ತದ್ದಿತ (ತದ್ಧಿತ+ಅಂತ)
1. ತದ್ದಿ ತಾಂತನಾಮ
2. ತದ್ಧಿತಾಂತ ಭಾವನಾಮ
3. ತದ್ದಿತಾಂತವ್ಯಯ
ಹಲವೊಮ್ಮೆ ಅವ್ಯಯಗಳು ನಾಮಪದಗಳೊಂದಿಗೆ ಸೇರಿದಾಗ, ಇನ್ನೊಂದು ನಾಮಪದ ಆಗುವುದು. ಇದನ್ನೇ ತದ್ಧಿತಾಂತ ಅನ್ನುವರು.
Some suffixes, by joining the nouns, form other type of nouns. Such nouns are are called ತದ್ದಿತಾಂತ.
ಉದಾಹರಣೆಗಳು:
ಕನ್ನಡಿಗರು ನಿಜಕ್ಕೂ ಕೆಚ್ಚೆದೆಯ ವೀರರು.
ಎಣ್ಣೆ ತೆಗೆಯುವವರನ್ನು ಗಾಣಿಗ ಎನ್ನುವರು.
ಅವನೊಬ್ಬ ಹಾವಾಡಿಗ.
ಮೇಲಿನ ವಾಕ್ಯಗಳಲ್ಲಿ 'ಕನ್ನಡ' ಎಂಬ ನಾಮಪದಕ್ಕೆ 'ಇಗ' ಎಂಬ ಅವ್ಯಯ ಸೇರಿ, 'ಕನ್ನಡಿಗ' ಎಂಬ ಬೇರೊಂದು ಅರ್ಥದ ನಾಮಪದ ಆಗಿದೆ.
ಎರಡನೆಯ ವಾಕ್ಯದಲ್ಲಿ 'ಗಾಣ' ಎಂಬ ನಾಮಪದಕ್ಕೆ 'ಇಗ' ಎಂಬ ಅವ್ಯಯ ಸೇರಿ, 'ಗಾಣಿಗ' ಎಂಬ ಬೇರೊಂದು ಅರ್ಥದ ನಾಮಪದ ಆಗಿದೆ. ಹಾಗೆಯೇ ಮೂರನೆಯ ವಾಕ್ಯದಲ್ಲಿ 'ಹಾವು' ಎಂಬ ನಾಮಪದಕ್ಕೆ ಯಾವುದಾದರೊಂದು ಅವ್ಯಯ ಸೇರಿದಾಗ ಬೇರೊಂದು ಅರ್ಥದ ನಾಮಪದ ಉಂಟಾದರೆ, ಅದನ್ನು“ತದ್ದಿತಾಂತ” ಎನ್ನುವರು.
Some suffixes by joining the nouns, form other types of nouns. Such nouns are called ತದ್ದಿತಾಂತನಾಮ.
Examples:
The people in Karnataka are called Kanaadigas.
He is ಹಾವಾಡಿಗ.
The list of some other examples similarly
ಇದೇ ರೀತಿಯ ಇತರ ಉದಾಹರಣೆಗಳ ಒಂದು ಪಟ್ಟಿ:
ನಾಮಪದ Noun |
ತದ್ಧಿತಪ್ರತ್ಯಯ Suffix Noun form |
ತದ್ದಿತಾಂತ ನಾಮಪದ Thaddhitanta Noun |
ಯುಕ್ತಿ |
ಅಂತ |
ಯುಕ್ತಿವಂತ |
ಜ್ಞಾನ |
ಇ |
ಜ್ಞಾನಿ |
ಸಿರಿ |
ಅಂತ |
ಸಿರಿವಂತ |
ಕನ್ನಡ |
ಇಗ |
ಕನ್ನಡಿಗ |
ಹೂವು |
ಅಡಿಗ |
ಹೂವಾಡಿಗ |
ಗಾಣ |
ಇಗ |
ಗಾಣಿಗ |
ಚೆನ್ನು |
ಇಗ |
ಚೆನ್ನಿಗ |
ಹಠ |
ವಾದಿ |
ಹಠವಾದಿ |
ಮಾತು |
ಕಾರ |
ಮಾತುಗಾರ |
ಓಲೆ |
ಕಾರ |
ಓಲೆಗಾರ |
ನಾಮ ಪದಗಳ ಮೇಲೆ ಗಾರ, ಕಾರ, ಇಗ, ವಂತ ಮೊದಲಾದ ಪ್ರತ್ಯಯಗಳನ್ನು ಸೇರಿಸಿದಾಗ ತದ್ದಿತಾಂತ ಎನಿಸುವುವು.
ತದ್ಧಿತಪ್ರತ್ಯಯ Suffix |
ನಾಮಪದ Noun |
|
ಅರ್ಧತದ್ಧಿತ |
|
ಪ್ರತ್ಯಯ Suffix |
ತದ್ಧಿತಾಂತನಾಮ |
ಗಾರ |
ಬಳೆಯನ್ನು |
+ |
ಮಾರುವವನು |
= |
ಗಾರ |
ಬಳೆಗಾರ |
|
ಮಾಲೆಯನ್ನು |
+ |
ಕಟ್ಟುವವನು |
= |
ಗಾರ |
ಮಾಲೆಗಾರ |
ಕಾರ |
ಓಲೆಯನ್ನು |
+ |
ತರುವವನು |
= |
ಕಾರ |
ಓಲೆಕಾರ |
|
ಕೋಲನ್ನು |
+ |
ಹಿಡಿಯುವವರು |
= |
ಕಾರ |
ಕೋಲುಕಾರ |
ಇಗ |
ಗಾಣವನ್ನು |
+ |
ಆಡಿಸುವವನು |
= |
ಇಗ |
ಗಾಣಿಗ |
|
ಲೆಕ್ಕವನ್ನು |
+ |
ಬಲ್ಲವನು |
= |
ಇಗ |
ಲೆಕ್ಕಿಗ |
|
ಕನ್ನಡದಲ್ಲಿ |
+ |
ಮಾತಾಡುವವನು |
= |
ಇಗ |
ಕನ್ನಡಿಗ |
ವಂತ |
ಸಿರಿಯನ್ನು |
+ |
ಉಳ್ಳವನು |
= |
ವಂತ |
ಸಿರಿವಂತ |
|
ಗುಣವನ್ನು |
+ |
ಉಳ್ಳವನು |
= |
ವಂತ |
ಗುಣವಂತ |
ಏಳ |
ಮಡಿಯನ್ನು |
+ |
ಮಾಡುವವನು |
= |
ಏಳ |
ಮಡಿವಾಳ |
|
ಧನವನ್ನು |
+ |
ಉಳ್ಳವನು |
= |
ವಂತ |
ಧನವಂತ |
|
ಬಲವನ್ನು |
+ |
ಉಳ್ಳವನು |
= |
ವಂತ |
ಬಲವಂತ |
ಅಡಿಗ |
ಹಾವನ್ನು |
+ |
ಆಡಿಸುವವನು |
= |
ಅಡಿಗ |
ಹಾವಾಡಿಗ |
|
ಹೂವನ್ನು |
+ |
ಕಟ್ಟುವವನು |
= |
ಅಡಿಗ |
ಹೂವಾಡಿಗ |
|
ಹೂವನ್ನು |
+ |
ಮಾರುವವನು |
= |
ಅಡಿಗ |
ಹೂವಾಡಿಗ |
ತದ್ಧಿತ ಪ್ರತ್ಯಯ ತದ್ಧಿತಾಂತನಾಮ | ನಾಮಪದ | ಅರ್ಧತದ್ದಿತ | ಪ್ರತ್ಯಯ | ||
Suffix ಇಕ ಅಳಿ ಗುಳಿ ಅರ | Noun ಕರಿಯನ್ನು ಬಿಳಿಯನ್ನು ಮಾತನ್ನು ವಾಕ್‌ನ್ನು ಲಂಚವನ್ನು ಕುಂಭವನ್ನು ಕಮ್ಮತನ್ನು | + + + + + + + | ಉಳ್ಳವನು ಉಳ್ಳವನು ಹೆಚ್ಚು ಆಡುವ ಹೆಚ್ಚು ಆಡುವವನು ತೆಗೆದುಕೊಳ್ಳುವವ ಮಾಡುವವನು ಆಚರಿಸುವವನು | = = = = = = = | Suffix ಇಕ ಕರಿಕ ಇಕ ಬಳಿಕ ಅಳಿ ಮಾತಾಳಿ ಅಳಿ ವಾಚಾಳಿ ಗುಳಿ ಲಂಚಗುಳಿ ಅರ ಕುಂಬಾಲ ಅರ ಕಮ್ಮಾರ |
ಕರ್ಮಾರ-ಕರ್ಮಕಾರ (ಸಂಸ್ಕೃತದಲ್ಲಿ)
ಕುಂಬಾರ= ಕುಂಭ ಕಾರ (ಸಂಸ್ಕೃತದಲ್ಲಿ)
ಸ್ತ್ರೀ ಲಿಂಗದಲ್ಲಿ ಬರುವ ತದ್ದಿತ ಪ್ರತ್ಯಯಗಳು
ಇತಿ, ಇತ್ತಿ, ಗಿತ್ತಿ, ತಿ, ಇ, ಎ
ಇತಿ - ಬೀಗಿತಿ, ಬ್ರಾಹ್ಮಣಿತಿ, ಹೆಗ್ಗಡಿತಿ
ಇತ್ತಿ - ಹೂವಾಡಗಿತ್ತಿ, ಗಾಣಿಗಿತ್ತಿ, ಒಕ್ಕಲಗಿತ್ತಿ
ಇ - ಕಳ್ಳಿ, ಕುಳ್ಳಿ, ಸುಳ್ಳಿ
ಎ - ಜಾಣೆ, ಕೋಣೆ
ವಂತೆ - ಗುಣವಂತೆ, ಸಿರಿವಂತೆ, ಹಿರಿವಂತೆ
ತದ್ಧಿತಾಂತ ಭಾವನಾಮ - Abstract Form
ಜಾಣ-ಜಾಣೆ ತಂಪನೆಯ ತಂಪು
ಕಪ್ಪನೆಯ-ಕಪ್ಪು ಒಳ್ಳೆಯ-ಒಳ್ಳಿತು
ಕೆಟ್ಟ ಕೇಡು ಸುಂದರ ಸೌಂದರ್ಯ
ಕ್ರಿಯಾವಿಶೇಷಣಗಳಿಗೆ ಅವ್ಯಯಗಳು ಸೇರಿದಾಗ
When Suffixes are added to adverb
ಇಲ್ಲಿ + ಅ + ಅವನು = ಇಲ್ಲಿಯವನು
ಅಲ್ಲಿ + ಅ + ಅವನು = ಅಲ್ಲಿಯವನು
ಎಲ್ಲಿ + ಅ + ಅವನು = ಎಲ್ಲಿಯವನು
ಮೇಲೆ + ಇನ = ಮೇಲಿನ = ಮೇಲಿನವನು
ಕೆಳಗೆ + ಇನ = ಕೆಳಗಿನ = ಕೆಳಗಿನವನು
ಕೆಳಗೆ + ಅಣ = ಕೆಳಗಣ = ಕೆಳಗಣವನು ಇತ್ಯಾದಿ
Letter Writing in Kannada - ಪತ್ರಲೇಖನ ನಮೂನೆಗಳು
Punctuation Marks - ಲೇಖನ ಚಿಹ್ನೆಗಳು
1. (.) ಪೂರ್ಣವಿರಾಮ Full stop 2. (,)Chandassu and its Kinds - ಛಂದಸ್ಸು ಭೇದಗಳು