Krudantha - ಕೃದಂತ ವಿಧಗಳು


1. ಕೃದಂತ ನಾನು (Krudanthanama)

(a) ವರ್ತಮಾನ ಕೃದಂತ - Present Krudantha

(b) ಭೂತ ಕೃದಂತ - Past Krudantha

(c) ನಿಷೇಧ ಕೃದಂತ - Negative Krudantha

2. ಕೃದಂತ ಭಾವನಾಮ (Krudantha Bhavanama)

3. ಕೃದಂತಾವ್ಯಯ (Krudanthavyava)

(a) ಕರ್ತೃ (ಏಕಕೃದಂತಾವ್ಯಯ) Ekakrudanthavyaya

(b) ಭಿನ್ನಕರ್ತೃ (ಕೃದಂತಾವ್ಯಯ) Bhinnakarthrukrudanthavyaya

ಕ್ರಿಯಾಪದಗಳಲ್ಲಿ ಧಾತುವಿಗೆ ಕೃತ್ ಪ್ರತ್ಯಯಗಳು ಸೇರಿದಾಗ ಕೃದಂತಗಳು ಆಗುವುವು.

In verbs, when "ಕೃತ್" suffixes are added to "ಧಾತು" (verb), theyt become Krudanthas.

ಉದಾಹರಣೆ:

      ಧಾತು + ಕೃತ್ ಪ್ರತ್ಯಯ = ಕೃದಂತ

      ಕೊಡು + ಗೆ = ಕೊಡುಗೆ

      ತೊಡು + ಗೆ = ತೊಡುಗೆ

       ಅಳ + ಅತೆ = ಅಳತೆ

       ಬಡಿ + ತ = ಬಡಿತ


ಮೇಲಿನ ಉದಾಹರಣೆಗಳಲ್ಲಿ ತೊಡು, ಕೊಡು, ಅಳೆ, ಬಡಿ ಇವೆಲ್ಲವೂ ಧಾತುರೂಪಗಳೇ.. ಇವುಗಳ ಕೊನೆಯಲ್ಲಿ ಗೆ, ಅತ, ತ, ಕೃತ್ ಪ್ರತ್ಯಯಗಳು ಸೇರಿ ಕೃದಂತಗಳೆನಿಸಿವೆ.

ಕೃದಂತಗಳಲ್ಲಿ ಮೂರು ಮುಖ್ಯ ಭೇದಗಳು.

There are three kinds in Krudanthas.

1. ಕೃದಂತನಾಮ Krudanthanama

2. ಕೃದಂತಭಾವನಾಮ Krudantha bhavanama

3. ಕೃದಂತಾವ್ಯಯ Krudanthavyaya

 ಕೃದಂತನಾಮ - Krudantanama

ಕೃತ್ ಪ್ರತ್ಯಯಗಳಿಂದ ಕೂಡಿರುವ ನಾಮಪದಗಳು ಕೃದಂತನಾಮಗಳೆನಿಸುವುವು.

The nouns with the inclusion of "ಕೃತ್ " suffixes are called "Krudantha namas".

ಮಾಡು + ಉವ + ಅ = ಮಾಡುವ

ತಿನ್ನು + ಉವ + ಅ = ತಿನ್ನುವ

ನಡೆ + ದ + ಅ = ನಡೆದ

ಪಡೆ + ದ + ಅ = ಪಡೆದ

ಹೋಗು + ಉವ + ಅ = ಹೋಗುವ

ಮೇಲಿನ ಉದಾಹರಣೆಗಳಲ್ಲಿ ಉವ, ವ, ದ+ಅ ಪ್ರತ್ಯಯಗಳು ಸಂಬಂಧಿಸಿದ ಧಾತುಗಳಿಗೆ ಸೇರಿ ಕೃದಂತನಾಮಗಳಾಗಿವೆ.

ಕೃದಂತದಲ್ಲಿ ಮೂರು ಉಪಭೇದಗಳಿವೆ.

There are three sub kinds in Krudantha.

1.ವರ್ತಮಾನ ಕೃದಂತ

2. ಭೂತಕೃದಂತ

3. ನಿಷೇಧ ಕೃದಂತ

ವರ್ತಮಾನ ಕೃದಂತ - Present Krudantha

ಓಡು + ವ + ಅ = ಓಡುವ

ಕೊಡು + ವ + ಅ = ಕೊಡುವ

ನಡೆ + ಉವ + ಅ = ನಡೆಯುವ

ಮರೆ + ಉವ +ಮರೆಯುವ

ಹೀಗೆಯೇ

- ತಿಳಿಯುವ, ತಿರುಗುವ, ಬದುಕುವ ಇತ್ಯಾದಿ.

ಭೂತಕೃದಂತ - Past Krudantha

ನೋಡು + ದ + ಅ = ನೋಡಿದ

ಮಾಡು + ದ + ಅ = ಮಾಡಿದ

ತೋಡು + ದ + ಅ = ತೋಡಿದ

ನಿಷೇಧ ಕೃದಂತ - Negative Krudantha

ಆಡು + ಅದ + ಅ = ಆಡದ

ನೋಡು + ಅದ + ಅ = ನೋಡದ

ಬಾಡು + ಅದ + ಅ = ಬಾಡದ

ಮರೆ + ಅದ + ಆ = ಮರೆಯದ

-ಹೀಗೆಯೇ

ಪಡೆಯದ ಚಲಿಸದ ತಾಳದ ಕರೆಯದ ತಿಳಿಯದ

ತೋರದ  ಬಾರದ ಹೋಗದ ಕರೆಯದ ಇತ್ಯಾದಿ

ವಿಶೇಷ ಸೂಚನೆ

ಕೃದಂತದ ಮೇಲೆ ನಾಮವಿಭಕ್ತಿಗಳು ಸೇರಿದಾಗ ಪುಲ್ಲಿಂಗ, ಸ್ತ್ರೀಲಿಂಗ, ಸಪುಂಸಕಲಿಂಗಗಳಲ್ಲಿ ಹಲವಾರು ರೀತಿಯ ವ್ಯಾಕರಣ ವಿಶೇಷಗಳು ಕಂಡುಬರುವುವು.

ಉದಾಹರಣೆ - Examples

ಪುಲ್ಲಿಂಗದಲ್ಲಿ

ಹೋಗುವ + ಅವನು + ಉ = ಹೋಗುವವನು

ಮಾಡುವ + ಅವನು + ಅನ್ನು = ಮಾಡುವವನನ್ನು

ಹೋಗುವ + ಅವನು + ಉ = ಹೋಗುವವನು

ನೋಡುವ + ಅವನು + ಇಂದ= ನೋಡುವವನಿಂದ

ಬೇಡುವ + ಅವನು + ಇಗೆ = ಬೇಡುವವನಿಗೆ

ಕೊಡುವ + ಅವನು + ಅಲ್ಲಿ = ಕೊಡುವವನಲ್ಲಿ

ಸ್ತ್ರೀಲಿಂಗದಲ್ಲಿ

ಮಾಡುವ + ಅವಳು + ಉ = ಮಾಡುವವಳು

ಮಾಡುವ + ಅವಳು + ಅನ್ನು = ಮಾಡುವವಳನ್ನು

ಮಾಡುವ + ಅವಳು + ಯಿಂದ ಮಾಡುವವಳಿಂದ

ಮಾಡುವ + ಅವಳು + ದೆಸೆಯಿಂದ = ಮಾಡುವವಳ ದೆಸೆಯಿಂದ

ಮಾಡುವ + ಅವಳು + ಅ = ಮಾಡುವವಳ

ಮಾಡುವ + ಅವಳು + ಅಲ್ಲಿ = ಮಾಡುವವಳಲ್ಲಿ

ಮಾಡುವ + ಅವಳು + ಇಗೆ = ಮಾಡುವವಳಿಗೆ

ನಪುಂಸಕಲಿಂಗದಲ್ಲಿ

ನೋಡುವ + ಉದು + ಉ = ನೋಡುವುದು

ಬೇಡುವ + ಉದು + ಉ = ಬೇಡುವುದು

ಕೊಡುವ + ಉದು + ಉ = ಕೊಡುವುದು

ತಿನ್ನುವ + ಉದು + ಉ = ತಿನ್ನುವುದು

ಮಲಗುವ + ಉದು + ಅನ್ನು = ಮಲಗುವುದನ್ನು

ನಡೆಯುವ + ಉದು + ಕ್ಕೆ = ನಡೆಯುವುದಕ್ಕೆ

ಹೋಗುವ + ಅವುಗಳು + ಯಿಂದ = ಹೋಗುವವುಗಳಿಂದ

ಓದುವ + ಅವುಗಳು + ಇಗೆ = ಓದುವವುಗಳಿಗೆ

ವಿಶೇಷ ಸೂಚನ

ಕೃದಂತ ಶಬ್ಬಗಳ ಮೇಲೆ ಪುಲ್ಲಿಂಗ ಏಕವಚನದಲ್ಲಿ ಅವನು”, ಸ್ತ್ರೀಲಿಂಗ ಏಕವಚನದಲ್ಲಿ 'ಅವಳು', ಪುಲ್ಲಿಂಗ-ಸ್ತ್ರೀಲಿಂಗ ಬಹುವಚನಗಳಲ್ಲಿ ಅವರು”, ನಪುಂಸಕ ಏಕವಚನದಲ್ಲಿ “ಉದು”, ಬಹುವಚನದಲ್ಲಿ “ಉವು' ಎಂಬ ಪ್ರತ್ಯಯಗಳು ಸೇರಿ, ಕೃದಂತನಾಮಗಳಾಗುವುವು. ಇವಲ್ಲದೆ “ಉದು, ಉವು' ಪ್ರತ್ಯಯಗಳಿಗೆ ಬದಲಾಗಿ “ಅದು, ಅವು' ಎಂಬ ಪ್ರತ್ಯಯಗಳನ್ನು ಬಳಸುವುದೂ ಸಹ ರೂಢಿಯಲ್ಲಿದೆ.

ಉದಾಹರಣೆ - Example:

ಹೊರಡುವುದು ಹೊರಡದವು.

ಮುಳುಗುವುದು ಮುಳುಗದವು ಇತ್ಯಾದಿ

“ಅದು' ಎಂಬ ಪ್ರತ್ಯಯವು ಹಲವೆಡೆ “ಅದ್ದು” ಇಲ್ಲವೆ “ದು” ಎಂದೂ ಆಗುವುದು.

ಉದಾಹರಣೆ - Example:

ಮಾಡಿದ್ದು ನೋಡಿದ್ದು ತಿಂದದ್ದು ಪಡೆದಿದ್ದು

ಹಾಡಿದ್ದು ಹೋಗಿದ್ದು ಬೇಡಿದ್ದು ಬದುಕಿದ್ದು ಇತ್ಯಾದಿ

ಕೃದಂತ ಭಾವನಾಮ - Krudantha Bhavanama

ಸಾಮಾನ್ಯವಾಗಿ ಯಾವುದೇ ವಸ್ತುವಿನ ಸ್ವಭಾವ ಸ್ಥಿತಿಯನ್ನಾಗಲಿ, ಕ್ರಿಯೆಯು ನಡೆಯುವುದರಿಂದ ಉಂಟಾಗುವ ಸ್ಥಿತಿಯನ್ನಾಗಲಿ, ತಿಳಿಸುವ ವಾಚನ ಶಬ್ದಗಳಿಗೆ ಭಾವನಾಮ ಎನ್ನುವರು. ಹೀಗೆಯೇ ಧಾತುಗಳಿಂದ ಉಂಟಾಗುವ ಭಾವನಾಮಗಳಿಗೆ ಕೃದಂತ ಭಾವನಾಮ ಎನ್ನುವರು. ಅಂದರೆ ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿದಾಗ ಕೃದಂತ ಭಾವನಾಮಗಳು ಆಗುವುದು.

ಭಾವಾರ್ಥದಲ್ಲಿ ಹಲವೊಮ್ಮೆ ಎಲ್ಲಾ ಧಾತುಗಳ ಮೇಲೆ “ವುದು” ಪ್ರತ್ಯಯ ಸೇರುವುದು. ಕೆಲವು ಧಾತು ರೂಪದಲ್ಲೇ ಇದ್ದು, ಕೆಲವು ಧಾತುಗಳ ಆದಿಸ್ವರಕ್ಕೆ ದೀರ್ಘ ಬಂದು, ಕೃದಂತ ಭಾವನಾಮ ಆಗುವುವು.

ಉದಾಹರಣೆ - Examples:

'ವುದು' ಪ್ರತ್ಯಯಕ್ಕೆ (ಚಲಿಸುವುದು, ನಡೆಸುವುದು, ತಿಳಿಯುವುದು, ಹರಡುವುದು)

ಧಾತುಸ್ವರೂಪಕ್ಕೆ (ಒಡಕು, ಬದುಕು, ತೊಡಕು, ಗುಟುಕು, ಕುಟುಕು, ಚುಟುಕು)

ದೀರ್ಘಕ್ಕೆ (ಕೆಡು ಕೇಡು, ಪಡು-ಪಾಡು)

ಇತರ ಪ್ರತ್ಯಯಗಳಿಂದ ಭಾವನಾಮ ಆಗುವ ಬಗೆ

1. (ಇಕೆ)

ಹೆದರು + ಆನೆ = ಹೆದರಿಕೆ ನಾಚು + ಆಕೆ = ನಾಚಿಕೆ

ಹೇಳು + ಆನೆ = ಹೇಳಿಕೆ ಬೆದರು + ಇಕೆ = ಬೆದರಿಕೆ

ಹೋಲು + ಇಕೆ = ಹೋಲಿಕೆ ತೆಗಳು + ಇಕೆ = ತೆಗಳಿಕೆ

ನಾಚು + ಆಕೆ = ನಾಚಿಕೆ ಹೇಳು + ಆನೆ = ಹೇಳಿಕೆ

2. (ವು)

ತರು + ಅನ್ನು = ತಾರವು ಕಳು + ಅನ್ನು = ಕಳವು

ಮರೆ + ಅವು = ಮರೆವು ಬರು + ಅನ್ನು = ಬರವು

3. (ಇಗೆ)

ಕೊಡು + ಇಗೆ = ಕೊಡಿಗೆ ತೋಡು + ಇಗೆ= ತೊಡಿಗೆ

ನಂಬು + ಇಗೆ = ನಂಬಿಕೆ ತೆರು + ಇಗೆ= ತೆರಿಗೆ

ಅಟ್ಟು + ಗೆ = ಆಡಿಗೆ ಉಡು + ಇಗೆ= ಉಡುಗೆ.

4. (ವಳಿಕೆ, ವಣಿಗೆ, ಪಿಳಿಗೆ)

ನಡೆ + ವಳಿಕೆ = ನಡೆವಳಿಕೆ ತಿಳಿ + ವಳಿಕೆ = ತಿಳಿವಳಿಕೆ

ಮರ + ವಣಿಗೆ = ಮರವಣಿಗೆ ಬರ + ವಣಿಗೆ = ಬರವಣಿಗೆ

5.(ಗೆ)

ಬೆಸೆ + ಗೆ = ಬೆಸುಗೆ

ಬೇಯ + ಗೆ= ಬೇಗೆ

ಒಸ + ಗೆ = ಒಸೆಗೆ

6. (ಟ)

ಆಡು + ಟ = ಆಟ ಒದೆ + ತೆ = ಒದೆತ

ಮಾಡು + ಟ = ಮಾಟ ಮೆರೆ + ತೆ = ಮರೆತ

ದುಡಿ + ತೆ = ದುಡಿತ

7. (ವಳಿ)

ನಡೆ + ವಳಿ = ನಡೆವಳಿ ಬಳು + ವ = ಬಳುವಳಿ

ಚಳು + ವಳಿ = ಚಳುವಳಿ ಬಳು + ವ = ಬಳುವಳಿ

ಹಿಡು + ವಳಿ = ಹಿಡುವಳಿ

8. (ಇತ)

ಹಿಡು + ಇತ = ಹಿಡಿತ ತಪ್ಪು + ಇತ = ತಪ್ಪಿತ

ಬಿಗು + ಇತ = ಬಿಗಿತ ಒಪ್ಪು + ಇತ = ಒಪ್ಪಿತ

9. (ತ)

ನೆಗೆ + ತೆ = ನಗೆತ ಕುಣಿ + ತೆ = ಕುಣಿತ

ಕುಡಿ + ತೆ = ಕುಡಿತ ದುಡಿ + ತೆ = ದುಡಿತ

ಮರೆ + ತೆ = ಮರೆತ ಬಡಿ + ತೆ = ಬಡಿತ

10. (ಅಕೆ)

ಮೊಳೆ + ಅಕೆ = ಮೊಳಕೆ

ಬೆರ + ಅಕೆ = ಬೆರಕೆ

11. (ವು)

ನೋ + ವು = ನೋವು ಸಾ + ವು = ಸಾವು

ಪರಿ + ವು = ಪರಿವು ಅರಿ + ವು = ಅರಿವು

ಮೇ + ವು = ಮೇವು ಮರೆ + ವು = ಮರವು

12. (ಆ)

ಸಾಲ + ಅ = ಸಾಲ ಸೋಲ + ಅ = ಸೋಲ

ಎಚ್ಚರಿಸು + ಅ = ಎಚ್ಚರ ಬೇಸರಿಸು + ಅ = ಬೇಸರ

13. (ಅಪು)

ಹೊಳೆ+ ಅಪು = ಹೊಳಪು ನನೆ + ಅಪು = ನೆನಪು

ಉಡು + ಅಪು = ಉಡುಪು ಬಲು + ಅಪು = ಬಲುಪು

14. (ಎ)

ನಗು + ಎ = ನಗೆ. ಹೂರು + ಎ = ಹೊರ

ಮಿಗು + ಎ = ಮಿಗೆ ಕೊಲ್ಲು + ಎ = ಕೊಲೆ





ಕೃದಂತಾವ್ಯಯಗಳು - Krudantha Avayayagalu

ನಾಮಪದ ಕ್ರಿಯಾಪದಗಳಂತೆ ರೂಪ ಪರಿವರ್ತನೆ ಹೊಂದದ ಪದಗಳನ್ನು ಅವ್ಯಯ ಅನ್ನುವರು.

ಧಾತುರೂಪಗಳ ಮೇಲೆ ದು, ದರೆ, ಉತ, ಗ, ಅಲು, ಅದೆ ಮೊದಲಾದ ಕೃತ್ ಪ್ರತ್ಯಯಗಳು ಸೇರಿ ಆಗುವ ಅವ್ಯಯಗಳೇ ಕೃದಂತಾವ್ಯಯಗಳು. ಇವು ಸ್ವತಂತ್ರ ಕ್ರಿಯೆಗಳಲ್ಲ. ಕ್ರಿಯಾರ್ಥಕ್ಕಾಗಿ ಇನ್ನೊಂದು ಕ್ರಿಯೆಯನ್ನು ಬಯಸುತ್ತದೆ. ಆದ್ದರಿಂದಲೇ ಇದನ್ನು ಅಪೂರ್ಣ ಕ್ರಿಯೆ ಎಂದೂ ಕರೆಯುವರು. !

The nouns, without any convertion like verbs are called “ಅವ್ಯಯಗಳು”.

When ದು, ದರೆ, ಉತ್ರ, ಗ, ಅಲು, ಅದೆ and such suffixes are added to the main verb so o ries are formed. These are not independent verbs. They require the help of the other verbs to get the meaning. So Suich ''ಅವ್ಯಯ'ಗಳು are also called as Incomplete Verbs",

ಕೃದಂತಾವ್ಯಯದಲ್ಲಿ ವಿಧಗಳು - Kinds in Krudantayyaya

1. ಏಕಕರ್ತೃಕ ಕೃದಂತಾವ್ಯಯ (Having only single subject)

2. ಭಿನ್ನಕರ್ತೃಕ ಕೃದಂತಾವ್ಯಯ (Formed by separate subjects)

ಏಕಕರ್ತೃಕ ಕೃದಂತಾವ್ಯಯ

ಒಬ್ಬನೇ ಕರ್ತೃ ಇರುವ ಕೃದಂತಾವ್ಯಯವನ್ನು ಏಕಕರ್ತೃಕ ಕೃದಂತಾವ್ಯಯ ಎನ್ನುವರು.

ಉದಾಹರಣೆ:

ರಾಮನೇ ಬಂದು, ತೆಗೆದುಕೊಂಡು ಹೋದನು.

ರಾಜು ಬಂದರೂ ಮಾತಾಡದೆ ಹೋದನು.

ಮೇಲಿನ ವಾಕ್ಯಗಳಲ್ಲಿ ಬಂದು ತೆಗೆದುಕೊಂಡು ಹಾಗೂ ಬಂದರೂ ಮಾತಾಡದೆ ಎಂಬ ಕ್ರಿಯಾಪದಗಳಿಗೆ ರಾಮನೇ, ರಾಜೂ ಎಂಬ ಒಂದೊಂದೇ ಕರ್ತೃ ಇರುವುದರಿಂದ ಅವ್ಯಯಗಳು ಏಕಕರ್ತೃಕ ಕೃದಂತಾವ್ಯಯ ಎನಿಸಿವೆ.

In a sentence where there is only one subject, we observe ಏಕಕರ್ತೃಕ ಕೃದಂತಾವ್ಯಯ.

Example:

Rama came himself and went taking the book.

Though Raghu came, he went silently.

ವಿಶೇಷ ಸೂಚನೆಗಳು

1. ಒಬ್ಬನೇ ಕರ್ತೃವಿನಿಂದ ಎರಡು ಕಾರ್ಯಗಳು ನಡೆದಾಗ ಮೊದಲು ಹೇಳುವ ಕ್ರಿಯೆಯಲ್ಲಿ, ಭೂತಕಾಲದ ಪ್ರತ್ಯಯದ ರೂಪದಲ್ಲಿ 'ದು' ಅಥವ 'ಇ' ಸೇರುತ್ತವೆ.

2. ಒಂದೇ ಕಾಲದಲ್ಲಿ ಒಂದೇ ಕರ್ತೃವಿನಿಂದ ಎರಡು ಕ್ರಿಯೆಗಳುಂಟಾದಾಗ ಮೊದಲನೆಯ ಕ್ರಿಯೆಯ ಹಿಂದೆ “ಉತ್ತ” ಹಾಗೂ ನಿಷೇಧ ಬಂದಾಗ 'ಅದೆ'' ಪ್ರತ್ಯಯ ಸೇರಿರುತ್ತದೆ.

ಉದಾಹರಣೆ Example:

ಕೊಡದೆ-ಕೊಡುತ್ತ-ಕೊಡುತ್ತಾ

ಮಾಡದೆ-ಮಾಡುತ್ತಾ-ಮಾಡುತ್ತಾ

3. ಒಂದೇ ಕರ್ತೃವಿನಿಂದ ಒಂದೇ ಕಾಲದಲ್ಲಿ ಎರಡು ಕ್ರಿಯೆಗಳು ಬಂದಾಗ, ಯೋಜನ ಕಂಡುಬಂದರೆ, 'ಅಲು', 'ಅಲಿಕ್ಕೆ' ಪ್ರತ್ಯಯಗಳು ಮೂಲ ಕ್ರಿಯೆಯೊಂದಿಗೆ ಸೇರಿರುತ್ತವೆ.

ಉದಾಹರಣೆ Example:

ಬರಲು - ಬರಲಿಕ್ಕೆ

ನೋಡಲು - ನೋಡಲಿಕ್ಕೆ

ತಿನ್ನಲು - ತಿನ್ನಲಿಕ್ಕೆ

ಕುಡಿಯಲು - ಕುಡಿಯಲಿಕ್ಕೆ

ಭಿನ್ನಕರ್ತೃಕ ಕೃದಂತಾವ್ಯಯ (Having separate Subject)

ಭಿನ್ನ ಅಂದರೆ ಬೇರೆ” ಎಂದು ಅರ್ಥ ಆಗುತ್ತದೆ. ಬೇರೆ ಬೇರೆ ಕರ್ತೃಗಳಿಂದ ಎರಡೆರಡು ಕ್ರಿಯೆಗಳು ಒಂದೇ ಕಾಲದಲ್ಲಿ ಕಂಡುಬಂದರೆ ಆಗ ಭಿನ್ನ ಕರ್ತೃಕ ಕೃದಂತಾವ್ಯಯಗಳು ಉಂಟಾಗುವುವು. ಅಂದರೆ ಒಂದೇ ಕರ್ತೃವಿಗೆ ಅನ್ವಯಿಸದೆ, ಬೇರೆ ಬೇರೆ ಕರ್ತೃವಿನಲ್ಲಿ ಅನ್ವಯಿಸುವ ಭಿನ್ನ ಕರ್ತೃಗಳು ಅವ್ಯಯಗಳನ್ನು ಭಿನ್ನಕರ್ತೃಕ ಕೃದಂತಾವ್ಯಯ ಆಗುವುದು.

"ಭಿನ್ನ" means "separate". By separate subjects, certain times 2-2 verbs would be present at a time. Then the chances arise for ಭಿನ್ನ ಕರ್ತೃಕ ಕೃದಂತಾವ್ಯಯ.

ಉಂಟಾಗುವ ಬಗೆ - When such chances Occur?

1. ಬೇರೆ ಬೇರೆ ಕರ್ತೃಗಳಿಂದ ಯುಗಲ (ಎರಡು ಕ್ರಿಯೆಗಳು ಉಂಟಾದಾಗ “ಅಲು”, “ದು” ಪ್ರತ್ಯಯಗಳು ಮೊದಲ ಕ್ರಿಯೆಗೆ ಸೇರುವುವು).

ಉದಾಹರಣೆ Example:

“ಅಲು'

ನಡೆ + ಅಲು = ನಡೆಯಲು

ಹೊಡೆ + ಅಲು = ಹೊಡೆಯಲು

ಓಡು +ಅಲು = ಓಡಲು

ಎಳೆ + ಅಲು = ಎಳೆಯಲು

‘ದು’

ನಡೆ + ದು = ನಡೆದು

ಪಡೆ + ದು = ಪಡೆದು

ತಿನ್ನು + ದು = ತಿಂದು

ಬೆಳೆ + ದು = ಬೆಳೆದು

2. ಬೇರೆ ಬೇರೆ ಕರ್ತೃಗಳಿಂದ ಎರಡೆರಡು ಕ್ರಿಯೆಗಳು ಒಂದೇ ಬಾರಿಗೆ ಬಂದಾಗ, ಅವಗಳ ಮುಂದೆ ಇರಲು, ಇರಲಾಗಿ ಎಂಬ ಅವ್ಯಯಗಳು ಸೇರುವುವು.

ಉದಾಹರಣೆ - Example:

ನೋಡುತ್ತ + ಇರಲು = ನೋಡುತ್ತಿರಲು

ಮಾಡುತ್ತ + ಇರಲು = ಮಾಡುತ್ತಿರಲು, ಇತ್ಯಾದಿ

3. ಎರಡು ಕ್ರಿಯೆಗಳು ಬೇರೆ ಬೇರೆ ಕ್ರಿಯೆಗಳಿಂದ ಪಕ್ಷಾರ್ಥ ತೋರಿದಾಗ “ದರ” ಎಂಬ ಭಾವಾರ್ಥ ಬರುವುದು. ಆಗ 'ಅ' ಎಂಬ ಅವ್ಯಯವು ಸೇರುತ್ತದೆ.

ಉದಾಹರಣೆ - Example:

“ತಂದರೆ

-ರಾಮನು ತಂದರ, ನಿನಗೆ ಕೊಡುತ್ತಾನೆ

“ಇದ್ದರೆ

-ಸೂಜಿ ಇದ್ದರೆ ಅದರ ಹಿಂದೆ ದಾರವೂ ಇರುತ್ತದೆ.

ಅಭ್ಯಾಸ - Exercise

(ಆ) ಇವುಗಳಿಗೆ ಒಂದೆರಡು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

(1) ಕೃದಂತ ಅಂದರೇನು?

(2) ಕೃದಂತದಲ್ಲಿ ಎಷ್ಟು ಬಗೆ? ಉದಾಹರಣೆ ಕೊಡಿ.

(3) ಇವುಗಳ ಭಾವರೂಪ ತಿಳಿಸಿ,

ಮಾಡು, ಬೇಡು, ಆಡು, ಓಡು, ಪಡು, ಉಡು.

(ಆ) ಕೆಳಗೆ ಕೊಟ್ಟಿರುವ ಪದಗಳು ಕೃದಂತಗಳಲ್ಲಿ ಯಾವ ಗುಂಪಿಗೆ ಸೇರಿವೆ? ಹೆಸರಿಸಿ.

ನೋಟ ಬಿಡಿಗೆ ಹಾಡು ಬೇಟೆ ಕೇಡು ತೊಡುಗೆ ನಡೆವಳಿ ತಿನ್ನುತ್ತಾ ಬರವಣಿಗೆ ಹೋಲಿಕೆ ಬೇಡಿಕೆ ನಗೆ




Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...