Active & Passive Voice - ಕರ್ತರಿ ಕರ್ಮಣಿ ಪ್ರಯೋಗ


ಕರ್ತರಿ-ಕರ್ಮಣಿ ಪ್ರಯೋಗ - Active & Passive Voice

ವಾಕ್ಯದಲ್ಲಿ ಕತೃಪದವೇ ಪ್ರಧಾನವಾಗಿ ಬಂದಿದ್ದರೆ, ಆಗ ಕರ್ತರಿ ಪ್ರಯೋಗ ದಿರುತ್ತದೆ. ಸಾಮಾನ್ಯವಾಗಿ ನಾವು ಮಾತಾಡುವ ವಾಕ್ಯಗಳೆಲ್ಲವೂ ಕರ್ತರಿ ಪ್ರಯೋಗದಲ್ಲಿಯೇ ಇರುತ್ತವೆ.

ಉದಾಹರಣೆ :

ರಾಮನು ಹಣ್ಣು ತಿಂದನು.

ರಾಧೆಯು ಪಾಠ ಕಲಿತಳು.

ಸೀತಾ ನೀರು ಕುಡಿಯುತ್ತಾಳೆ.

ಗೋಪಾಲನು ಚೆಂಡನ್ನು ಹಿಡಿಯುವನು.

If in a sentence, the subject is prominent, then that is called Active voice. Generally what ever we speak, will be in Active Voice.

Example:

Rama ate a fruit.

Radha learned the lesson.

Seetha drinks the milk.

Gopal will catch the ball.

ಕರ್ಮಣಿ ಪ್ರಯೋಗದ ವಾಕ್ಯಗಳಲ್ಲಿ ಕರ್ಮಪದವು ಪ್ರಧಾನ ರೂಪದಲ್ಲಿರುತ್ತದೆ. ಕರ್ಮಪದವು ಕರ್ತೃಪದದ ಸ್ಥಾನದಲ್ಲಿರುತ್ತದೆ. ಕರ್ತೃಪದ ತೃತೀಯಾವಿಭಕ್ತಿ. “ಇಂದ' ಒಂದಿಗೆ ಬಂದಿರುತ್ತದೆ. ಅದೇ ರೀತಿ ಕರ್ಮಪದಕ್ಕೆ ಪ್ರಥಮಾವಿಭಕ್ತಿ 'ಉ' ಸೇರಿರುತ್ತದೆ. (ಕರ್ತೃಪದದ ಸ್ಥಾನದಲ್ಲಿರುವುದರಿಂದ) ಧಾತುವಿನ ಹಾಗೂ ಆಖ್ಯಾತ ಕ್ರಿಯಾ ಪ್ರತ್ಯಯಕ್ಕೂ ನಡುವೆ 'ಅಲ್ಪಡು' ಪ್ರತ್ಯಯವನ್ನು ಕಾಲಾನುಸಾರವಾಗಿ ಸೇರಿಸಲ್ಪಟ್ಟಿರುತ್ತದೆ.

ಉದಾಹರಣೆ :

ಹಣ್ಣು ರಾಮನಿಂದ ತಿನ್ನಲ್ಪಟ್ಟಿತು.

ಪಾಠ ರಾಧೆಯಿಂದ ಕಲಿಯಲ್ಪಟ್ಟಿತು.

ನೀರು ಸೀತೆಯಿಂದ ಕುಡಿಯಲ್ಪಡುತ್ತದೆ.

ಚೆಂಡು ಗೋಪಾಲನಿಂದ ಹಿಡಿಯಲ್ಪಡುವುದು.

In Passive Voice the object occupies the place of the subject and becomes prominence. Thruthiya vibakthi "ಯಿಂದ" is added to the subject, which now has occupied the place of the object. Similarly e' which is the symbol of Prathama Vibhakthi, will be added to the convected subject which was the object in the active in between ಧಾತು and ಆಖ್ಯಾತ ಪ್ರತ್ಯಯ the suffix "ಅಲ್ಪಡು" will be added.


Example:

The fruit was eaten by Rama.

The lesson was learnt by Radha.

Tea was drunk by Seetha.

The ball will be caught by Gopal.





ಕರ್ಮಣಿ ಪ್ರಯೋಗದಲ್ಲಿ ಕ್ರಿಯಾಪದದ ಬದಲಾವಣೆ - Change of Verb in Passive Voice

ಉದಾಹರಣೆಗೆ : “ಕೊಲ್ಲು” "To kill”

ವರ್ತಮಾನಕಾಲದಲ್ಲಿ ಕೊಲ್ಲಲ್ಪಡುತ್ತಾನೆ

In the Present Tense is killed

ಭೂತಕಾಲದಲ್ಲಿ  ಕೊಲ್ಲಲ್ಪಟ್ಟನು

In Past Tense   was killed

ಭವಿಷ್ಯತ್ಕಾಲದಲ್ಲಿ ಕೊಲ್ಲಲ್ಪಡುವನು

In Future Tense will be killed

ವಿದ್ಯರ್ಥದಲ್ಲಿ ಕೊಲ್ಲಲ್ಪಡಲಿ

In Imperative Let be killed

ಅಭ್ಯಾಸ - Exercise

1. “ಕರ್ತರಿ-ಕರ್ಮಣಿ ಪ್ರಯೋಗ'ವು ಪದವಿಭಾಗ (Parts of Speech) ಪ್ರಕರಣದ ಯಾವ ಭಾಗದಲ್ಲಿ ಬರುತ್ತದೆ?

2. ಕರ್ತರಿ ಪ್ರಯೋಗದಲ್ಲಿ ಕಂಡು ಬರುವ ವಿಶೇಷ ವಿಚಾರ ಏನು? |

3. ಕರ್ಮಣಿ ಪ್ರಯೋಗದಲ್ಲಿ ಕರ್ತೃ-ಕರ್ಮಪದಗಳಲ್ಲಿ ಯಾವುದಕ್ಕೆ ಪ್ರಾಧಾನ್ಯತೆ | ಇರುತ್ತದೆ? ಈ ಸಂದರ್ಭದಲ್ಲಿ ಆಗುವ ಬದಲಾವಣೆಗಳು ಯಾವುವು?

4. ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಬೇರೆ ಪ್ರಯೋಗದಲ್ಲಿ ಬರೆಯಿರಿ.

(ಅ) ಹಾಲು ಬೆಕ್ಕಿನಿಂದ ಕುಡಿಯಲ್ಪಟ್ಟಿತು.

(ಆ) ರಾಜು ಪಾಠ ಓದುತ್ತಿದ್ದಾನೆ.

(ಇ) ರಾವಣನು ಶ್ರೀರಾಮನಿಂದ ಕೊಲ್ಲಲ್ಪಡುವನು.

(ಈ) ಯಾರು ಮಗುವನ್ನು ಬೀಳಿಸಿದರು?

(ಉ) ವಿದ್ಯಾರ್ಥಿಗಳು ಲೆಕ್ಕ ಮಾಡುತ್ತಾರೆ.

(ಊ) ಭೀಮನು ಗಾಡಿ ಅನ್ನ ತಿಂದು ಮುಗಿಸಿದನು.

(ಋ) ಗಂಗೂಲಿ ಕ್ರಿಕೆಟ್ ತಂಡದವರಿಂದ ಗೌರವಿಸಲ್ಪಟ್ಟನು.




Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...