Subject, Verb & Object - ಕರ್ತೃ - ಕ್ರಿಯೆ - ಕರ್ಮಪದ


ವಾಕ್ಯದಲ್ಲಿ ಮುಖ್ಯವಾಗಿ ಮೂರು ಭಾಗಗಳಿರುತ್ತವೆ.

1. ಕರ್ತೃಪದ - Subject  2. ಕರ್ಮಪದ - Object  3. ಕ್ರಿಯಾಪದ - Verb

ಕರ್ತೃಪದ ವಾಕ್ಯದಲ್ಲಿ ಶಿರೋಭಾಗ ಇದ್ದಂತೆ. ಅದು ಇಲ್ಲದೆ ವಾಕ್ಯ ಅಪೂರ್ಣವೇ ಅದನ್ನು ಗುರುತಿಸುವುದಾದರೂ ಹೇಗೆ? ಈ ಉದಾಹರಣೆಗಳನ್ನು ನೋಡಿ.

ರಾಮನು ಪುಸ್ತಕವನ್ನು ತಂದನು.

ಸೀತೆಯು ಹಾಡನ್ನು ಹಾಡಿದಳು.

ಮೇಲಿನ ಉದಾಹರಣೆಗಳಲ್ಲಿ 'ರಾಮನು' ಹಾಗೂ ಸೀತೆಯು' ಎಂಬ ಪದಗಳು ಕರ್ತೃಪದಗಳು ಆಗಿವೆ. 'ತಂದನು', 'ಹಾಡಿದಳು' ಕ್ರಿಯಾಪದಗಳು ಆಗಿವೆ. ಕ್ರಿಯೆ ಅಂದರೆ ಕೆಲಸ, ಕೆಲಸವನ್ನು ಸೂಚಿಸುವ ಪದಗಳು ಕ್ರಿಯಾಪದ ಆಗಿರುತ್ತದೆ ಎಂಬುದನ್ನು ಈಗಾಗಲೇ ನಾವು ಅರಿತಿದ್ದೇವೆ. ಈ ಕ್ರಿಯಾಪದಗಳ ಮೇಲೆ ಯಾರು, ಏನು? ಎಂಬ ಪ್ರಶ್ನೆಗಳನ್ನು ಹಾಕಿದಾಗ ಉತ್ತರ ಬಂದರೆ ಅವು ಕರ್ತೃಪದ ಆಗಿರುತ್ತವೆ.

ಮೊದಲ ಉದಾಹರಣೆಯಲ್ಲಿ ತಂದನು' ಎಂಬ ಪದ ಕ್ರಿಯಾಪದ, ಏಕೆಂದರೆ ಅದು ರಾಮನು ಮಾಡುವ ಕೆಲಸವನ್ನು ಸೂಚಿಸುತ್ತದೆ. 'ತಂದನು' ಎಂಬ ಕ್ರಿಯಾಪದದ ಮೇಲೆ ಯಾರು ತಂದರು? ಎಂಬ ಪ್ರಶ್ನೆ ಹಾಕಿದಾಗ ರಾಮನು ತಂದನು ಎಂಬ ಉತ್ತರ ಸಿಗುತ್ತದೆ. ಆದ್ದರಿಂದ ಮೊದಲ ಉದಾಹರಣೆಯಲ್ಲಿ 'ರಾಮನು' ಎಂಬ ಪದವು ಕರ್ತೃಹದ ಆಗಿದೆ.

ಇದೇ ರೀತಿ ಎರಡನೆಯ ಉದಾಹರಣೆಯಲ್ಲಿ ಹಾಡಿದಳು' ಎಂಬ ಪದ ಕ್ರಿಯಾಪದ ಆಗಿದೆ. ಕಾರಣ ಆ ಪದವು ಸೀತೆಯು ಮಾಡುವ ಕೆಲಸವನ್ನು ಸೂಚಿಸುತ್ತದೆ. ಈ 'ಹಾಡಿದಳು' ಎಂಬ ಕ್ರಿಯಾಪದದ ಮೇಲೆ ಯಾರು ಹಾಡಿದರು? ಎಂಬ ಪ್ರಶ್ನೆ ಹಾಕಿದಾಗ 'ಗೀತೆಯು ಹಾಡಿದಳು' ಎಂಬ ಉತ್ತರ ಸಿಗುವುದರಿಂದ "ಸೀತೆಯು" ಎಂಬ ಪದವು ಕರ್ತೃಪದ ಆಗಿದೆ.

ಇನ್ನೆರಡು ಉದಾಹರಣೆಗಳನ್ನು ನೋಡಿ.

ಬೆಕ್ಕು ಹಾಲು ಕುಡಿಯಿತು. 

ನಾಯಿ ಚೆಂಡು ತಂದಿತು.

ಮೇಲಿನ ಉದಾಹರಣೆಗಳಲ್ಲಿ ಕುಡಿಯಿತು'' ಹಾಗೂ ''ತಂದಿತು' ಈ ಎರಡೂ ಪದಗಳೂ ಕ್ರಿಯಾಪದಗಳು ಎನಿಸಿವೆ. ಏಕೆಂದರೆ ಅವು ಬೆಕ್ಕು ಹಾಗೂ ನಾಯಿ ಮಾಡುವ ಕೆಲಸವನ್ನು ಸೂಚಿಸುತ್ತವೆ. ಈ ಎರಡೂ ಕ್ರಿಯಾಪದಗಳ ಮೇಲೆ ಏನು ಕುಡಿಯಿತು? ಹಾಗೂ ಏನು ತಂದಿತು? ಎಂದು ಪ್ರಶ್ನೆ ಹಾಕಿದಾಗ ಬೆಕ್ಕು ಕುಡಿಯಿತು ಹಾಗೂ ನಾಯಿ ತಂದಿತು ಎಂಬ ಉತ್ತರಗಳು ಬರುತ್ತವೆ. ಆದ್ದರಿಂದ ಬೆಕ್ಕು ಹಾಗೂ ನಾಯಿ ಈ ಎರಡೂ ಪದಗಳೂ ಕರ್ತೃಪದಗಳಾಗಿವೆ.

ಅಂದರೆ ಕ್ರಿಯಾಪದದ ಮೇಲೆ ಯಾರು, ಏನು? ಎಂಬ ಪ್ರಶ್ನೆಗಳನ್ನು ಹಾಕಿದಾಗ ಬರುವ ಉತ್ತರವು ಕರ್ತೃಪದ ಆಗಿರುತ್ತದೆ ಎಂದಂತಾಯಿತು.

Subject is the head in a sentence. The sentence will be incomplete if no subject is in a sentence. How to fixed out the subject in a sentence? Let us take certain examples

Rama brought the book.

Sitha sang a song

In the first example 'brought' is the verb. Because it shows the work of Rama. If we put a question 'who' on the verb 'brought', we get the answer 'Rama'. So the word 'Rama' is the subject.

Similarly in the second sentence 'sang' is the verb. Because that word shows the work of 'Seetha'. If we put a question 'who sang a song?' we get the answer 'Sitha sang a song'. So the word 'Sitha' is the subject in the first sentence.

Let us take two more examples,

The cat drank the milk.

The dog brought the ball

In the above two sentences 'drank' and 'brought' are verbs. Because those words show the work of 'cat' and 'dog'. If we put the question what in the above verbs, we get the exact answers 'cat' and dog' regularly. So 'cat' and 'rat' are the subject.

So we may conclude- when we put the questions who or what on the verb, if we get the answers for those questions, the answers are Subject. In other words we may define what is named or spoken about is called the Subject.

Now let us try to know what the object is





"ಈಗ ನಾವು ಕರ್ಮಪದ ಅಂದರೇನು? ಎಂಬುದನ್ನು ತಿಳಿಯೋಣ.

ಕೆಳಗೆ ಕೊಟ್ಟಿರುವ ಉದಾಹರಣೆಗಳನ್ನು ನೋಡಿ -

ರಾಮ ಒಂದು ಮಾವಿನ ಹಣ್ಣನ್ನು ತಿಂದನು.

ಕಮಲ ಒಂದು ಗಡಿಯಾರವನ್ನು ಕೊಂಡುಕೊಂಡಳು.

ಮೇಲಿನ ವಾಕ್ಯಗಳಲ್ಲಿ 'ತಿಂದನು' ಹಾಗೂ 'ಕೊಂಡುಕೊಂಡಳು' ಎಂಬ ಪದಗಳು ಕೆಲಸವನ್ನು ಸೂಚಿಸುವ ಪದಗಳಾಗಿರುವುದರಿಂದ ಕ್ರಿಯಾಪದಗಳೆನಿಸಿವೆ. 'ತಿಂದನು' ಎಂಬ ಕ್ರಿಯಾಪದದ ಮೇಲೆ ಏನನ್ನು? ಎಂಬ ಪ್ರಶ್ನೆ ಹಾಕಿದಾಗ 'ಮಾವಿನ ಹಣ್ಣನ್ನು' ಎಂಬ ಉತ್ತರ ಬರುತ್ತದೆ. ಅದೇ ರೀತಿ ಕೊಂಡುಕೊಂಡಳು' ಎಂಬ ಕ್ರಿಯಾಪದದ ಮೇಲೂ ಏನನ್ನು? ಎಂಬ ಪ್ರಶ್ನೆ ಹಾಕಿದಾಗ 'ಗಡಿಯಾರವನ್ನು' ಎಂಬ ಉತ್ತರ ಬರುತ್ತದೆ. ಆದ್ದರಿಂದ 'ಮಾವಿನಹಣ್ಣನ್ನು' ಹಾಗೂ 'ಗಡಿಯಾರವನ್ನು ಎಂಬ ಪದಗಳು ಕರ್ಮಪದ ಎನಿಸಿವೆ.

ಇದೇ ರೀತಿ ಇನ್ನೆರಡು ಉದಾಹರಣೆಗಳನ್ನು ನೋಡಿ

ರಾಮನು ರಾವಣನನ್ನು ಕೊಂದನು.

ಭೀಮನು ರಾಮನನ್ನು ಕರೆದನು.

ಮೇಲಿನ ವಾಕ್ಯಗಳಲ್ಲಿ 'ಕೊಂದನು' ಹಾಗೂ 'ಕರೆದನು' ಎಂಬ ಪದಗಳು ಕೆಲಸವನ್ನು ಸೂಚಿಸುವುದರಿಂದ ಕ್ರಿಯಾಪದಗಳಾಗಿವೆ. |

ಮೊದಲನೆಯ ಉದಾಹರಣೆಯಲ್ಲಿ ಕ್ರಿಯಾಪದವಾಗಿ ಬಂದಿರುವ 'ಕೊಂದನು' ಎಂಬ ಪದದ ಮೇಲೆ 'ಯಾರನ್ನು?' ಎಂಬ ಪ್ರಶ್ನೆ ಹಾಕಿದಾಗ 'ರಾವಣನನ್ನು' ಎಂಬ ಉತ್ತರ ಬರುತ್ತದೆ. ಅದೇ ರೀತಿ ಎರಡನೆಯ ಉದಾಹರಣೆಯಲ್ಲಿ ಕ್ರಿಯಾಪದ ರೂಪದಲ್ಲಿ ಬಂದಿರುವ 'ಕರೆದನು' ಎಂಬ ಕ್ರಿಯಾಪದದ ಮೇಲೆ 'ಯಾರನ್ನು?' ಎಂಬ ಪ್ರಶ್ನೆ ಹಾಕಿದಾಗ “ರಾವಣನನ್ನು' ಹಾಗೂ 'ರಾಮನನ್ನು' ಈ ಎರಡೂ ಪದಗಳೂ ಕರ್ಮಪದ ಎನಿಸಿವೆ.

ಅಂದರೆ ಯಾವುದೇ ವಾಕ್ಯದಲ್ಲಿ ಕ್ರಿಯಾಪದದ ಮೇಲೆ 'ಯಾರನ್ನು' ಇಲ್ಲವೇ “ಏನನು' ಎಂದು ಪ್ರಶ್ನೆ ಹಾಕಿದಾಗ ಬರುವ ಉತ್ತರವು ಕರ್ಮಪದ ಆಗಿರುತ್ತದೆ.

Now let us try to know what the object means. Look at the examples given here under.

Rama ate a mango.

Sitha bought a watch.

In the above stated sentences, 'ate' and 'bought' denote the work of the subject. So they are the verbs.

When we put a question what (ಏನನ್ನು ) or the verb 'ate', we get the answer 'mango'. In the same way when we put the same question 'what' on the verb 'bought', we get the answer 'watch'. So the words 'mango' and 'watch' are objects.

Now we can conclude. Whenever we put the question whom (ಯಾರನ್ನು) or what (ಏನನ್ನು) on the verb, and get the answers will be the objects.

ತಿಳಿವಳಿಕೆಗಾಗಿ - Note below

ಹಲವೊಮ್ಮೆ ವಾಕ್ಯಗಳಲ್ಲಿ ಕರ್ಮಪದ ಬಾರದಿರುವುದೂ ಉಂಟು. ಆಗ ಅದು ಅಕರ್ಮಕ ಕ್ರಿಯಾಪದ ಆಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಉದಾಹರಣೆ :

ರಾಮನು ವೇಗವಾಗಿ ಓಡಿದನು. (ಕರ್ಮಪದ ಬಂದಿಲ್ಲ)

ಬೆಕ್ಕು ಹಾಸಿಗೆಯ ಮೇಲೆ ಮಲಗಿತು. (ಕರ್ಮಪದ ಬಂದಿಲ್ಲ)

Sometimes, in a sentence, there will be no objects. Then we must remember, such sentences are having intransitive verbs. We have already learnt that. Intransitive verbs will have no objects.

Example:

Rama ran fastly.

The cat slept on the bed.

ಅಭ್ಯಾಸ - Exercise

1. ಕರ್ತೃಪದ ಅಂದರೇನು? ಉದಾಹರಣೆ ಕೊಡಿ.

2. ಕರ್ಮಪದ ಅಂದರೇನು? ಉದಾಹರಣೆ ಕೊಡಿ.

3, ವಾಕ್ಯದಲ್ಲಿ ಕರ್ಮಪದ ಬಾರದಿರುವಾಗ, ಕ್ರಿಯಾಪದವು ಯಾವ ರೂಪದಲ್ಲಿರುತ್ತದೆ?

4. ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ಕರ್ತೃ, ಕರ್ಮ, ಕ್ರಿಯಾಪದಗಳನ್ನು ಗುರ್ತಿಸಿ.

(ಅ) ರಾಜು ಶಾಲೆಗೆ ಹೋದನು.

(ಆ) ತಂದೆಯವರು ಪುಸ್ತಕ ತಂದರು.

(ಇ) ಬೆಕ್ಕು ಇಲಿಯನ್ನು ಹಿಡಿಯಿತು.

(ಈ) ಉಪಾಧ್ಯಾಯರು ಪಾಠ ಬೋಧಿಸಿದರು.

(ಉ) ನಾನು ಲೆಕ್ಕ ಮಾಡುತ್ತೇನೆ.

(ಊ) ರಾಮನು ಯಾವಾಗ ಬಂದನು?




Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...