Parts of Speech - ಪದ ವಿಭಾಗ


ನಾವು  ಮಾತಾಡುವಾಗ  ಬಳಸುವ  ಮಾಧ್ಯಮವೇ ಪದಗಳಾಗಿವೆ. ಇದನ್ನು ಶಬ್ಧಗಳು ಎಂದೂ ಕರೆಯಲಾಗುವುದು.  ಮಾತಿನಲ್ಲಿ ಬರುವ ಪದಗಳು ಅಪಾರ,  ಅಸಂಖ್ಯಾತ.  ಇವನ್ನು ವಿವಿಧ  ರೀತಿಯಲ್ಲಿ  ಮಾತಿನ  ರೂಪದಲ್ಲಿ  ಬಳಸುತ್ತೇವೆ.

ಹೀಗೆ  ಬಳಸುವ  ಸಮಗ್ರ  ಪದಗಳನ್ನು  ಒಟ್ಟಾರೆ  ಪದ ಸಮುಚ್ಚಯ ಅಥವ ಪದವಿಭಾಗ  ಎನ್ನುವರು.

While speaking, we use the words as “Media”. These words are numerous and uncountable. All these words totally are called Parts of Speech.

ಪದಸಮುಚ್ಚಯವನ್ನು 8 ಗುಂಪುಗಳಾಗಿಮಾಡಲಾಗಿದೆ.

1.      ನಾಮಪದ (ಹೆಸರು ಸೂಚಿಸುವ ಪದಗಳು) - Nouns

2.     ಕ್ರಿಯಾಪದ (ಕೆಲಸವನ್ನು ಸೂಚಿಸುವ ಪದಗಳು) – Verbs

3.     ಸರ್ವನಾಮ (ನಾಮಪದಕ್ಕೆಬದಲಾಗಿಬರುವಪದಗಳು) - Pronouns

4.     ವಿಶೇಷಣ (ನಾಮಪದದ ಗುಣವನ್ನುತಿಳಿಸುವ ಪದಗಳು) - Adjective

5.     ಕ್ರಿಯಾವಿಶೇಷಣ (ಕ್ರಿಯಾಪದದ ಗುಣವನ್ನುತಿಳಿಸುವ ಪದಗಳು) – Adverb

6.     ಸಮುಚ್ಚಯ ವಾಚಕ ಪದಗಳು Conjuction

7.     ಸಂಬಂಧ ಸೂಚಕ ಪದಗಳು - Preposition

8.     ವಿಸ್ಮಯ ಬೋಧಕ ಪದಗಳು - Interjection


(1) ನಾಮಪದಗಳು - Nouns

ಇದನ್ನು ಸಂಜ್ಞಾ ಎಂದೂ ಕರೆಯುವರು.

ನಾಮಪದವು ಹೆಸರನ್ನು ಸೂಚಿಸುವ ಪದ ಆಗಿದೆಹೆಸರು ಮನುಷ್ಯನದಾಗಿರಬಹುದು, ಪ್ರಾಣಿಗಳದಾಗಿರಬಹುದುಗಿಡ-ಮರಗಳದಾಗಿರಬಹುದುವಸ್ತುಸ್ಥಳ ಯಾವುದೇ ಪದದ ಹೆಸರಾಗಿರಬಹುದು.

ಹೀಗೆ ಯಾರೊಬ್ಬ ವ್ಯಕ್ತಿಯ,  ಯಾವುದೇ ಪ್ರಾಣಿ, ಪದಾರ್ಥಸ್ಥಳ ಮೊದಲಾದವುಗಳ ಹೆಸರನ್ನು ತಿಳಿಸುವ ಪದಗಳು ನಾಮಪದ ಎನಿಸಿರುತ್ತವೆ

ಉದಾಹರಣೆ - Example:

ರಾಮ   (ಮನುಷ್ಯನ ಹೆಸರು)

ಹೆಂಗಸು  (ವ್ಯಕ್ತಿಯ ಹೆಸರ )

ಹುಲಿ  (ಪ್ರಾಣಿಯ ಹೆಸರು)

ಮೂಗು   (ವ್ಯಕ್ತಿಯ ದೇಹದ ಅಂಗದ ಹೆಸರು)

ಪುಸ್ತಕ   (ವಸ್ತುವಿನ ಹೆಸರು)

ಬೆಂಗಳೂರು  (ಸ್ಥಳದ ಹೆಸರು)

ಲಾಲ್ಬಾಗ್  (ಸ್ಥಳದ ಹೆಸರು)

ಹೀಗೆ ಯಾರಾದರೂ ವ್ಯಕ್ತಿಯವಸ್ತುವಿನ,  ಜಾಗ ಮೊದಲಾದವುಗಳ ಹೆಸರನ್ನು ತಿಳಿಸುವ ಪದಗಳು ನಾಮಪದಗಳಾಗಿರುತ್ತವೆ.

Noun is also called “Sanjna" in kannada grammar. Noun is the word denoting the names. May be the names of any person, any place, any animal or any things.

So noun is the name of any person, place, animal or thing.

Example:

Rama (the name of an individual)

Woman (the name of a person)

Book (the name of a thing)

Bangalore (the name of a place)

Tiger (the name of an animal)

Fly (the name of the insect)

Thus we may define noun as the name of any person, place, animal or thing.


(2) ಕ್ರಿಯಾಪದ - Verb

ಕ್ರಿಯೆಅಂದರೆಕೆಲಸ. ಕೆಲಸವನ್ನು ವಾಕ್ಯದಲ್ಲಿ ಸೂಚಿಸುವ ಪದ ಕ್ರಿಯಾಪದ ಆಗಿರುತ್ತದೆ.

ಉದಾಹರಣೆ - Example:

ರಾಮನು ಪಾಠ ಓದುತ್ತಾನೆ.

ಬೆಕ್ಕು ಇಲಿಮರಿಯನ್ನು ತಿನ್ನುತ್ತಿದೆ.

ಆಕಾಶದಲ್ಲಿ ನಕ್ಷತ್ರಗಳು ಮಿಣುಗುತ್ತಿವೆ.

ಮೇಲಿನ ಮೊದಲ ವಾಕ್ಯದಲ್ಲಿಓದುತ್ತಾನೆಎಂಬ ಪದವು ರಾಮನು ಮಾಡುವ ಕೆಲಸವನ್ನುತಿಳಿಸುತ್ತದೆ.

ಎರಡನೆಯ ವಾಕ್ಯದಲ್ಲಿತಿನ್ನುತ್ತಿದೆಎಂಬ ಪದವು ಬೆಕ್ಕು ಮಾಡುವ ಕೆಲಸವನ್ನು ಸೂಚಿಸುತ್ತಿದೆ.

ಹಾಗೆಯೇ ಮೂರನೆಯ ವಾಕ್ಯದಲ್ಲಿಮಿಣುಗುತ್ತಿವೆಎಂಬ ಪದವು ಆಕಾಶದಲ್ಲಿ ನಕ್ಷತ್ರಗಳು ಮಾಡುವ ಕೆಲಸವನ್ನು ತಿಳಿಸುತ್ತಿವೆ. ಆದರಿಂದ 'ಓದುತ್ತಾನೆ, ತಿನ್ನುತ್ತಿದೆ. ಮಿಣುಗುತ್ತಿವೆ' ಮೂರೂ ಪದಗಳು ಕೆಲಸವನ್ನು ಸೂಚಿಸುವುದರಿಂದ ಕ್ರಿಯಾಪದ ಆಗಿವೆ.

Verb denotes the work. In any sentence, the word, showing the meaning of the "work" is called the Verb.

For example:

Rama reads the lesson.

The cat is eating the rat.

The stars are twinkling in the sky.

In the above first sentence, the word “reads” denotes the work of Rama. In the second sentence “is eating” denotes the work of the cat. Similarly in the 3rd sentence, the words “are twinkling" denotes the work of the stars. So all the three words stated above, are the verbs in the parts of speech. So we may define the verb is a word which asserts or declares something.


 (3) ಸರ್ವನಾಮ - Pronoun

ನಾಮ ಪದಕ್ಕೆ ಬದಲಾಗಿ ಬರುವ ಪದವು ಸರ್ವನಾಮ ಆಗಿರುತ್ತದೆ.

ಉದಾಹರಣೆ - Example:

ರಾಮನು ರಾಜಣ್ಣನ ಮಗ, ಅವನು ತುಂಬಾ ಚೆನ್ನಾಗಿ ಓದುತ್ತಾನೆ.

ಸೀತೆ ಶಾಲೆಗೆ ಹಳ್ಳಿಯಿಂದ ಬರುತ್ತಾಳೆ. ಅವಳು ತುಂಬಾ ಚೂಟಿ ಇದ್ದಾಳೆ.

ರಘು, ನೀನು ಯಾವಾಗ ಬಂದೆಯೋ?

ಬೆಕ್ಕು ಅಡಿಗೆ ಮನೆಯಲ್ಲಿದೆ. ಅದು ಹಾಲು ಕುಡಿಯುತ್ತಿದೆ.

ಮೇಲಿನ ವಾಕ್ಯದಲ್ಲಿ 'ಅವನು' ಎಂಬುದು ರಾಮನು ಎಂಬುದರ ಬದಲಾಗಿಯೂ, “ಅವಳುಎಂಬ ಪದವುಸೀತೆ''ಎಂಬ ನಾಮಪದದ ಬದಲಾಗಿಯೂ, “ನೀನುಎಂಬ ಪದವು "ರಘುಎಂಬ ನಾಮಪದದ ಸ್ಥಾನದಲ್ಲಿಯೂ, 'ಅದು' ಎಂಬ ಪದವುಬೆಕ್ಕುಎಂಬ ನಾಮಪದದ ಸ್ಥಾನದಲ್ಲಿಯೂ ಬಂದಿವೆ. ಆದ್ದರಿಂದ ಅವರು, ಅವಳು, ನೀನು, ಅದುನಾಲ್ಕೂ ಪದಗಳೂ ಸರ್ವನಾಮ ಆಗಿವೆ.

ಅಂದರೆ ನಾಮಪದಕ್ಕೆ ಬದಲಾಗಿ ಅದರ ಸ್ಥಾನದಲ್ಲಿ ಬರುವ ಹೊಸಪದಗಳು ಸರ್ವನಾಮ 

The word, which comes in the place of a noun, is called Pronoun.

Example:

Rama is Rajanna's son.

He reads very well. Sitha comes to school from a village.

She is too smart. Raghu, when did you come?

The cat is in the kitchen hall.

It is drinking the milk.

In the above stated sentences, 'He' comes in the place of the “Rama”. “She” in the place of the noun "Sitha". 'You' in the place of "Raghu". 'It” in the place of the noun “Cat". So “he, she, you, it" all these four words are Pronouns.

So we can define, the word coming in the place of a noun, is called Pronoun.

(4) ವಿಶೇಷಣ - Adjective

ವಿಶೇಷಣ ಅಂದರೆ ಗುಣವನ್ನು ತಿಳಿಸುವುದು ಎಂದರ್ಥ. ಯಾವುದರ ಗುಣ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವಿಶೇಷಣವು ನಾಮಪದದ ಗುಣವನ್ನು ತಿಳಿಸುತ್ತದೆ. ಅಂದಮೇಲೆ ನಾಮಪದದ ಗುಣವನ್ನು ತಿಳಿಸುವ ಪದವು ವಿಶೇಷಣ ಆಗಿರುತ್ತದೆ.

ಉದಾಹರಣೆ:

ರಾಮನುಒಳ್ಳೆಯ ಹುಡುಗ ಆಗಿದ್ದಾನೆ.

ಅಶೋಕ ಆದರ್ಶ ರಾಜ ಎನಿಸಿದ್ದ.

ಕೆಸಬಿಯಾಂಕನು ಧೀರ ಬಾಲಕ ಎನಿಸಿದ್ದ.

ಗುಲಾಬಿ ಸುಂದರವಾದ ಹೂವು ಆಗಿದೆ.

ನೀಲಿಯ ಆಕಾಶ ನೋಡಲು ಚಂದ.

ಮೇಲಿನ ವಾಕ್ಯಗಳಲ್ಲಿಒಳ್ಳೆಯಎಂಬ ಪದವು ಅದರ ಮುಂದೆ ಬಂದಿರುವಹುಡುಗಎಂಬ ನಾಮಪದವನ್ನು ವಿಶೇಷಿಸುತ್ತದೆ. “ಆದರ್ಶಎಂಬ ಪದವು ಅದರ ಮುಂದಿನ ರಾಜಎಂಬ ನಾಮಪದವನ್ನು ವಿಶೇಷಿಸುತ್ತದೆ. “ಧೀರ'' ಎಂಬ ಪದವು ಅದರ  ಮುಂದಿರುವಬಾಲಕ' ಎಂಬ ನಾಮಪದವನ್ನು ವಿಶೇಷಿಸುತ್ತದೆ. “ಸುಂದರವಾದ'' ಎಂಬ ಪದವು ಅದರ ಮುಂದಿರುವಹೂವು'' ಎಂಬ ನಾಮ ಪದವನ್ನು ವಿಶೇಷಿಸುತ್ತದೆ. “ನೀಲಿಯಎಂಬ ಪದವೂ ಸಹ ಅದರ ಮುಂದೆ ಬಂದಿರುವಆಕಾಶಎಂಬ ನಾಮಪದವನ್ನು ವಿಶೇಷಿಸುತ್ತದೆ. ಆದ್ದರಿಂದ ಒಳ್ಳೆಯ, ಆದರ್ಶ, ಧೀರ, ಸುಂದರವಾದ ಹಾಗೂ ನೀಲಿಯ ಐದೂ ಪದಗಳೂ ವಿಶೇಷಣ ಪದಗಳೆನಿಸಿವೆ.

ಅಂದರೆ ವಿಶೇಷಣವು ನಾಮಪದದ ಗುಣವನ್ನು ವಿಶ್ಲೇಷಿಸುವ ಪದ ಆಗಿರುತ್ತದೆ ಎಂದಾಯಿತು.

Adjective is a describing word. It describes the quality of the noun.

Example:

Rama is a good boy.

Ashoka was an ideal king.

Kesabiyanka was a brave boy.

Rose is a beautiful flower.

Blue sky is fine to look at.

In the above stated sentences, the word “good” qualifies the noun “boy”. The word “ideal” qualifies “king”. In the 3rd sentence “brave" qualifies the noun “boy”. Simiilarly the word “beautiful" qualifies its next noun “flower”. In the last sentence the word “blue” qualifies the noun "sky”.

All these five words are qulifying their relevant nouns. So they are called Adjectives.

We may define now, that the adjective is a word which qualifies a noun.


 

 





(5) ಕ್ರಿಯಾವಿಶೇಷಣ - Adverb

ವಿಶೇಷಣಕ್ಕೂ, ಕ್ರಿಯಾವಿಶೇಷಣಕ್ಕೂ ಇರುವ ತಾರತಮ್ಯವನ್ನು ನಾವು ಗಮನಿಸಿರಬೇಕು. ನಾಮಪದವನ್ನು ವಿಶೇಷಿಸುವ, ಅಂದರೆ ನಾಮಪದದ ಗುಣವನ್ನು ತಿಳಿಸುವ ಪದವು ವಿಶೇಷಣ ಎನಿಸಿದರೆ, ಕ್ರಿಯಾಪದದ ಗುಣವನ್ನುವಿಶೇಷಿಸುವ, ಅಂದರೆ ಕ್ರಿಯಾಪದವನ್ನು ವಿಶೇಷಿಸುವ ಪದ ಕ್ರಿಯಾವಿಶೇಷಣ ಎನಿಸಿರುತ್ತದೆ.

ವಿಶೇಷಣದ ಬಗ್ಗೆ ಹಿಂದಿನ ಅಧ್ಯಾಯದಲ್ಲಿ ನಾವು ತಿಳಿದುಕೊಂಡಿದ್ದೇವೆ. ಈಗ ಕ್ರಿಯಾವಿಶೇಷಣದ ವಿಷಯ ತಿಳಿಯೋಣ.

ಕ್ರಿಯೆಯ ವಿಶೇಷಣವನ್ನು ತಿಳಿಸುವ ಪದ ಕ್ರಿಯಾವಿಶೇಷಣ ಆಗಿರುತ್ತದೆ.

ಉದಾಹರಣೆ:

ಆಕಾಶ ನೀಲಿ ಆಗಿದೆ. (ರೀತಿ)

ರಾಮನು ಎಲ್ಲಿಂದ ಬಂದ? (ಸ್ಥಳ)

ಅವನು ಎಲ್ಲೂ ಕಾಣಲಿಲ್ಲ. (ಸ್ಥಳ)

ದೇವರು ಎಲ್ಲೆಲ್ಲಿಯೂ ಇದ್ದಾನೆ. (ಸ್ಥಳ)

ಜಿಂಕೆ ವೇಗವಾಗಿ ಓಡುತ್ತದೆ. (ರೀತಿ)

ಭೀಮನು ನೆನ್ನೆ ಬಂದ. (ಕಾಲ)

ಮೇಲಿನ ವಾಕ್ಯಗಳಲ್ಲಿ  'ನೀಲಿ' ಎಂಬ ಪದವು ಆಕಾಶದ ವರ್ಣವಿಶೇಷವನ್ನು ತಿಳಿಸುತ್ತದೆ. “ಎಲ್ಲಿಂದಎಂಬ ಪದವು ರಾಮನು ಬಂದ ಸ್ಥಳ ವಿಶೇಷವನ್ನು ತಿಳಿಸುತ್ತದೆ. “ವೇಗವಾಗಿಎಂಬ ಪದವು ಜಿಂಕೆಯ ಓಟದ ರೀತಿಯನ್ನು ತಿಳಿಸುತ್ತದೆ. “ನನ್ನ ಎಂಬ ಪದವು ಭೀಮನು ಬಂದುದರ ಕಾಲವನ್ನು ತಿಳಿಸುತ್ತದೆ. ಆದ್ದರಿಂದ ನೀಲಿ, ಎಲ್ಲಿಂದ, ಎಲ್ಲೂ, ವೇಗವಾಗಿ, ನೆನ್ನೆ ಆರೂ ಪದಗಳೂ ಕ್ರಿಯಾವಿಶೇಷಣಗಳಾಗಿವೆ.

ಅಂದರೆ ಕ್ರಿಯಾಪದದ ರೀತಿ ವಿಶೇಷ.ಸ್ಥಾನ ವಿಶೇಷ, ಸ್ಥಳ ವಿಶೇಷ ಮೊದಲಾದ ವಿಶೇಷತೆಗಳನ್ನು ತಿಳಿಸುವ ಪದಗಳು ಕ್ರಿಯಾವಿಶೇಷಣ ಎನಿಸುವುವು.

Before learning of the Adverb, we must be aware of knowing the difference between Adjective and Adverb. Adjective qualifies a noun whereas Adverb modifies the Verb.

An adverb modifies a verb. Not only the verb, an adjective and also another adverb.

Example:

Rama runs (verb) fastly (modifies the verb)

Rama is a very good (Adjective) boy. (modifies theadjective, “good”).

Rama runs very fastly. (Adverb)

In the above three sentences, the adverb “fastly” modifies the verb “runs". In the second sentence “very” is the adverb, modifying the adjective “good”. In the 3rd sentence “very” is the adverb, modifying another adverb “fastly".

To conclude, we may define that the adverb is a word which modifies a verb, an adjective or another adverb.


(6) ಸಂಬಂಧ ಸೂಚಕಾವ್ಯಯ - Preposition

ಎರಡು ಪದಗಳು ಇಲ್ಲವೇ ಎರಡು ವಾಕ್ಯಗಳ ಸಂಬಂಧವನ್ನು ತೋರಿಸುವ ಅವ್ಯಯವು ಸಂಬಂಧ ಸೂಚಕಾವ್ಯಯ ಎನಿಸುವುದು. ಸಂಬಂಧದಿಂದ ಆದ ಅವ್ಯಯಗಳು ಪದಗಳಿಗೋ, ಪದಗಳ ಗುಂಪುಗಳಿಗೋ, ಇಲ್ಲವೇ ವಾಕ್ಯಗಳ ಗುಂಪಿಗೋ ಸಂಬಂಧವನ್ನು ಕಲ್ಪಿಸುವುದರಿಂದ ಇಂತಹ ಅವ್ಯಯಗಳನ್ನು ಸಂಬಂಧ ಸೂಚಕಾವ್ಯಯ ಅನ್ನುವರು.

ಉದಾಹರಣೆ:

ಮೇಜಿನ ಮೇಲೆ ಪುಸ್ತಕ ಇದೆ.

ರಾಮನ ಕೈಯಲ್ಲಿ ಹಣ್ಣು ಇದೆ.

ಸೀತಾ ಗೀತಾ ಮತ್ತು ರೀತಾಳ ಮಧ್ಯೆ ಇದ್ದಾಳೆ.

ಕುರ್ಚಿಯ ಕೆಳಗೆ ಬೆಕ್ಕು ಕುಳಿತಿದೆ.

ತಲೆಯಿಂದ ಮೇಲೆ ಆಕಾಶ ಇದೆ.

ಮೇಲಿನ ವಾಕ್ಯಗಳಲ್ಲಿ ಮೇಲೆ, ಅಲ್ಲಿ, ಮಧ್ಯೆ, ಕೆಳಗೆ, ಮೇಲೆಅವ್ಯಯಗಳು ಅವುಗಳ ಅತ್ತಿತ್ತಲಿನ ನಾಮಪದಗಳ ಸಂಬಂಧವನ್ನು ತಿಳಿಸುವುದರಿಂದ ಸಂಬಂಧ ಸೂಚಕಾವ್ಯಯ ಎನಿಸಿವೆ.

 

Preposition shows relation between two things. It may be between two words or between two groups of words.

Example:

The book is on the table.

The fruit is in Rama's hand.

Sitha is between Geetha and Reetha.

The cat is under the chair.

The sky is above our head.

In the above said sentences the preposition 'in' shows the relation between the two nouns- i.e. fruit and Rama's hand. In the 2nd sentence “between” is the preposition, showing the relation between the two words - Sita and Geetha and Reetha.

In the 3rd sentence “under" is the preposition, because it shows the relation between the two words 'cat and chair'.

In the last sentence 'above' is the prepostion, showing the relation between ‘sky' and 'head'.

So all these four words are preposition. Then we may conclude that the preposition shows the relation between two things.

 

(7) ಸಮುಚ್ಚಯಬೋಧಕಾವ್ಯಯ - Conjunction

ಸಮುಚ್ಚಯಅಂದರೆಸೇರ್ಪಡೆ'' ಎಂದು ಅರ್ಥ ಆಗುತ್ತದೆ. ಎರಡು ಪದಗಳನ್ನಾಗಲಿ, ಇಲ್ಲವೇ ಎರಡು ವಾಕ್ಯಗಳನ್ನಾಗಲಿ ಸೇರಿಸಲು ಉಪಯೋಗಿಸುವ ಅವ್ಯಯವನ್ನು ಸಮುಚ್ಚಯ ಬೋಧಕಾವ್ಯಯ ಎನ್ನಬಹುದು.

ಉದಾಹರಣೆಗಳು:

ರಾಮ ಮತ್ತು ಲಕ್ಷ್ಮಣ ಇಬ್ಬರೂ ಅಣ್ಣ ತಮ್ಮಂದಿರು.

ರಾಮ ಅಥವಾ ಭೀಮದಿನದ ಪಂದ್ಯದಲ್ಲಿ ಆಡುವರು.

ರಾಮನು ಚೆನ್ನಾಗಿ ಓದುತ್ತಾನೆ ಮತ್ತು ಅವನು ಚೆನ್ನಾಗಿ ಬರೆಯುತ್ತಾನೆ.

ರಾಮನು ಕಷ್ಟ ಪಟ್ಟು ಓದಿದ, ಆದರೂ ಅವನು ಉತ್ತೀರ್ಣನಾಗಲಿಲ್ಲ.

ಮೇಲಿನ ಮೊದಲ ವಾಕ್ಯದಲ್ಲಿ ಮತ್ತುಎಂಬ ಸಮುಚ್ಚಯ ಬೋಧಕಾವ್ಯಯವು ರಾಮ, ಲಕ್ಷ್ಮಣ ಎಂಬ ಎರಡು ನಾಮಪದಗಳನ್ನು ಸೇರಿಸುತ್ತದೆ. ಎರಡನೆಯ ವಾಕ್ಯದಲ್ಲಿ ಅಥವಾ' ಎಂಬ ಪದವು ರಾಮ, ಭೀಮ ಎಂಬ ಎರಡು ಪದಗಳನ್ನು ಜೋಡಿಸುತ್ತದೆ. ಮೂರನೆಯ ವಾಕ್ಯದಲ್ಲಿ ಮತ್ತು ಎಂಬ ಪದವು.

(1) ರಾಮನು ಚೆನ್ನಾಗಿ ಓದುತ್ತಾನೆ.

(2) ಅವನು ಚೆನ್ನಾಗಿ ಬರೆಯುತ್ತಾನೆ ಎಂಬ ಎರಡೂ ವಾಕ್ಯಗಳನ್ನು ಸೇರಿಸುತ್ತದೆ.

ನಾಲ್ಕನೆಯ ವಾಕ್ಯದಲ್ಲಿ ಆದರೂ' ಎಂಬ ಪದವು

(1) ರಾಮನು ಕಷ್ಟ ಪಟ್ಟು ಓದಿದ. (2) ಅವನು ಉತ್ತೀರ್ಣನಾಗಲಿಲ್ಲ ಎಂಬ ಎರಡು ವಾಕ್ಯಗಳನ್ನೂ ಸೇರಿಸುತ್ತದೆ.

ಆದರಿಂದ ಮತ್ತು'  ‘ಅಥವಾ' ಹಾಗೂ 'ಆದರೂ' ಇವು ಮೂರೂ ಪದಗಳೂ ಸಮುಚ್ಚಯ ಬೋಧಕಾವ್ಯ ಗಳೆನಿಸಿವೆ.

ಅಂದರೆ ಯಾವುದಾದರೂ ಎರಡು ಪದಗಳನ್ನಾಗಲಿ, ಎರಡು ವಾಕ್ಯಗಳನ್ನಾಗಲಿ ಸೇರಿಸುವ ಅವ್ಯಯಪದವು ಸಮುಚ್ಚಯಬೋಧಕಾವ್ಯಯ ಎನಿಸಿರುತ್ತದೆ.

Conjunction

By these two words, the word conjuction is formed. Conjunction means formation of two words or two sentences. So any word joining two words or two sentences is said to be 'conjuction'.

Examples:

Rama and Lakshmana are brothers.

Rama or Bheema will play in today's match.

Sitha reads well and she also writes well.

Gopal studied hard, yet he failed in the examination.

In the above first sentence the word ‘and' joins two nouns i.e. Rama, Lakshmana. In the second sentence, the word ‘or' joins two words i.e. Rama, Bheema. In the 3rd sentence, the word 'and' joins two sentences -

(1) Seetha reads well.

(2) She also writes well.

In the last sentence the word 'yet' joins two sentences

(1) Gopal studied hard

(2) He failed in the examination

So‘and', 'or', 'yet all the three words are conjunctions.

 

(8) ಭಾವಸೂಚಕಾವ್ಯಯ - Interjection

ಭಾವನೆಯನ್ನು ಪ್ರತಿಬಿಂಬಿಸುವ ಪ್ರತೀಕಾತ್ಮಕ ಪದಗಳನ್ನು ಭಾವಸೂಚಕಾವ್ಯಯ ಎನ್ನಬಹುದು. ಇಂತಹ ಪದಗಳು ಅತಿ ಹೆಚ್ಚಿನ ದುಃಖವನ್ನೋ, ಆನಂದವನ್ನೋ, ಭಯವನ್ನೋ, ವಿಸ್ಮಯವನ್ನೂ ಸೂಚಿಸುವ ಪದಗಳು ಭಾವಸೂಚಕಾವ್ಯಯ ಎನಿಸುವುವು.

ಉದಾಹರಣೆಗಳು:

ಭಲೇ! ಪಂದ್ಯದಲ್ಲಿ ನಾವೇ ಗೆದ್ದೆವು. (ಆನಂದ)

ಅಯ್ಯೋ! ಮಗು ಮಹಡಿಯಿಂದ ಕೆಳಗೆ ಬಿದ್ದಿತು. (ದುಃಖ)

ಅಬ್ಬಾ! ಅವನೆಷ್ಟೊಂದು ಗಟ್ಟಿಗ. (ವಿಸ್ಮಯ)

ಅಮ್ಮಮ್ಮಾ! ಛಳಿಯಲ್ಲಿ ಮಗು ನಡುಗುತ್ತಿದೆ. (ಭಯ)

ಮೊದಲ ವಾಕ್ಯದಲ್ಲಿ 'ಭಲೇ' ಎಂಬ ಪದವು ಅತ್ಯಾನಂದವನ್ನೂ, ಎರಡನೆಯ ವಾಕ್ಯದಲ್ಲಿ 'ಅಯ್ಯೋ' ಎಂಬ ಪದವು ದುಃಖವನ್ನೂ, ಮೂರನೇ ವಾಕ್ಯದಲ್ಲಿ 'ಅಬ್ಬಾ' ಎಂಬ ಪದವು ವಿಸ್ಮಯವನ್ನೂ, ನಾಲ್ಕನೆಯ ವಾಕ್ಯದಲ್ಲಿಅಮ್ಮಮ್ಮಾ' ಎಂಬ ಪದವು ಭಯವನ್ನೂ ಸೂಚಿಸುವುದರಿಂದ ವಿಸ್ಮಯಬೋಧಕಾವ್ಯಯ ಎನಿಸಿದೆ.

Words denoting the sudden feelings are called Interjection. The feelings may be by pleasure, sorrow, fear or wonder. So an interjection is a word which shows sudden feeling.

Examples:

Bravo! we won the match. (Pleasure)

Hurrah! we have won. (Pleasure)

Alas! the baby fell into the well. (Sorrow)

Oho! the child is shivering by cold. (Health)

In the above said sentences, 'bravo, hurrah' both the words denote happiness. In the 3rd sentence ‘alas' resembles (sorrow). In the 4th sentence ‘Oho!' denotes the feeling of fear. So “bravo, hurrah, alas, oh," all the four words are interjection.




Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...