Letters Words & Sentences - ವರ್ಣ - ಪದ - ವಾಕ್ಯ


ಕನ್ನಡ ವರ್ಣಮಾಲೆಯಲ್ಲಿ ಬರುವ ಪ್ರತಿಯೊಂದು ಅಕ್ಷರವನ್ನೂ ವರ್ಣ ಅನುವರು. ನಾವು ನಮ್ಮ ಭಾಷೆಯಲ್ಲಿ ಬಳಸುವುದೆಲ್ಲವೂ ವರ್ಣಗಳೇ ಆಗಿವೆ. ಈ ವರ್ಣಗಳೇ ಭಾಷೆಯ ಮಾಧ್ಯಮ ಎನಬಹುದು. ವರ್ಣವಿಚಾರವಾಗಿ ಇದುವರೆಗೂ ನಾವು ಸಾಕಷ್ಟುತಿಳಿದಿದ್ದೇವೆ.

Every letter in Kannada alphabet is called "letter" whatever we use in our language, while speaking, are all the letters. Letters are the media in our speech.

ವರ್ಣಗಳನ್ನು, ನಾವು ಮಾತಾಡುವಾಗ ಅಸಂಬದ್ಧರೀತಿಯಲ್ಲಿ ಬಳಸಲಾಗುವುದಿಲ್ಲ. ಆಗ ಅರ್ಥಹೀನವೆನಿಸುತ್ತದೆ. ಸುವ್ಯವಸ್ಥಿತರೀತಿಯಲ್ಲಿ ಅವನ್ನು ಬಳಸಿದಾಗ ಮಾತ್ರ ಅರ್ಥಕೊಡುತ್ತವೆ. ಹೀಗೆ ಅರ್ಥಕೊಡುವರೀತಿಯಲ್ಲಿ ಸೇರಿರುವ ವರ್ಣ ಸಮೂಹವೇ ಪದ ಎನಿಸುವುದು. ಉದಾಹರಣೆ:

'ನುಮರಾ'

ಈ ಮೇಲಿನ ಮೂರು ಅಕ್ಷರಗಳನ್ನು ಕೂಡಿಸಿ ಹೇಳಿದಾಗ, ಸರಿಯಾದ ಅರ್ಥಕೊಡುವುದಿಲ್ಲ. ಇದೇವಾಕವನು

'ರಾಮನು'

ಎಂದು ಹೇಳಿದಾಗ ಮಾತಿನಲ್ಲಿ ಅರ್ಥಬರುತ್ತದೆ. ಹೀಗೆ ಅರ್ಥಕೊಡುವಂತೆ ಒಂದಕ್ಕೊಂದು ಸೇರಿರುವ ವರ್ಣ ಸಮೂಹವೇ ಪದ ಎನಿಸುವುದು. ಪದವನ್ನು 'ಶಬ್ದ' ಎಂದೂಹೇಳುವರು.

While speaking, we cannot use the letters irregularly. They should be used systematically, so as to give perfect meaning. Such letters which are joined together to the perfect meaning, are called "words".

For example:

'ನುಮರಾ'

While speaking, "ನುಮರಾ"is not giving any clear meaning. So this is not the word when we say 'ರಾಮನು', it gives the perfect meaning.

So we may consider that the letters joining together, giving full meaning, is called the 'word'.





ವಾಕ್ಯ (Sentence)

ಇದೇ ರೀತಿಯಲ್ಲಿ ಪದಗಳು ಒಂದಕ್ಕೊಂದು ಕೂಡಿದಾಗ ವಾಕ್ಯ ಎನಿಸುವುದು. ಆದರೆ ಅಂತ ಹಪದಗಳೂಸ ಹವ್ಯವಸ್ಥಿತರೀತಿಯಲ್ಲಿ ಸೇರಿದ್ದು, ಅರ್ಥ ಕೊಡುವಂತಿರಬೇಕು. ಆಗಲೇ 'ವಾಕ್ಯ' ಎನಿಸಿಕೊಳ್ಳಲು ಅರ್ಹಎನಿಸುವುವು.

ಉದಾಹರಣೆ:

ಆಗಿದ್ದಾನ ಹುಡುಗ ರಾಮನ ಒಬ್ಬ

ಅಂದಾಗ, ನಾಲ್ಕು ಪದಗಳು ಒಟ್ಟಿಗೆ ಸೇರಿದ್ದರೂ ಅರ್ಥಕೊಡುತ್ತಿಲ್ಲ. ಕೊಟ್ಟ ರೂಪೂರ್ಣ ಅರ್ಥಬರುತ್ತಿಲ್ಲ. ಇದರ ಕಾರಣ ಪದಗಳು ಒಂದಕ್ಕೊಂದು ಸಮಂಜಸರೀತಿಯಲ್ಲಿ ಸೇರಿಲ್ಲ. ಆದ್ದರಿಂದಲೇ ಅರ್ಥಹೀನಎನಿಸಿವೆ.

ಮೇಲಿನ ಪದಗಳನ್ನೇ ಸಮಂಜಸರೀತಿಯಲ್ಲಿ ಸುವ್ಯವಸ್ಥಿತರೀತಿಯಲ್ಲಿ ಸೇರಿಸಿದಾಗ ಅಂತ ಹಪದಸಮೂಹವು ಸಂಪೂರ್ಣ ಅರ್ಥವನ್ನು ಕೊಡುತ್ತವೆ.

ಉದಾಹರಣೆ:

ರಾಮನು ಒಬ್ಬ ಹುಡುಗ ಆಗಿದ್ದಾನೆ.

ಮೇಲಿನ ವಾಕ್ಯದಲ್ಲಿರುವ ನಾಲ್ಕೂಪದಗಳೂ ಅರ್ಥಪೂರ್ಣವಾಗಿ ಒಂದಕ್ಕೊಂದು ಸೇರಿವೆ. ಸಂಪೂರ್ಣ ಅರ್ಥವನ್ನೂಕೊಡುತ್ತಿವೆ. ಆದ್ದರಿಂದಲೇ ವಾಕ್ಯಎನಿಸಿವೆ.

ಅಂದರೆ ಸಂಪೂರ್ಣ ಅರ್ಥವನ್ನು ಕೊಡುವ ಪದಗಳ ಗುಂಪಿಗೆ ವಾಕ್ಯ ಅನ್ನಬಹುದು.

Similarly, when the words join together, they get the shape of a sentence. But such words should be joined systematically and meaningfully. Then alone we may consider them as a sentence.

For example:

is boy a Rama.

There are four words in the above sentence. But they are not giving the full meaning. Because they are not formed properly so that the above sentence is not meaningful. Such group of words cannot be considered as sentence when we say-

Rama is a boy.

It gives the full meaning. Because the words are joined properly and also meaningfully. Such group of words alone deserve to call as a “Sentence”.

So we may define that the sentence is the group of words which are arranged properly and meaningfully.

ಅಭ್ಯಾಸ (Exercise):

1. 'ಪದ' ಅಂದರೇನು? ಅದಕ್ಕಿರುವ ಇನ್ನೊಂದು ಹೆಸರೇನು?

2. ಪದಹಾಗೂ ವರ್ಣಗಳಿಗಿರುವ ತಾರತಮ್ಮ ಏನು?

3. ವಾಕ್ಯ ಅಂದರೇನು?

4. ಪದಕ್ಕೂ, ವಾಕ್ಯಕ್ಕೂಇರುವ ತಾರ ತಮ್ಯ ಏನು?

5. ಭಾಷೆಯ ಮಾಧ್ಯಮ ಯಾವುದು?

6. ಸುಸಜ್ಜಿತ ಪದಗಳಿಂದ ಕೂಡಿದ ವಾಕ್ಯಗಳಿಗೆ ಐದು ಉದಾಹರಣೆಗಳನ್ನು ಕೊಡಿ.




Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...