಿನಲ್ಲಿ 14 ಮಾತ್ರೆಗಳೂ, 3 ಮತ್ತು 6ನೆಯ ಸಾಲಿನಲ್ಲಿ 21| ಮಾತ್ರೆಗಳೂ ಇರುತ್ತವೆ.
(6) ಪರಿವರ್ಧಿನಿ ಷಟ್ಟದಿ - Parivardhini Shatpadi
ಲಕ್ಷಣಗಳು
ಪಟ್ಟದಿ ಆದುದರಿಂದ ಇದರಲ್ಲೂ 6 ಪಾದಗಳು ಇರುತ್ತವೆ.
1,2,4,5ನೆಯ ಸಾಲುಗಳು ಒಂದೇ ಸಮನಾಗಿದು, 4 ಮಾತ್ರೆಗಳ 4 ಗಣಗಳಿಂದ ಕೂಡಿರುತ್ತವೆ.
3 ಮತ್ತು 6ನೆಯ ಸಾಲುಗಳೂ ಸಮವಾಗಿದ್ದು ಒಂದೇ ಮಾತ್ರೆಯ 6 ಗಣಗಳಿಂದ ಕೂಡಿರುತ್ತದೆ.
(7) ವಾರ್ಧಿಕ ಷಟ್ಟದಿ - Vaardhika Shatpadi
ಲಕ್ಷಣಗಳು
ಈ ಬಗೆಯ ಷಟ್ನದಿಯಲ್ಲಿಯೂ ಆರು ಸಾಲುಗಳಿವೆ.
1,2,45ರಲ್ಲಿ 5 ಮಾತ್ರೆಗಳ 4 ಗಣಗಳಿವೆ.
3,6ನೆಯ ಸಾಲುಗಳು ಸಮವಾಗಿದ್ದು, ಅವುಗಳಲ್ಲಿ ಐದು ಮಾತ್ರೆಗಳ ಆರು ಗಣ ಇರುತ್ತವೆ.
ಕೊನೆಯ ಅಕ್ಷರ ಲಘುವಾಗಿದ್ದರೂ, ಗುರು ಎಂದು ಪರಿಗಣಿಸಲಾಗುವುದು.
ಅಭ್ಯಾಸ - Exercise
(ಅ)
1. ಕಾವ್ಯಶಾಸ್ತ್ರದಲ್ಲಿ ಛಂದಸ್ಸಿನ ಅವಶ್ಯಕತೆಯನ್ನು ವಿವರಿಸಿ.
2. ಛಂದಸ್ಸಿನಲ್ಲಿ ಬರುವ ವಿಧಗಳು ಎಷ್ಟು? ಹೆಸರಿಸಿ.
3. ಗಣ ಅಂದರೇನು? ಅವುಗಳ ಸಂಕೇತಗಳನ್ನು ತಿಳಿಸಿ.
4, “ಯಮಾತಾ ರಾಜಬಾನಸಲಗಂ' ಸೂತ್ರದಲ್ಲಿ ಬರುವ ಗಣಗಳು ಯಾವುವು? ಅವುಗಳಲ್ಲಿ ಪ್ರತಿಗಣದ ಸಂಕೇತವನ್ನು ತಿಳಿಸಿ,
5. ಮಾತ್ರೆಗಳು ಅಂದರೇನು? ಎಷ್ಟು ವಿಧ? ಅವುಗಳ ತಾರತಮ್ಯ ಏನು?
6. ವರ್ಣವೃತ್ತದ ಭೇದದ ಬಗ್ಗೆ ಖ್ಯಾತ ಕರ್ನಾಟಕಂ'ನಲ್ಲಿ ಇರುವ ಸ್ವಾರಸ್ಯ ರೀತಿಯ ಶ್ಲೋಕ ಏನು?
(ಆ)
ಕೆಳಗೆ ಕೊಟ್ಟಿರುವ ಪದ್ಯದ ಸಾಲುಗಳ ಮೇಲೆ ಸಾಂಕೇತಿಕ ರೂಪಗಳನ್ನು ತಿಳಿಸಿ. ಜೊತೆಗೆ ಯಾವ ಛಂದಸ್ಸಿನಲ್ಲಿದೆ ಎಂಬುದನ್ನು ತಿಳಿಸಿ.
ಮೆರೆಯುತಿದ್ದ ಭಾಗ್ಯವೆಲ್ಲ
ಹರಿದು ಹೋಯಿತೆನುತ ತಿರುಕ
ಮರಳಿ ನಾಚಿ ಪೋಗುತಿದ್ದ ಕನಸಿನಲ್ಲಿಯೇ||
ಧರೆಯ ಭೋಗವನ್ನು ಮೆಚ್ಚಿ
ಪರವಮರೆತು ಕೆಡಲು ಬೇಡ
ಧರೆಯ ಭೋಗಕನಸಿನಂತೆ ಕೇಳು ಮನವಾll
Letter Writing in Kannada - ಪತ್ರಲೇಖನ ನಮೂನೆಗಳು
Punctuation Marks - ಲೇಖನ ಚಿಹ್ನೆಗಳು
1. (.) ಪೂರ್ಣವಿರಾಮ Full stop 2. (,)Chandassu and its Kinds - ಛಂದಸ್ಸು ಭೇದಗಳು