ಗುಣವನ್ನು ಸೂಚಿಸುವ ಪದಗಳು-ಗುಣವಾಚಕಗಳು - Adjectives Kinds
ವಿಶೇಷಣ ಅಂದರೆ ಗುಣ ಎಂದರ್ಥ. ಗುಣವನ್ನು ತಿಳಿಸುವ ಪದ ವಿಶೇಷಣ. ಅಂದರೆ ನಾಮಪದದ ಗುಣವನ್ನು ತಿಳಿಸುವ ಪದ.
ಇದರಲ್ಲಿ ಐದು ವಿಧ.
‘Visheshana' means quality. The word denoting quality of a noun, is called Adjective. Adjective describes a noun. So an adjective is a word which describes a noun.
There are 5 kinds in noun.
1. ಗುಣವಾಚಕ ವಿಶೇಷಣ Adjective of quality
2. ಪರಿಮಾಣವಾಚಕ ವಿಶೇಷಣ Adjective of quantity
3. ಸಂಖ್ಯಾವಾಚಕ ವಿಶೇಷಣ Numeral Adjectives
4. ನಿರ್ದಿಷ್ಟ ವಾಚಕ ವಿಶೇಷಣ Demonstrative Adjective
5. ಸಂಜ್ಞಾವಾಚಕ ವಿಶೇಷಣ Noun used as Adjective
(1) ಗುಣವಾಚಕ ವಿಶೇಷಣ - Adjective of Quality
ಯಾವುದಾದರೂ ವಸ್ತುವಿನ, ವ್ಯಕ್ತಿಯ ಗುಣವನ್ನು ವಿಶ್ಲೇಷಿಸುವ ಪದವು ಸಾಮಾನ್ಯವಾಗಿ ಗುಣವಾಚಕ ವಿಶೇಷಣ ಆಗುವುದು.
ಉದಾಹರಣೆ:
ರಾಮನು ಒಳ್ಳೆಯ ಹುಡುಗ ಆಗಿದ್ದಾನೆ.
ಇದು ಕೆಂಪು ಗುಲಾಬಿ ಆಗಿದೆ.
ಕಿಟ್ಟು ಕುಳ್ಳ ಹುಡುಗ ಆಗಿದ್ದಾನೆ.
ಮೇಲಿನ ವಾಕ್ಯಗಳಲ್ಲಿ ಬಂದಿರುವ ಒಳ್ಳೆಯ, ಕೆಂಪು, ಕುಳ್ಳ ಈ ಮೂರೂ ಪದಗಳೂ ಅವುಗಳ ಮುಂದೆ ಬಂದಿರುವ ನಾಮಪದಗಳನ್ನು ವಿಶ್ಲೇಷಿಸುವುದರಿಂದ ಗುಣವಾಚಕ ವಿಶೇಷಣ ಎನಿಸಿವೆ.
The word qualifying any person or thing is called Adjective of quality,
Example:
Rama is a good boy.
This is a red rose flower.
Kittu is a dwarf boy.
In the above stated sentences these three words-good, red and dwarf describe the quality of the nouns-boy, flower and boy. So they are called Adjective of quality.
(2) ಪರಿಮಾಣ ವಾಚಕ ವಿಶೇಷಣ - Adjective of Quantity
ಇವು ವಸ್ತುಗಳ ಪರಿಮಾಣವನ್ನು ತಿಳಿಸುತ್ತವೆ. ಅಂದರೆ ಅಷ್ಟು ಇಷ್ಟು, ಎಷ್ಟು | ಅಧಿಕ, ಹೆಚ್ಚು, ಸ್ವಲ್ಪ ಕಡಿಮೆ ಈ ರೀತಿಯ ಪ್ರಮಾಣಗಳನ್ನು ಸೂಚಿಸುವ ಗುಣವಾಚಕ ಪದಗಳನ್ನು ಪರಿಮಾಣವಾಚಕ ವಿಶೇಷಣ ಎನ್ನುವರು.
ಉದಾಹರಣೆ:
ಬಕಾಸುರನು ಅಷ್ಟೊಂದು ಅನ್ನವನ್ನೂ ಒಬ್ಬನೇ ತಿಂದನು.
ಭೀಮಸೇನನು ಅವನಿಗಿಂತಲೂ ಹೆಚ್ಚು ಅನ್ನವನ್ನು ತಿಂದನು.
ಗಡಿಗೆಯ ತುಂಬಾ ನೀರಿದೆ.
ನಿನಗೆ ಎಷ್ಟು ಅನ್ನ ಹಾಕಿದರೂ ಸಾಲದು.
ಸ್ವಲ್ಪ ತಿಂದರೆ ಹೊಟ್ಟೆ ತುಂಬದು. ಹೆಚ್ಚು ತಿಂದರೆ ಜೀರ್ಣ ಆಗದು.
ಮೇಲಿನ ವಾಕ್ಯಗಳಲ್ಲಿ ಬಂದಿರುವ ಅಷ್ಟೋಂದು, ಹೆಚ್ಚು, ತುಂಬ, ಎಷ್ಟು, ಸ್ವಲ್ಪ, ಹೆಚ್ಚು ಈ ಶಬ್ದಗಳು ಪರಿಮಾಣ ಸೂಚಕವಾಗಿದ್ದು, ಅವುಗಳ ಮುಂದೆ ಬಂದಿರುವ ನಾಮಮಪದಗಳನ್ನು ವಿಶ್ಲೇಷಿಸುವುದರಿಂದ ಪರಿಮಾಣವಾಚಕ ವಿಶೇಷಣಗಳು ಎನಿಸಿವೆ.
In some sentences “much, less" such words are used to denote oportion in adjectives. Such words are called Adjective of quantity.
Example:
Bakasura ate more rice.
Bhimasena ate more than Bakasura.
I want a little water.
In the above sentences "more, little" are used to show the quantity of things. So they are called Adjectives of quantity.
(3) ಸಂಖ್ಯಾಸೂಚಕ ವಿಶೇಷಣ - Adjective of Numeral
ಸಂಖ್ಯೆಗಳನ್ನು ಸಂಕೇತಿಸುವ ಶಬ್ಬಗಳು ತಮ್ಮ ಮುಂದೆ ಬರುವ ನಾಮಪದಗಳನ್ನು ಎಶೇಷಿಸಿದರೆ, ಅಂತಹ ಪದಗಳು ಸಂಖ್ಯಾವಾಚಕ ವಿಶೇಷಣ ಎನಿಸುವುವು.
ಉದಾಹರಣೆ:
ನನಗೆ ಜರೂರು ನಿಮಿತ್ತ ಎರಡು ರೂಪಾಯಿಗಳು ಬೇಕು.
ಈ ತರಗತಿಯಲ್ಲಿ ಮೂವತ್ತು ಹುಡುಗರು ಇದ್ದಾರೆ.
ಒಂದು ರೂಪಾಯಿಯಲ್ಲಿ ನೂರು ಪೈಸೆಗಳು ಇರುತ್ತವೆ.
ಮೇಲಿನ ವಾಕ್ಯಗಳಲ್ಲಿ ಎರಡು, ಮೂವತ್ತು, ನೂರು ಈ ಪದಗಳು ಸಂಖ್ಯಾ ಸೂಚಕವೆನಿಸಿದ್ದು, ಅವುಗಳ ಮುಂದೆ ಬಂದಿರುವ ನಾಮಪದಗಳನ್ನು ವಿಶ್ಲೇಷಿಸುತ್ತಿವೆ. ಆದ್ದರಿಂದ ಸಂಖ್ಯಾವಾಚಕ ವಿಶೇಷಣಗಳು ಎನಿಸಿವೆ.
The words denoting the numbers in Adjectives, are called Numeral adjectives or Adjective of number. These numbers qualify their next nouns in the sentence.
For example:
I want two rupees urgently.
There are thirty boys in our classroom.
There are hundred paise in a rupee.
In the above sentences, the words two, thirty and hundred resemble the numbers, qualifying the nouns-rupees, boys and paise respectively. So they are called Adjective of Number.(4) ನಿರ್ದಿಷ್ಟವಾಚಕ ವಿಶೇಷಣ - Demonstrative Adjective
ಹಲವೊಮ್ಮೆ ವಾಕ್ಯಗಳಲ್ಲಿ ಆ, ಈ ಇಂತಹ ಉಪಪದಗಳನ್ನು ನಾಮಪದಗಳ ಹಿಂದೆ ನಿರ್ದಿಷ್ಟ ಸೂಚಕ ರೀತಿಯಲ್ಲಿ ಬಳಸುವುದುಂಟು. ಇಂತಹ ಗುಣವಾಚಕಗಳನ್ನು ನಿರ್ದಿಷ್ಟ ವಾಚಕ ವಿಶೇಷಣ ಎನ್ನಲಾಗುವುದು.
ಉದಾಹರಣೆ:
ಆ ಪುಸ್ತಕದಲ್ಲಿ ಸುಂದರವಾದ ಕಥೆಗಳಿವೆ.
ಈ ಹುಡುಗ ತುಂಬಾ ಚೂಟಿ ಇದ್ದಾನೆ.
ಆ ಪುಸ್ತಕಗಳು ನನ್ನವು.
ಈ ಪೆನ್ನುಗಳು ಯಾರವು?
ಮೇಲಿನ ವಾಕ್ಯಗಳಲ್ಲಿ ಬಂದಿರುವ ಆ, ಈ ಉಪಪದಗಳು ಅವುಗಳ ಮುಂದೆ ಬಂದಿರುವ ನಾಮಪದಗಳನ್ನು ನಿರ್ದಿಷ್ಟ ರೀತಿಯಲ್ಲಿ ವಿಶೇಷಿಸುವುದರಿಂದ ನಿರ್ದಿಷ್ಟ ವಾಚಕ ವಿಶೇಷಣ ಎನಿಸಿವೆ.
ಆ', 'ಈ' such subwords when come demonstratively and qualify their next nouns, are called “Demonstrative Adjectives."
Example:
There are splendid stories in that book.
This boy is too smart.
Those books are mine.
Whose are these pens?
In the above sentences "this, that, these, those" qualify their next nouns demonstratively. So they are called as Demonstrative Adjectives.
ವಿ.ಸೂ.
ಈ ನಿರ್ದಿಷ್ಟ ವಾಚಕ ಶಬ್ದಗಳು ಸರ್ವನಾಮಗಳಲ್ಲಿಯೂ ಪ್ರಯೋಗಿಸಲ್ಪಡುತ್ತದೆ. ಆದರೆ ಆಗ ಅವುಗಳ ಮುಂದೆ ನಾಮಪದಗಳು ಬಂದಿರುವುದರ ಜೊತೆಗೆ 'ಆ, ಈ ಬಾರದೆ “ಇದು-ಅದು, ಇವು ಅವು” ಎಂಬ ಸರ್ವನಾಮಗಳು ಬಂದಿರುತ್ತದೆ. ಇಲ್ಲಿ ವಿಶೇಷಣ ಕಾರ್ಯ ನಡೆದಿರುವುದಿಲ್ಲ.
Note Below
These demonstrative words, we see even in Pronouns. But then there will be no nouns before them. Besides during that time, instead of 'ಆ,ಈ ' we observe "that-this, those-these". Here there is no work of qualifying
Example:
This is a box.
That is a pen.
These are books,
These are pens.
(5) ಸಂಜ್ಜಾವಾಚಕ ವಿಶೇಷಣ - Nouns used as Adjectives
ಹಲವೊಮ್ಮೆ ನಾಮಪದಗಳನ್ನು ಅದರಲ್ಲೂ ಅಂಕಿತ ನಾಮಪದಗಳನ್ನು (Proper nouns) ವಿಶೇಷಣ ರೂಪದಲ್ಲಿ ಉಪಯೋಗಿಸುವುದುಂಟು. ಆಗ ಅಂತಹ ಅಂಕಿತನಾಮಗಳು ಸಂಜ್ಞಾಸೂಚಕ ವಿಶೇಷಣಗಳು ಎನಿಸುವುವು.
ಉದಾಹರಣೆ:
ಬೊಂಬಾಯಿ ಬೋಂಡ
ಇಂಡಿಯನ್ ಟೀ
ಗೋಲ್ಡ್ ಮೆಡಲ್
ಚೈನಾ ಮಿಠಾಯಿ
ಸ್ವಿಸ್ ಗಡಿಯಾರ
ಮೇಲಿನ ವಾಕ್ಯಗಳಲ್ಲಿ ಬೊಂಬಾಯಿ, ಚೈನಾ, ಇಂಡಿಯನ್, ಸಿಟ್ಸ್, ಗೋಲ್ಡ್ ಈ ಪದಗಳು ಅಂಕಿತನಾಮಗಳಾದರೂ, ಮುಂದೆ ಬಂದಿರುವ ನಾಮಪದಗಳನ್ನು ವಿಶೇಷಿಸುವುದರಿಂದ ಸಂಜ್ಞಾ (ನಾಮಪದ) ಸೂಚಕ ವಿಶೇಷಣಗಳೆನಿಸಿವೆ.
Sometimes we use Nouns, that too Proper nouns as adjectives in sentences. Such nouns are called as Nouns used as Adjectives.
Examples:
Bombay Bonda.
Indian tea.
Chaina sweets.
Swiss watch.
Gold medal.
In the above stated examples, "Bombay, Chaina, Indian, Swiss, Gold" are all nouns. They are used as adjectives. So they are called "Nouns used as Adjectives."
ಮೇಲ್ಕಂಡ 5 ಬಗೆಯ ವಿಶೇಷಣಗಳೇ ಅಲ್ಲದೆ ಪ್ರವಾಚಕ ವಿಶೇಷಣ ಎಂಬ ಇನ್ನೂ ಒಂದು ಬಗೆಯ ವಿಶೇಷಣ ಉಂಟು. ಹೆಸರೇ ತಿಳಿಸುವಂತೆ ಪ್ರಶ್ನಾರ್ಥವನ್ನು ಸೂಚಿಸುವುದರೊಂದಿಗೆ, ವಿಶೇಷಣ ಶಬಗಳೂ ಆಗಿರುತ್ತವೆ. ಇಂತಹ ವಿಶೇಷಣಗಳನ್ನು ಪ್ರಶ್ನವಾಚಕ ವಿಶೇಷಣ ಎನ್ನಲಾಗುವುದು.
ಉದಾಹರಣೆ:
ಇದು ಯಾವ ಪುಸ್ತಕ ಆಗಿದೆ?
ಶ್ರೀರಾಮನು ಯಾರ ಮಗ ಆಗಿದ್ದಾನೆ?
ಈ ದಿನ ಯಾವ ವಾರ ಆಗಿದೆ?
ನಿನ್ನದು ಯಾವ ಪುಸ್ತಕ ಆಗಿದೆ?
ಮೇಲಿನ ವಾಕ್ಯಗಳಲ್ಲಿ "ಯಾವ, ಯಾರ” ಈ ಶಬ್ದಗಳು ಪ್ರಶ್ನಾಸೂಚಕ ಆಗಿರುವುದರ ಜೊತೆಗೆ ಗುಣವಾಚಕದ ಕಾರ್ಯವನ್ನೂ ಮಾಡುವುದರಿಂದ ಪ್ರಶ್ನವಾಚಕ ವಿಶೇಷಣ ಎನಿಸಿವೆ.
Besides the above said five kinds of adjectives, there is one more adjective, by name Interrogative Adjective. Interrogation means question. When such words of interrogation qualify the nouns, they are said to be Interrogative Adjective.
Example:
Whose book is this?
Which book do you want?
Whose watch is this?
In the above stated sentences, 'whose, which' are the interrogative words. They are used as adjectives here. So they are called as Interrogative Adjective.
ಅಭ್ಯಾಸ - Exercise
1. ಇವುಗಳ ವ್ಯತ್ಯಾಸ ಏನು?
(ಅ) ಪ್ರಶ್ನವಾಚಕ ವಿಶೇಷಣ-ಪ್ರಶ್ನವಾಚಕ ಸರ್ವನಾಮ
(ಆ) ನಿರ್ದಿಷ್ಟವಾಚಕ ವಿಶೇಷಣ- ನಿರ್ದಿಷ್ಟ ವಾಚಕ ಸರ್ವನಾಮ.
2. ಪರಿಮಾಣವಾಚಕ ವಿಶೇಷಣ ಅಂದರೇನು? ಉದಾಹರಣೆ ಕೊಡಿ.
3. ಸಂಖ್ಯಾವಾಚಕ ವಿಶೇಷಣದ ವಿಶೇಷ ಏನು? ಉದಾಹರಿಸಿ,
4. ಕೆಳಗೆ ಕಂಡ ವಾಕ್ಯಗಳಲ್ಲಿ ವಿಶೇಷಣಗಳನ್ನು ಗುರುತಿಸಿ, ಯಾವ ಬಗೆಯ ವಿಶೇಷಣ ಎಂಬುದನ್ನೂ ತಿಳಿಸಿ.
(ಅ) ಸೀತಾ ಜಾಣ ಹುಡುಗಿ ಆಗಿದ್ದಾಳೆ,
(ಆ) ನಿಮ್ಮಲ್ಲಿ ಬಹಳ ಊಟ ಮಾಡುವವರು ಯಾರು?
(ಇ) ಚೀಲದಲ್ಲಿ ಎಷ್ಟು ಸೇರು ಅಕ್ಕಿ ಇದೆ?
(ಈ) ನೀಲಿಯ ಆಕಾಶದಲ್ಲಿ ನಕ್ಷತ್ರಗಳು ಮಿಣುಗುತ್ತಿವೆ.
(ಉ) ಮಂಗಳೂರು ಬಜ್ಜಿ ಬಲು ರುಚಿ.
5. ಬಿಟ್ಟಿರುವ ಜಾಗಗಳಲ್ಲಿ ಸೂಕ್ತವಾದ ವಿಶೇಷಣ ಪದಗಳನ್ನು ತುಂಬಿರಿ.
(ಅ) ರಾಮನು .... ಮಗ ಆಗಿದ್ದಾನೆ?
(ಆ) ಭೀಮನು.... ಅನ್ನ ತಿನ್ನುತ್ತಾನೆ.
(ಇ) ಈ ಚೀಲದಲ್ಲಿ .... ಸೇರು ಅಕ್ಕಿ ಇದೆ.
(ಈ) ಇದು.... ಗಡಿಯಾರ ಆಗಿದೆ?
(ಉ) ....ಬೋಂಡ ಎಂದಾದರೂ ತಿಂದಿದ್ದೀಯಾ?
(ಊ) ಕಾಡಿನಲ್ಲಿ.... ಮರಗಳಿರುತ್ತವೆ.
Letter Writing in Kannada - ಪತ್ರಲೇಖನ ನಮೂನೆಗಳು
Punctuation Marks - ಲೇಖನ ಚಿಹ್ನೆಗಳು
1. (.) ಪೂರ್ಣವಿರಾಮ Full stop 2. (,)Chandassu and its Kinds - ಛಂದಸ್ಸು ಭೇದಗಳು